ಸೌತಾಂಪ್ಟನ್:ಭಾರತ-ನ್ಯೂಜಿಲ್ಯಾಂಡ್ ತಂಡಗಳ ಮಧ್ಯೆ ಟೆಸ್ಟ್ ವಿಶ್ವ ಚಾಂಪಿಯನ್ ಫೈನಲ್ ಪಂದ್ಯ ನಡೆಯುತ್ತಿದ್ದು, ಇಂದು ಪಂದ್ಯದ ಕೊನೆಯ ದಿನವಾಗಿದೆ. ಇದರ ಮಧ್ಯೆ ಜಸ್ಪ್ರೀತ್ ಬುಮ್ರಾ ಮಾಡಿರುವ ಎಡವಟ್ಟುವೊಂದು ಇದೀಗ ತಮಾಷೆಗೆ ಕಾರಣವಾಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ಗೋಸ್ಕರ ಟೀಂ ಇಂಡಿಯಾ ಪ್ಲೇಯರ್ಸ್ಗೆ ವಿಶೇಷ ಜರ್ಸಿ ನೀಡಲಾಗಿದೆ. ಆದರೆ, ಮೈದಾನಕ್ಕಿಳಿಯುವ ವೇಳೆ ಬುಮ್ರಾ ಹಳೆಯ ಜರ್ಸಿ ಹಾಕಿಕೊಂಡು ತಮಾಷೆಗೆ ಕಾರಣವಾಗಿದ್ದಾರೆ. ಮಳೆಯ ಕಾರಣ ಕೊನೆಯ ದಿನವಾದ ಇಂದು ಕೂಡ ಪಂದ್ಯ ಸ್ವಲ್ಪ ತಡವಾಗಿ ಆರಂಭಗೊಳ್ತು. ಈ ವೇಳೆ ವೇಗಿ ಬುಮ್ರಾ ಹಳೆಯ ಜರ್ಸಿ ಹಾಕಿಕೊಂಡು ಮೈದಾನಕ್ಕೆ ಬಂದಿದ್ದು, ಒಂದು ಓವರ್ ಕೂಡ ಎಸೆದಿದ್ದಾರೆ. ಇದಾದ ಬಳಿಕ ತಕ್ಷಣವೇ ಡ್ರೆಸ್ಸಿಂಗ್ ರೂಂಗೆ ತೆರಳಿದ ಅವರು ಹೊಸ ಜರ್ಸಿ ಹಾಕಿಕೊಂಡು ಬಂದಿದ್ದಾರೆ.