ಕರ್ನಾಟಕ

karnataka

ETV Bharat / sports

ಐಪಿಎಲ್ ಜಗತ್ತಿನ ಶ್ರೇಷ್ಠ ಲೀಗ್.. ಆದರೆ ಈ ವಿಚಾರದಲ್ಲಿ ಮಾತ್ರ ಪಿಎಸ್​ಎಲ್ ಬೆಸ್ಟ್​: ರಿಯಾಜ್

ಆರಂಭದಿಂದಲೂ ಪಿಎಸ್​ಎಲ್ ಭಾಗವಾಗಿರುವ ವಹಾಬ್​ ಇಂಡಿಯನ್ ಪ್ರೀಮಿಯರ್ ಲೀಗ್, ಪಾಕಿಸ್ತಾನ ಪ್ರೀಮಿಯರ್​ ಲೀಗ್​ಗಿಂತ ಹೇಗೆ ವಿಭಿನ್ನವಾಗಿದೆ ಎಂಬುದರ ಬಗ್ಗೆ ತಮ್ಮದೇ ಆದ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ವಹಾಬ್ ರಿಯಾಜ್
ವಹಾಬ್ ರಿಯಾಜ್

By

Published : May 15, 2021, 6:16 PM IST

ನವದೆಹಲಿ: ವಿಶ್ವ ಕ್ರಿಕೆಟ್​ನಲ್ಲಿ ತನ್ನದೇ ಆದ ಚಾಪು ಮೂಡಿಸಿರುವ ಐಪಿಎಲ್ ಟಿ-20 ಲೀಗ್​ಗಳಲ್ಲೇ ಅತ್ಯುತ್ತಮ ಲೀಗ್​, ಅದರ ಜೊತೆ ಬೇರೆ ಲೀಗ್​ಗಳನ್ನು ಹೋಲಿಕೆ ಮಾಡುವುದಕ್ಕೂ ಆಗುವುದಿಲ್ಲ ಎಂದು ಪಾಕಿಸ್ತಾನದ ವೇಗಿ ವಹಾಬ್​ ರಿಯಾಜ್​ ಹೇಳಿದ್ದಾರೆ.

ಆರಂಭದಿಂದಲೂ ಪಿಎಸ್​ಎಲ್ ಭಾಗವಾಗಿರುವ ವಹಾಬ್​ ಇಂಡಿಯನ್ ಪ್ರೀಮಿಯರ್ ಲೀಗ್, ಪಾಕಿಸ್ತಾನ ಪ್ರೀಮಿಯರ್​ ಲೀಗ್​ಗಿಂತ ಹೇಗೆ ವಿಭಿನ್ನವಾಗಿದೆ ಎಂಬುದರ ಬಗ್ಗೆ ತಮ್ಮದೇ ಆದ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಐಪಿಎಲ್‌ನಲ್ಲಿ ವಿವಿಧ ರಾಷ್ಟ್ರಗಳ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಆಡುವ ಟಾಪ್ ಆಟಗಾರರು ಬಂದು ಆಡುತ್ತಾರೆ. ನೀವು ಐಪಿಎಲ್ ಜೊತೆ ಪಿಎಸ್‌ಎಲ್‌ ಹೋಲಿಕೆ ಮಾಡಲಾಗುವುದಿಲ್ಲ. ಅವರ ಬದ್ಧತೆಗಳು, ಲೀಗ್​ ನಡೆಸುವ ರೀತಿ, ಸಂವಹನ ನಡೆಸುವ ರೀತಿ, ಆಟಗಾರರನ್ನು ಖರೀದಿಸುವ ರೀತಿ ಸಂಪೂರ್ಣ ವಿಭಿನ್ನವಾಗಿದೆ. ನನ್ನ ಪ್ರಕಾರ ವಿಶ್ವದ ಯಾವುದೇ ಕ್ರಿಕೆಟ್ ಲೀಗ್‌ಗಳು ಐಪಿಎಲ್‌ ಜೊತೆ ಸ್ಪರ್ಧಿಸಲಾರವು. ಆದರೆ, ಅದರ ಹಿಂದಿನ ಸ್ಥಾನದಲ್ಲಿ ಯಾವುದಾದರೂ ಲೀಗ್​ ಇದೆ ಎಂದರೆ, ಅದು ಪಿಎಸ್​ಎಲ್​. ಅದನ್ನು ಪಾಕಿಸ್ತಾನ ಲೀಗ್​ ಈಗಾಗಲೇ ನಿರೂಪಿಸಿದೆ ಎಂದು ರಿಯಾಜ್ ಕ್ರಿಕೆಟ್ ಪಾಕಿಸ್ತಾನ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಆದರೆ, ಬೌಲಿಂಗ್ ಗುಣಮಟ್ಟದ ವಿಚಾರದಲ್ಲಿ ಪಿಎಸ್​ಎಲ್ ವಿಶ್ವದ ಯಾವುದೇ ಲೀಗ್​ಗಳಿಗಿಂತ ಉತ್ತಮವಾಗಿದೆ. ಬೌಲಿಂಗ್ ಯುನಿಟ್​ನಲ್ಲಿ ಐಪಿಎಲ್​ಗಿಂತಲೂ ಪಿಎಸ್​ಎಲ್​ ಉತ್ತಮವಾಗಿದೆ. ಆದ್ದರಿಂದಲೇ ನೀವು ಇತರ ಲೀಗ್​ನಂತೆ ಪಿಎಸ್​ಎಲ್​ನಲ್ಲಿ ದೊಡ್ಡ ಮೊತ್ತದ ಆಟವನ್ನು ಕಾಣಲು ಸಾಧ್ಯವಿಲ್ಲ ಎಂದು ರಿಯಾಜ್ ಹೇಳಿದ್ದಾರೆ.

ಇದನ್ನು ಓದಿ:ಟೆಸ್ಟ್​ ಕ್ರಿಕೆಟ್ ಆಡುವುದನ್ನು ನಿಲ್ಲಿಸಲು ಸ್ಟಾರ್ ಇಂಡಿಯನ್ ಬೌಲರ್ ನಿರ್ಧಾರ

ABOUT THE AUTHOR

...view details