ಕರ್ನಾಟಕ

karnataka

ETV Bharat / sports

ನೆಟ್ಸ್​ನಲ್ಲಿ ಆರ್​ಸಿಬಿ ನಾಯಕ ಕೊಹ್ಲಿಗೆ ಬೌಲಿಂಗ್ ಮಾಡಲು ಒಪ್ಪದ ಕೈಲ್ ಜಮೀಸನ್! ಕಾರಣ? - ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್

ಆರ್​ಸಿಬಿ ಆಲ್​ರೌಂಡರ್ ಕ್ರಿಶ್ಚಿಯನ್​ ಈ ಕೂತೂಹಲಕಾರಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಬರೋಬ್ಬರಿ 15 ಕೋಟಿ ರೂಗಳಿಗೆ ಆರ್​ಸಿಬಿ ಸೇರಿರುವ ಜೇಮಿಸನ್ ತಮ್ಮೊಂದಿಗೆ ಇಂಗ್ಲೆಂಡ್​ನಲ್ಲಿ ಜೂನ್ 18ರಂದು ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವಿನ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ನಲ್ಲಿ ಬಳಸುವ ಕೆಲವು ಡ್ಯೂಕ್ ಚೆಂಡನ್ನು ತಂದಿದ್ದಾರೆ.

ವಿರಾಟ್ ಕೊಹ್ಲಿ ಕೈಲ್ ಜಮೀಸನ್
ವಿರಾಟ್ ಕೊಹ್ಲಿ ಕೈಲ್ ಜಮೀಸನ್

By

Published : Apr 29, 2021, 8:26 PM IST

ಅಹ್ಮದಾಬಾದ್​: ಚೊಚ್ಚಲ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ಎದುರು ಬದುರಾಗಲಿವೆ. ಕಿವೀಸ್ ತಂಡದ ಕೈಲ್ ಜೆಮೀಸನ್ ಕೂಡ ಆರ್​ಸಿಬಿ ಬಳಗದಲ್ಲಿದ್ದು, ಇದರ ಲಾಭ ಪಡೆಯಲು ವಿರಾಟ್​ ಕೊಹ್ಲಿ ಮಾಡಿದ ಪ್ರಯತ್ನ ವಿಫಲವಾಗಿದೆ.

ಆರ್​ಸಿಬಿ ಆಲ್​ರೌಂಡರ್ ಕ್ರಿಶ್ಚಿಯನ್​ ಈ ಕೂತೂಹಲಕಾರಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಬರೋಬ್ಬರಿ 15 ಕೋಟಿ ರೂಗಳಿಗೆ ಆರ್​ಸಿಬಿ ಸೇರಿರುವ ಜೇಮಿಸನ್ ತಮ್ಮೊಂದಿಗೆ ಇಂಗ್ಲೆಂಡ್​ನಲ್ಲಿ ಜೂನ್ 18ರಂದು ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವಿನ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ನಲ್ಲಿ ಬಳಸುವ ಕೆಲವು ಡ್ಯೂಕ್ ಚೆಂಡನ್ನು ತಂದಿದ್ದಾರೆ.

ಇದನ್ನು ಗಮನಿಸಿದ ಆರ್​ಸಿಬಿ ನಾಯಕ ಕೊಹ್ಲಿ ನೆಟ್ಸ್​ನಲ್ಲಿ ಬ್ಯಾಟಿಂಗ್ ಮಾಡುವ ವೇಳೇ ಡ್ಯೂಕ್​ ಚೆಂಡಿನಲ್ಲಿ ತಮಗೆ ಬೌಲಿಂಗ್ ಮಾಡಲು ಕೇಳಿದ್ದಕ್ಕೆ ಕಿವೀಸ್​ ಬೌಲರ್ ಕೊಹ್ಲಿ ಟ್ರಿಕ್ಸ್​ ಅರಿತು ನಿರಾಕರಿಸಿದರೆಂದು ಕ್ರಿಶ್ಚಿಯನ್ ಹೇಳಿದ್ದಾರೆ.

" ವಿರಾಟ್‌ನಿಂದ ಸಾಕಷ್ಟು ಮುಂಜಾಗ್ರತೆಯುಳ್ಳವರು, ನಾವು ಇಲ್ಲಿಗೆ ಬಂದ ಮೊದಲ ವಾರದಲ್ಲಿಯೇ, ನಾವು ಮೂವರು ನೆಟ್‌ಟ್ಸ್​ ಬಳಿ ಕುಳಿತಿದ್ದ ಅವರಿಬ್ಬರು ಟೆಸ್ಟ್ ಕ್ರಿಕೆಟ್ ಬಗ್ಗೆ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ವಿರಾಟ್​," ಜೆಮಿ(ಕೈಲ್ ಜೆಮೀಸನ್) ಡ್ಯೂಕ್ ಚೆಂಡಿನಲ್ಲಿ ನೀವು ಹೆಚ್ಚಾಗಿ ಬೌಲಿಂಗ್ ಮಾಡುತ್ತೀರಾ? ಎಂದು ಕೇಳಿದರು.

ಅದಕ್ಕೆ ಜೆಮೀಸನ್, ಹೌದು, ನನ್ನ ಬಳಿ ಒಂದೆರಡು ಇವೆ, ನಾನೆಲ್ಲೇ ಹೋದರು ಮೊದಲು ಆ ಚೆಂಡುಗಳಿಂದ ಬೌಲಿಂಗ್ ಮಾಡುತ್ತೇನೆ ಎಂದರು. ನಂತರ ವಿರಾಟ್​, ಓ, ನೀವು ನನ್ನ ವಿರುದ್ಧ ನೆಟ್ಸ್​ನಲ್ಲಿ ಬೌಲಿಂಗ್ ಮಾಡ್ತೀರಾ, ನಾನು ನಿಮ್ಮನ್ನು ಎದುರಿಸುವುದಕ್ಕೆ ತುಂಬಾ ಖುಷಿಯಿದೆ" ಎಂದರು.

ಇದಕ್ಕೆ ಜೇಮೀಸನ್, ನಾನು ನಿಮಗೆ ಬೌಲಿಂಗ್ ಮಾಡುವುದಕ್ಕೆ ಅವಕಾಶವೇ ಇಲ್ಲ! ಎಂದು ನಗುತ್ತಾ ಹೇಳುವ ಮೂಲಕ ವಿರಾಟ್​ ತಂತ್ರವನ್ನು ವಿಫಲಗೊಳಿಸಿದರೆಂದು ಕ್ರಿಶ್ಚಿಯನ್ ಸಂದರ್ಶನದ ವೇಳೆ ತಿಳಿಸಿದ್ದಾರೆ.

ಇದನ್ನು ಓದಿ:ಜಡೇಜಾ ವಿಶ್ವದ ನಂಬರ್ 1 ಆಟಗಾರನಾಗುವತ್ತ ಸಾಗುತ್ತಿದ್ದಾರೆ: ಸುರೇಶ್ ರೈನಾ

ABOUT THE AUTHOR

...view details