ಫ್ಲೋರಿಡಾ (ಅಮೆರಿಕ):ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತದ ಆರಂಭಿಕ ಜೋಡಿ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಯಶಸ್ವಿ ಜೈಸ್ವಾಲ್ ಮತ್ತು ಶುಭ್‌ಮನ್ ಗಿಲ್ ಮೊದಲ ವಿಕೆಟ್ಗೆ 165 ರನ್ ಜೊತೆಯಾಟ ನೀಡಿದ್ದು ಪಂದ್ಯವನ್ನು ಭಾರತ 9 ವಿಕೆಟ್ ಗಳಿಂದ ಗೆದ್ದುಕೊಂಡಿದೆ. ಆದರೆ ಮೊದಲ ವಿಕೆಟ್ನ ಜೊತೆಯಾಟಕ್ಕೆ ಇನ್ನೂ 1 ರನ್ ಸೇರಿದ್ದರೆ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆರಂಭಿಕ ಜೋಡಿ ಎಂಬ ದಾಖಲೆಯ ಪುಟ ಸೇರುತ್ತಿತ್ತು.
ಸದ್ಯ ಅತಿ ಹೆಚ್ಚು ಜೊತೆಯಾಟದ ಆರಂಭಿಕ ಜೋಡಿಗಳ ಪಟ್ಟಿಯಲ್ಲಿ ಜಂಟಿಯಾಗಿ ಮೊದಲ ಸ್ಥಾನವನ್ನು ರೋಹಿತ್ ಶರ್ಮಾ, ಕೆ.ಎಲ್.ರಾಹುಲ್ ಅವರೊಂದಿಗೆ ಇವರು ಹಂಚಿಕೊಂಡಿದ್ದಾರೆ. ರಾಹುಲ್ ಮತ್ತು ರೋಹಿತ್ ಶರ್ಮಾ 2017ರಲ್ಲಿ ಇಂದೋರ್‌ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 165 ರನ್‌ಗಳ ಜೊತೆಯಾಡಿದ್ದರು. ಧವನ್ ಮತ್ತು ಶರ್ಮಾ ಐರ್ಲೆಂಡ್ ಮೇಲೆ 160 ರನ್,ನ್ಯೂಜಿಲೆಂಡ್ ಮೇಲೆ 158 ರನ್ ಗಳಿಸಿತ್ತು. ರಾಹುಲ್ ಮತ್ತು ಶರ್ಮಾ ಅಫ್ಘಾನಿಸ್ಥಾನದ ವಿರುದ್ಧ 140 ರನ್ ಗಳಿಸಿದ್ದರು. ಇದು ಭಾರತದ ಆರಂಭಿಕ ಜೋಡಿಯ ಐದು ಪ್ರಮುಖ ಜೊತೆಯಾಟವಾಗಿದೆ.