ಕರ್ನಾಟಕ

karnataka

ETV Bharat / sports

WTC ಫೈನಲ್​​​: ಪಂದ್ಯ ಆರಂಭಕ್ಕೂ ಮುನ್ನ ಕೊಹ್ಲಿ ಹೇಳಿದ್ರು ಈ ಮಾತು! - ಕ್ಯಾಪ್ಟನ್​ ವಿರಾಟ್​ ಕೊಹ್ಲಿ

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಫೈನಲ್ ಪಂದ್ಯ ಆರಂಭಗೊಳ್ಳುವುದಕ್ಕೂ ಕೆಲ ಗಂಟೆಗಳ ಮುಂಚಿತವಾಗಿ ಮಾತನಾಡಿರುವ ವಿರಾಟ್​ ಕೊಹ್ಲಿ, ಡ​ಬ್ಲ್ಯೂಟಿಸಿ ಫೈನಲ್​ ಪಂದ್ಯ ನಾವು ರಚನೆ ಮಾಡಿರುವ ಅತಿ ದೊಡ್ಡ ಮೈಲಿಗಲ್ಲು ಸೇರಲು ಇರುವ ಮತ್ತೊಂದು ಹಾದಿ ಎಂದು ತಿಳಿಸಿದ್ದಾರೆ.

Kohli
Kohli

By

Published : Jun 18, 2021, 3:49 PM IST

ಸೌತಾಂಪ್ಟನ್​:ಇಂದಿನಿಂದ ಭಾರತ-ನ್ಯೂಜಿಲ್ಯಾಂಡ್​​ ನಡುವೆ ಬಹುನಿರೀಕ್ಷಿತ ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯ ಆರಂಭಗೊಳ್ಳಲಿದೆ. ಅದಕ್ಕಾಗಿ ಉಭಯ ತಂಡಗಳು ಎಲ್ಲ ವಿಭಾಗಗಳಲ್ಲೂ ಸಜ್ಜುಗೊಂಡಿವೆ. ಪಂದ್ಯ ಆರಂಭಗೊಳ್ಳುವುದಕ್ಕೂ ಕೆಲ ಗಂಟೆಗಳ ಮುಂಚಿತವಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್​ ಕೊಹ್ಲಿ, ಡಬ್ಲ್ಯೂಟಿಸಿ ಫೈನಲ್​ ಪಂದ್ಯ ನಾವು ರಚನೆ ಮಾಡಿರುವ ಅತಿ ದೊಡ್ಡ ಮೈಲಿಗಲ್ಲು ಸೇರಲು ಇರುವ ಮತ್ತೊಂದು ಹಾದಿ ಎಂದು ತಿಳಿಸಿದ್ದಾರೆ.

ವಿರಾಟ್​ ಕೊಹ್ಲಿ ಮಾತನಾಡಿರುವ ವಿಡಿಯೋ ತುಣುಕೊಂದನ್ನು ಐಸಿಸಿ ವೆಬ್​ಸೈಟ್​ನಲ್ಲಿ ಪೋಸ್ಟ್ ಮಾಡಿದೆ. ಇದರಲ್ಲಿ ಮಾತನಾಡಿರುವ ಕೊಹ್ಲಿ, ಐಸಿಸಿ ಟೆಸ್ಟ್​ ಚಾಂಪಿಯನ್​ ಫೈನಲ್​ ನಮಗೆ ಅಂತಿಮವಲ್ಲ. ಆದರೆ ಟೆಸ್ಟ್​ ತಂಡವಾಗಿ ನಾವು ರಚನೆ ಮಾಡಿರುವ ಮೈಲುಗಲ್ಲು ಸೇರಲು ಇರುವ ಮತ್ತೊಂದು ಗುರಿಯಾಗಿದೆ ಎಂದಿದ್ದಾರೆ. ಕಳೆದ 7-8 ತಿಂಗಳಿಂದ ನಾವು ಆಡಿರುವ ಉತ್ತಮ ಕ್ರಿಕೆಟ್​ನಿಂದಲ್ಲ, ಬದಲಾಗಿ ಕಳೆದ 4-5 ವರ್ಷಗಳ ಕಠಿಣ ಪರಿಶ್ರಮದ ಫಲವಾಗಿ ನಾವು ಇಂತಹ ಕ್ರಿಕೆಟ್​ ಆಡಲು ಸಾಧ್ಯವಾಗುತ್ತಿದೆ. ವಿಶ್ವದ ಎಲ್ಲೆಡೆ ಟೆಸ್ಟ್ ಪಂದ್ಯ ಗೆಲ್ಲಲ್ಲು ನಾವು ಮಾಡಿಕೊಂಡಿರುವ ಬೌಲಿಂಗ್​ ಲೈನ್​ ಅಪ್​, ಬ್ಯಾಟಿಂಗ್ ಹಾಗೂ ಆಲ್​ರೌಂಡರ್​ ವಿಭಾಗ ಉತ್ತಮವಾಗಿರುವ ಕಾರಣ ನಾವು ಇದೀಗ ಫೈನಲ್​​ನಲ್ಲಿ ಆಡುತ್ತಿದ್ದೇವೆ ಎಂದರು.

ಇದನ್ನೂ ಓದಿರಿ: WTC ಫೈನಲ್​ನಲ್ಲಿ ಎದುರಾಳಿ ಕಟ್ಟಿಹಾಕಲು ವೇಗದ ಬೌಲಿಂಗ್​ ಬಗ್ಗೆ ಹೆಚ್ಚಿನ ಗಮನ: ವಿಲಿಯಮ್ಸನ್​

ಡಬ್ಲೂಟಿಸಿ ಫೈನಲ್​​ ಕೇವಲ ಒಂದು ಪಂದ್ಯವಾಗಿದ್ದು, ಇದಕ್ಕೆ ಸ್ವಲ್ಪ ಮಟ್ಟದಲ್ಲಿ ಹೆಚ್ಚಿನ ಮೌಲ್ಯ ಸೇರಿಸಲಾಗಿದೆ. ನಮಗೆ ಕಳೆದ ಐದು ವರ್ಷಗಳಲ್ಲಿ ಟೆಸ್ಟ್​​ ಪಂದ್ಯಗಳ ಮೌಲ್ಯ ಗೊತ್ತಾಗಿದ್ದು, ಹೀಗಾಗಿ ನಾವು ಅಗ್ರಸ್ಥಾನದಲ್ಲಿದ್ದೇವೆ ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details