ಲಂಡನ್ನ ಓವಲ್ನಲ್ಲಿ ಜೂನ್ 7 ರಿಂದ ಜೂನ್ 11 ರವರೆಗೆ (ಜೂನ್ 12 ಮೀಸಲು ದಿನ) ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗಾಗಿ ಬಿಸಿಸಿಐ ನವೀಕರಿಸಿದ ತಂಡವನ್ನು ಪ್ರಕಟಿಸಿದೆ. ಕೆಎಲ್ ರಾಹುಲ್ ಅವರ ತೊಡೆಯ ಗಾಯದ ಕಾರಣ, ಅವರ ಸ್ಥಾನಕ್ಕೆ ಇಶಾನ್ ಕಿಶನ್ ಅವರನ್ನು ತಂಡದಲ್ಲಿ ನೇಮಿಸಲಾಗಿದೆ. ಕೆಎಸ್ ಭರತ್ ನಂತರದ ಎರಡನೇ ವಿಕೆಟ್ ಕೀಪರ್ ಆಗಿ ಕಿಶನ್ ಕಾರ್ಯನಿರ್ವಹಿಸಲಿದ್ದಾರೆ.
ಹೆಚ್ಚುವರಿಯಾಗಿ, ಬಿಸಿಸಿಐ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಮೂವರು ಸ್ಟ್ಯಾಂಡ್ಬೈ ಆಟಗಾರರನ್ನು ಹೆಸರಿಸಿದೆ, ಅವರೆಂದರೆ ಸೂರ್ಯಕುಮಾರ್ ಯಾದವ್, ಮುಖೇಶ್ ಕುಮಾರ್ ಮತ್ತು ರುತುರಾಜ್ ಗಾಯಕ್ವಾಡ್. ಗಾಯಗಳು ಅಥವಾ ಅಲಭ್ಯತೆಯ ಸಂದರ್ಭದಲ್ಲಿ ಈ ಆಟಗಾರರು ತಂಡವನ್ನು ಸೇರುತ್ತಾರೆ.
ಸೂರ್ಯ ಕುಮಾರ್ ಯಾದವ್: ಇದುವರೆಗಿನ ಅವರ ಟೆಸ್ಟ್ ವೃತ್ತಿಜೀವನದಲ್ಲಿ, ಸೂರ್ಯಕುಮಾರ್ ಯಾದವ್ ಕೇವಲ ಒಂದು ಟೆಸ್ಟ್ ಪಂದ್ಯದಲ್ಲಿ ಕಾಣಿಸಿಕೊಂಡಿದ್ದಾರೆ, ಇದು ನಾಗ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿಯ ಸಂದರ್ಭದಲ್ಲಿ ಅವರ ಚೊಚ್ಚಲ ಪಂದ್ಯವಾಗಿತ್ತು. ಮೊದಲ ಇನ್ನಿಂಗ್ಸ್ನಲ್ಲಿ 8 ರನ್ ಗಳಿಸಿ ಯಾದವ್ ವಿಕೆಟ್ ಕೊಟ್ಟಿದ್ದರು. ನಂತರ ಆಸಿಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಮೂರು ಬಾರಿ ಡಕ್ ಆಗಿ ಟೀಕೆಗೆ ಗುರಿಯಾಗಿದ್ದರು. ಅವರು ಐಪಿಎಲ್ 2023 ರಲ್ಲಿ ತಮ್ಮ ಫಾರ್ಮ್ನ್ನು ಕಂಡುಕೊಂಡಿದ್ದಾರೆ. ಎರಡು 200+ ರನ್ ಚೇಸ್ಗಳಲ್ಲಿ ಸತತ ಎರಡು ಅರ್ಧಶತಕಗಳನ್ನು ಗಳಿಸಿ ಮತ್ತೆ ತಮ್ಮ ಆಕ್ರಮನಕಾರಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಮುಖೇಶ್ ಕುಮಾರ್: ಬಂಗಾಳದ ರಣಜಿ ಟ್ರೋಫಿ ಅಭಿಯಾನದ ಸಮಯದಲ್ಲಿ, ಮುಖೇಶ್ ಕುಮಾರ್ ಫೈನಲ್ಗೆ ಅವರ ಪ್ರಯಾಣದಲ್ಲಿ ಪ್ರಮುಖ ಪಾತ್ರ ವಹಿಸಿದರು. 29 ವರ್ಷ ವಯಸ್ಸಿನ ವೇಗಿ ಐದು ಪಂದ್ಯಗಳಲ್ಲಿ 22 ವಿಕೆಟ್ಗಳನ್ನು ಪಡೆದರು. ಇದರಲ್ಲಿ ವೈಯಕ್ತಿಕ ಅತ್ಯುತ್ತಮ 4/43 ಆಗಿತ್ತು. ಶೇಷ ಭಾರತಕ್ಕಾಗಿ ಇರಾನಿ ಕಪ್ನಲ್ಲಿ 2 ಇನ್ನಿಂಗ್ಸ್ಗಳಲ್ಲಿ 4 ವಿಕೆಟ್ಗಳನ್ನು ಪಡೆದಿದ್ದಾರೆ. ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ಗಾಗಿ ಆಡುತ್ತಿರುವ ಮುಕೇಶ್ 8 ಪಂದ್ಯಗಳಲ್ಲಿ ಯಾವುದೇ ಬೌಲಿಂಗ್ ಮಾಡಿಲ್ಲವಾದರೂ, ದೇಶೀಯ ಕ್ರಿಕೆಟ್ನ ಅಂಕಿಅಂಶ ಅವರನ್ನು ಡಬ್ಲ್ಯುಟಿಸಿ ಫೈನಲ್ಗೆ ಸೇರಿಸಿದೆ. ಘೋಷಿತ ತಂಡದ ಉನದ್ಕತ್ ಮತ್ತು ಉಮೇಶ್ ಯಾದವ್ ಗಾಯಕ್ಕೆ ತುತ್ತಾಗಿರುವುದರಿಂದ ಬ್ಯಾಕಪ್ ಆಗಿ ಮುಖೇಶ್ ಸ್ಥಾನ ಪಡೆದುಕೊಂಡಿದ್ದಾರೆ.