ಮುಂಬೈ :ಶನಿವಾರ ಟೆಸ್ಟ್ ನಾಯಕತ್ವವನ್ನು ತ್ಯಜಿಸಿದ ನಂತರ ವಿರಾಟ್ ಕೊಹ್ಲಿ ಭಾರತ ತಂಡದ ಎಲ್ಲಾ ಮಾದರಿಯ ನಾಯಕತ್ವವನ್ನು ತ್ಯಜಿಸಿದಂತಾಗಿದೆ. ಈ 7 ವರ್ಷಗಳಲ್ಲಿ ಕೊಹ್ಲಿಯ ಸಾಧನೆ, ಏಳು ಬೀಳುಗಳನ್ನೆಲ್ಲಾ ತುಂಬಾ ಹತ್ತಿರದಿಂದ ಗಮನಿಸಿರುವ ಅವರ ಪತ್ನಿ ಅನುಷ್ಕಾ ಶರ್ಮಾ, ತಾವು ಕಂಡ ಪತಿ ಕೊಹ್ಲಿ ಅವರು ಮೈದಾನದಲ್ಲಿ ಎದುರಿಸಿದ ಸವಾಲುಗಳು ಮತ್ತು ಭಾರತೀಯ ಕ್ರಿಕೆಟ್ ಮುನ್ನಡೆಸಿದ ಪಯಣವನ್ನು ಸುದೀರ್ಘ ಬರಹದ ಮೂಲಕ ಹಂಚಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಜೊತೆಗಿನ ಫೋಟೋವೊಂದರ ಜೊತೆ ದೀರ್ಘವಾದ ಬರಹವನ್ನು ಅನುಷ್ಕಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 2014ರಲ್ಲಿ ಎಂಎಸ್ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ನೀವು ಭಾರತ ತಂಡದ ನಾಯನಾಗಿ ನೇಮಕವಾದ ವಿಷಯ ತಿಳಿಸಿದ್ದು ನನಗೆ ಇನ್ನೂ ನೆನಪಿದೆ.
ಅಂದು ಎಂಎಸ್, ನೀವು ಮತ್ತು ನಾನು ಮಾತನಾಡಿದ್ದು ಮತ್ತು ನಿಮ್ಮ ಗಡ್ಡ ಇಷ್ಟು ಬೇಗನೆ ಬೂದು ಬಣ್ಣಕ್ಕೆ ತಿರುಗುತ್ತಿದೆ ಎಂದು ಅವರು ನಿಮ್ಮನ್ನ ತಮಾಷೆ ಮಾಡಿದ್ರು. ಅಂದು ನಾವೆಲ್ಲರೂ ಚೆನ್ನಾಗಿ ನಕ್ಕಿದ್ದೆವು. ಅಂದಿನಿಂದ ಕೇವಲ ನಿಮ್ಮ ಗಡ್ಡ ಬೂದು ಬಣ್ಣಕ್ಕೆ ತಿರುಗುವುದಕ್ಕಿಂತಲೂ ಹೆಚ್ಚು ನಾನು ನಿಮ್ಮ ಬೆಳವಣಿಯನ್ನು ನೋಡಿದ್ದೇನೆ. ನಿಮ್ಮ ಜೊತೆ ಮತ್ತು ನಿಮ್ಮೊಳಗೆ ಆದಂತಹ ಆ ಅಪಾರ ಬೆಳವಣಿಗೆ ಕಂಡಿದ್ದೇನೆ.
ಭಾರತ ಕ್ರಿಕೆಟ್ ತಂಡದ ನಾಯಕನಾಗಿ ನಿಮ್ಮ ಬೆಳವಣಿಗೆ ಮತ್ತು ಭಾರತ ತಂಡ ನಿಮ್ಮ ನಾಯಕತ್ವದಲ್ಲಿ ಮಾಡಿರುವ ಸಾಧನೆಗಳಿಗೆಲ್ಲಾ ನಾನು ಹೆಮ್ಮೆ ಪಡುತ್ತೇನೆ. ಆದರೆ, ಅದಕ್ಕಿಂತಲೂ ನೀವು ನಿಮ್ಮೊಳಗೆ ಸಾಧಿಸಿದ ಬೆಳವಣಿಗೆಯ ಬಗ್ಗೆ ನಾನು ಹೆಚ್ಚು ಹೆಮ್ಮೆಪಡುತ್ತೇನೆ ಎಂದು ಅನುಷ್ಕಾ ಪತಿ ಕೊಹ್ಲಿ ನಾಯಕತ್ವದ ಯಶಸ್ಸಿನ ಹಾದಿ ವಿವರಿಸಿದ್ದಾರೆ.
ವಿರಾಟ್ ತಂಡವನ್ನು ಮುನ್ನೆಡೆಸುವಾಗ ಗೆಲುವಿಗಾಗಿ ತಮ್ಮ ಶಕ್ತಿಯನ್ನೆಲ್ಲಾ ದಾರೆಯರೆದಿದ್ದೀರಿ ಎಂದು ಅನುಷ್ಕಾ ಹೇಳಿದ್ದಾರೆ."ಕೆಲವು ಸೋಲುಗಳ ನಂತರ ನಾನು ನಿಮ್ಮ ಕಣ್ಣುಗಳಲ್ಲಿ ನೀರು ಬರುವ ಸಂದರ್ಭದಲ್ಲಿ ನಿಮ್ಮ ಪಕ್ಕದಲ್ಲಿ ಕುಳಿತಿದ್ದೇನೆ. ಆದರೆ, ನೀವು ಆಗ ತಂಡಕ್ಕಾಗಿ ಇನ್ನೂ ಏನಾದರೂ ಮಾಡಬಹುದಿತ್ತು ಎಂದು ಆಲೋಚನೆಯಲ್ಲಿರುತ್ತಿದ್ದಿರಿ.
