ನವದೆಹಲಿ :ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಮುಂಬರುವ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ರೆಟ್ರೊ ಜರ್ಸಿ ತೊಟ್ಟು ಆಡಲಿದೆ.
ಜೂನ್ 18ರಿಂದ ಸೌತಾಂಪ್ಟನ್ನ ರೋಸ್ ಬೌಲ್ನಲ್ಲಿ WTC ಫೈನಲ್ ಪಂದ್ಯ ನಡೆಯಲಿದೆ. ಇದು ಚೊಚ್ಚಲ ಟೆಸ್ಟ್ ಚಾಂಪಿಯನ್ಶಿಪ್ ಆಗಿರುವುದರಿಂದ ಭಾರತ ತಂಡ 90ರ ದಶಕದಲ್ಲಿ ತೊಡುತ್ತಿದ್ದ ಜರ್ಸಿಯನ್ನು ತೊಡಲಿದೆ.
ಆಲ್ರೌಂಡರ್ ರವೀಂದ್ರ ಜಡೇಜಾ ತಮ್ಮ ಟ್ವಿಟರ್ನಲ್ಲಿ ಪೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು, '90ರ ದಶಕಕ್ಕೆ ಹಿಂತಿರುಗಿದಾಗ' ಎಂದು ಬರೆದು #lovingit #India ಹ್ಯಾಶ್ಟ್ಯಾಗ್ನೊಡನೆ ಹಂಚಿಕೊಂಡಿದ್ದಾರೆ.
ಜಡೇಜಾ ಧರಿಸಿರುವ ಸ್ವೆಟರ್ನಲ್ಲಿ ಕುತ್ತಿಗೆ ಬಾರ್ಡರ್ನಲ್ಲಿ ನೀಲಿ ಬಣ್ಣವಿದೆ. ಇದನ್ನು 90ರ ದಶಕದಲ್ಲಿ ಭಾರತೀಯ ಟೆಸ್ಟ್ ತಂಡದ ಆಟಗಾರರು ಖಾಯಂ ಆಗಿ ಧರಿಸುತ್ತಿದ್ದರು.
ಇದನ್ನು ಓದಿ: ಐಸಿಸಿ ಬಳಿ ಟಿ20 ವಿಶ್ವಕಪ್ ಕುರಿತ ಅಂತಿಮ ನಿರ್ಧಾರಕ್ಕೆ 1 ತಿಂಗಳ ಸಮಯ ಕೇಳಲು ಬಿಸಿಸಿಐ ನಿರ್ಧಾರ