ಕರ್ನಾಟಕ

karnataka

By

Published : Jun 18, 2021, 8:03 PM IST

ETV Bharat / sports

WTC ಫೈನಲ್​​ ಪಂದ್ಯ: ಮಳೆಯಾಟಕ್ಕೆ ಮೊದಲ ದಿನದಾಟ ಸಂಪೂರ್ಣ ರದ್ದು

ಭಾರತ-ನ್ಯೂಜಿಲ್ಯಾಂಡ್​ ನಡುವಿನ ಐಸಿಸಿ ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್​ನ ಮೊದಲ ದಿನದಾಟ ಮಳೆಯಿಂದಾಗಿ ರದ್ದುಗೊಂಡಿದೆ.

WTC final
WTC final

ಸೌತಾಂಪ್ಟನ್​:ಭಾರತ-ನ್ಯೂಜಿಲ್ಯಾಂಡ್ ತಂಡಗಳ ನಡುವಿನ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ಮೊದಲ ದಿನದಾಟ ಸಂಪೂರ್ಣವಾಗಿ ಮಳೆಗೆ ಆಹುತಿಯಾಗಿದೆ. ಸೌತಾಂಪ್ಟನ್​ನಲ್ಲಿ ಬೆಳಗ್ಗೆಯಿಂದ ನಿರಂತರವಾಗಿ ಮಳೆ ಸುರಿದ ಕಾರಣ ಟಾಸ್​ ನಡೆಸಲು ಕೂಡ ಸಾಧ್ಯವಾಗಲಿಲ್ಲ. ಹೀಗಾಗಿ ಅಂಪೈರ್​ಗಳು ಮೊದಲ ದಿನದಾಟ ರದ್ದುಗೊಳಿಸಿ ಇದೀಗ ಘೋಷಿಸಿದ್ದಾರೆ. ಹೀಗಾಗಿ ಫೈನಲ್​ ಪಂದ್ಯ ನೋಡಲು ಕಾತುರರಾಗಿದ್ದ ಸಾವಿರಾರು ಕ್ರೀಡಾಭಿಮಾನಿಗಳಲ್ಲಿ ನಿರಾಸೆ ಉಂಟಾಗಿದೆ.

ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3:30ಕ್ಕೆ ಟಾಸ್​ ಆಗಬೇಕಾಗಿತ್ತು. ಆದರೆ ನಿರಂತರವಾಗಿ ಮಳೆ ಸುರಿದ ಕಾರಣ ಆರಂಭದಲ್ಲಿ ಮೊದಲ ಸೆಷನ್​ ರದ್ದು ಮಾಡಲಾಗಿತ್ತು. ಇದಾದ ಬಳಿಕ ಕೂಡ ಮಳೆರಾಯ ಬಿಡುವು ನೀಡದ ಕಾರಣ, ಊಟದ ವಿಶ್ರಾಂತಿ ಪಡೆದುಕೊಳ್ಳಲಾಗಿತ್ತು. ಇಷ್ಟಾದರೂ ಮಳೆ ಕರುಣೆ ತೋರಲಿಲ್ಲ. ಹೀಗಾಗಿ ಮೊದಲ ದಿನದಾಟವನ್ನ ಸಂಪೂರ್ಣವಾಗಿ ರದ್ದುಗೊಳಿಸಲಾಗಿದ್ದು, ನಾಳೆ ಪಂದ್ಯ ಆರಂಭಗೊಳ್ಳುವ ಸಾಧ್ಯತೆ ಇದೆ.

ಮಳೆಯಾಟಕ್ಕೆ ಮೊದಲ ದಿನದಾಟ ಬಲಿ

ಇದನ್ನೂ ಓದಿರಿ: ಮಹಿಳಾ ಟೆಸ್ಟ್​ ಕ್ರಿಕೆಟ್​: ಭಾರತ 231ಕ್ಕೆ ಆಲೌಟ್​, ಫಾಲೋಆನ್ ಹೇರಿದ ಇಂಗ್ಲೆಂಡ್​

ವಿಶ್ವಕಪ್​ಗೆ ಸಮಾನವಾಗಿ ಇದೇ ಮೊದಲ ಸಲ ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಆಡಿಸಲಾಗುತ್ತಿದ್ದು, ಇದರಲ್ಲಿ ಭಾರತ-ನ್ಯೂಜಿಲ್ಯಾಂಡ್ ತಂಡ ಮುಖಾಮುಖಿಯಾಗುತ್ತಿವೆ. ಚೊಚ್ಚಲ ಪ್ರಶಸ್ತಿ ಗೆಲ್ಲುವ ಉದ್ದೇಶದಿಂದ ಎರಡು ತಂಡಗಳು ಕಣಕ್ಕಿಳಿಯಲು ತಯಾರಿ ಮಾಡಿಕೊಂಡಿವೆ. ಆದರೆ ಮೊದಲ ದಿನವೇ ಮಳೆಯ ಕಾಟ ಶುರುವಾಗಿರುವ ಕಾರಣ, ಮುಂದಿನ ನಾಲ್ಕು ದಿನ ಯಾವ ರೀತಿಯಾಗಿ ಪಂದ್ಯ ನಡೆಯಲಿದೆ ಎಂಬ ಕುತೂಹಲ ಇದೀಗ ಕ್ರಿಕೆಟ್ ಪ್ರೇಮಿಗಳಲ್ಲಿ ಉಂಟಾಗಿದೆ.

WTC final

ABOUT THE AUTHOR

...view details