ಇದು ನೀವು ಯಾರೆಂದು ಸೂಚಿಸುತ್ತದೆ ಮತ್ತು ಇಂತಹದನ್ನೇ ನೀವು ಪ್ರತಿಯೊಬ್ಬರಿಂದಲೂ ನಿರೀಕ್ಷಿಸುತ್ತೀರಿ. ನೀವು ಅಸಾಮಾನ್ಯ ಮತ್ತು ನೇರವಾಗಿ ಮಾತನಾಡುವವರಾಗಿದ್ದಿರಿ. ಈ ರೀತಿಯ ತೋರ್ಪಡಿಸುವಿಕೆಯ ಗುಣ ನಿಮ್ಮ ವೈರಿಯಾಗಿತ್ತು. ಆದರೆ, ಇದು ನನ್ನ ಮತ್ತು ನಿಮ್ಮ ಅಭಿಮಾನಿಗಳ ದೃಷ್ಟಿಯಲ್ಲಿ ನಿಮ್ಮನ್ನು ಶ್ರೇಷ್ಠರನ್ನಾಗಿ ಮಾಡಿದೆ ಎಂದು ಕೊಹ್ಲಿ ನೇರ -ನಿಷ್ಠುರ ಗುಣವನ್ನು ಶ್ಲಾಘಿಸಿದ್ದಾರೆ.
ತಮ್ಮ ಮಗಳು ವಮಿಕಾ ಬಗ್ಗೆಯೂ ಈ ಲೇಖನದಲ್ಲಿ ತಿಳಿಸಿದ್ದು, ವಮಿಕಾ ಕೂಡ ತನ್ನ ತಂದೆಯ ಬಗ್ಗೆ ಹೆಮ್ಮೆ ಪಡುತ್ತಾಳೆ. ಏಕೆಂದರೆ, ಈ ಎಲ್ಲದರ ಹಿಂದೆ ನಿಮ್ಮ ಶುದ್ಧ, ಕಲಬೆರಕೆ ಇಲ್ಲದ ಉದ್ದೇಶಗಳು ಯಾವಾಗಲೂ ನಿಮ್ಮ ಆಲೋಚನೆಯಲ್ಲಿರುತ್ತಿದ್ದೆವು. ಪ್ರತಿಯೊಬ್ಬರು ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ನಾನು ಹೇಳಿದಂತೆ ನಿಮ್ಮನ್ನು ತಿಳಿದುಕೊಳ್ಳಲು ಪ್ರಯತ್ನಿಸಿದವರು ನಿಜವಾಗಿಯೂ ಧನ್ಯರು.
'ನಾನು ಹೇಳಿದಂತೆ, ನಿಮ್ಮ ಕಣ್ಣುಗಳನ್ನು ನೋಡಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವವರು ನಿಜವಾಗಿಯೂ ಧನ್ಯರು. ನೀವು ಪರಿಪೂರ್ಣರಲ್ಲ. ನೀವೂ ಕೂಡ ನ್ಯೂನತೆಗಳನ್ನು ಹೊಂದಿದ್ದೀರಿ. ಆದರೆ, ನೀವು ಅದನ್ನು ಯಾವಾಗ ಮರೆಮಾಚಲು ಪ್ರಯತ್ನಿಸಿದ್ದೀರಿ? ಎಂದು ಪ್ರಶ್ನಿಸಿರುವ ಅನುಷ್ಕಾ, 'ನೀವು ಕಠಿಣವಾದರೂ ಯಾವಾಗಲೂ ಸರಿಯಾದ ಕೆಲಸವನ್ನೇ ಮಾಡಿದ್ದೀರಿ. ನೀವು ದುರಾಶೆಯಿಂದ ಏನನ್ನೂ ಪಡೆದಿಲ್ಲ. ಈ ಸ್ಥಾನವೂ ಕೂಡ (ನಾಯಕತ್ವ) ಅದು ನನಗೆ ತಿಳಿದಿದೆ. ಏಕೆಂದರೆ ಒಬ್ಬರು ಇನ್ನೊಬ್ಬರನ್ನು ತುಂಬಾ ಬಿಗಿಯಾಗಿ ಹಿಡಿದಾಗ ತಮ್ಮೊಳಗಿನ ಭಾರದ ಮಿತಿಯನ್ನು ಕಡಿಮೆ ಮಾಡಿಕೊಳ್ಳಲು ಯತ್ನಿಸುತ್ತಾರೆ. ನೀವು ನನ್ನನ್ನು ಅಪರಿಮಿತವಾಗಿ ಪ್ರೀತಿಸುತ್ತೀರಿ. ನಿಮ್ಮ ಈ 7 ವರ್ಷಗಳ ಕಲಿಕೆಯನ್ನು ನಮ್ಮ ಮಗಳು ನಿಮ್ಮೊಳಗೆ ನೋಡುತ್ತಾಳೆ' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಭಾರತ ಟೆಸ್ಟ್ ತಂಡದ ನಂಬರ್ 1 ನಾಯಕ ಕೊಹ್ಲಿಯ ದಾಖಲೆಗಳ ವಿವರ..