ಸೌತಾಂಪ್ಟನ್: ಭಾರತ ತಂಡ ಉತ್ತಮ ಮತ್ತು ಸಮತೋಲಿತ ದಾಳಿಯನ್ನು ಹೊಂದಿದೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಇಯಾನ್ ಚಾಪೆಲ್ ಅಭಿಪ್ರಾಯಪಟ್ಟಿದ್ದಾರೆ. ಆಲ್‌ರೌಂಡರ್ ರವೀಂದ್ರ ಜಡೇಜಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ನಲ್ಲಿ ಹೆಚ್ಚುವರಿ ಸ್ಪಿನ್ನರ್ ಆಗಿ ಆಡುವ ಅವಕಾಶ ಸೃಷ್ಟಿಸಿದ್ದಾರೆ. ಜೊತೆಗೆ ನಿರಂತರ ಸುಧಾರಣೆ ಕಾಣುತ್ತಿರುವ ಪಂತ್ ಆಟವನ್ನು ನೋಡುವುದಕ್ಕೆ ಎದುರು ನೋಡುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಸೌತಾಂಪ್ಟನ್‌ನ ಏಜಿಯಸ್ ಬೌಲ್‌ನಲ್ಲಿ ಜೂನ್ 18 ರಿಂದ ಭಾರತ ನ್ಯೂಜಿಲ್ಯಾಂಡ್ ವಿರುದ್ಧ WTC ಫೈನಲ್‌ನಲ್ಲಿ ಸೆಣಸಾಡಲಿದೆ. ಈ ಕುರಿತು ಆಸ್ಟ್ರೇಲಿಯಾದ ಮಾಜಿ ನಾಯಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನಾವು WTC ಫೈನಲ್‌ನಲ್ಲಿ ವಿಶ್ವದ ಇಬ್ಬರು ಅದ್ಭುತ ಬ್ಯಾಟ್ಸ್ಮನ್ಗಳು ಮುಖಾಮುಖಿಯನ್ನು ನಾವು ನೋಡುವುದು ಅದೃಷ್ಟವಾಗಿದೆ. ಕೇನ್ ವಿಲಿಯಮ್ಸನ್ ಒಬ್ಬ ಪರಿಣಾಮಕಾರಿ ಬ್ಯಾಟ್ಸ್ಮನ್. ಕೊಹ್ಲಿ ಒಬ್ಬ ಆಕ್ರಮಣಕಾರಿ ಆಟಗಾರ ಪ್ರಮುಖ ಪಂದ್ಯಗಳಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುವ ಪ್ರವೃತ್ತಿಯನ್ನು ಅವರು ಹೊಂದಿದ್ದಾರೆ ಎಂದು ಐಸಿಸಿ ತನ್ನ ಟ್ವಿಟರ್ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.