ಕರ್ನಾಟಕ

karnataka

ETV Bharat / sports

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌: 5ನೇ ದಿನದಾಟದ ವೇಳೆ ಕಿವೀಸ್‌​ ಆಟಗಾರರಿಗೆ ನಿಂದನೆ - ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌

ರೋಸ್‌ ಬೌಲ್ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಕೆಲವು ಅಭಿಮಾನಿಗಳು ನ್ಯೂಜಿಲ್ಯಾಂಡ್​ ಆಟಗಾರರನ್ನು ನಿಂದಿಸಿದ್ದಾರೆ ಎನ್ನಲಾಗಿದೆ. ಈ ಘಟನೆಯನ್ನು ಅಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಅಭಿಮಾನಿಯೊಬ್ಬರು ಐಸಿಸಿ ಗಮನಕ್ಕೆ ತಂದಿದ್ದರು.

Fans Ejected At World Test Championship Final For Abusing New Zealand Players
ನ್ಯೂಜಿಲ್ಯಾಂಡ್​ ಆಟಗಾರರನ್ನು ನಿಂಧಿಸಿದ ಅಭಿಮಾನಿಗಳು

By

Published : Jun 23, 2021, 11:31 AM IST

ಸೌಥಾಂಪ್ಟನ್‌: ರೋಸ್‌ ಬೌಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್‌ ನಡುವಿನ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌(WTC) ಫೈನಲ್‌ ಹಣಾಹಣಿಯ 5ನೇ ದಿನವಾದ ಮಂಗಳವಾರ ಅಭಿಮಾನಿಗಳು ನ್ಯೂಜಿಲೆಂಡ್‌ ತಂಡದ ಕೆಲವು ಆಟಗಾರರನ್ನು ನಿಂದಿಸಿದ ಘಟನೆ ನಡೆದಿದೆ.

ಸ್ಟೇಡಿಯಂನಲ್ಲಿ ಪಂದ್ಯವನ್ನು ವೀಕ್ಷಿಸುತ್ತಿದ್ದ ಕೆಲವು ಅಭಿಮಾನಿಗಳು ಆಟಗಾರರನ್ನು ನಿಂದಿಸಿದ್ದಾರೆ ಎನ್ನಲಾಗಿದೆ. ಈ ಘಟನೆಯನ್ನು ಅಲ್ಲಿ ಪಂದ್ಯ ವಿಕ್ಷಿಸುತ್ತಿದ್ದ ಅಭಿಮಾನಿಯೊಬ್ಬ ಐಸಿಸಿ ಗಮನಕ್ಕೆ ತಂದಿದ್ದರು. ಇದರಿಂದ ಎಚ್ಚೆತ್ತುಕೊಂಡ ರೋಸ್‌ ಬೌಲ್‌ ಅಂಗಣದ ರಕ್ಷಣಾ ಸಿಬ್ಬಂದಿ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಇಬ್ಬರು ಪ್ರೇಕ್ಷಕರನ್ನು ಕ್ರೀಡಾಂಗಣದಿಂದ ಹೊರಗಡೆ ಕಳುಹಿಸಿದ್ದರು.

ಐಸಿಸಿ ಅಧಿಕಾರಿಗಳು ಈ ವಿಷಯವನ್ನು ಕೂಡಲೇ ಸ್ಟೇಡಿಯಂನ ರಕ್ಷಣಾ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ರಕ್ಷಣಾ ಸಿಬ್ಬಂದಿ ತಕ್ಷಣ ಗ್ಯಾಲರಿಯಲ್ಲಿದ್ದ ಆ ಇಬ್ಬರು ವ್ಯಕ್ತಿಗಳನ್ನು ಅಂಗಳದಿಂದ ಹೊರ ಕಳುಹಿಸಿದ್ದಾರೆ.

"ನಿಂದನೆಯಲ್ಲಿ ತೊಡಗಿದ್ದ ಇಬ್ಬರು ವ್ಯಕ್ತಿಗಳನ್ನು ಗುರುತಿಸಿ ಅಂಗಣದಿಂದ ಹೊರಗೆ ಕಳುಹಿಸಲಾಗಿದೆ. ಕ್ರಿಕೆಟ್‌ನಲ್ಲಿ ಈ ರೀತಿಯ ವರ್ತನೆಯನ್ನು ನಾವು ಸಹಿಸುವುದಿಲ್ಲ" ಎಂದು ಐಸಿಸಿ ಅಧಿಕಾರಿಯೊಬ್ಬರು ಟ್ವೀಟ್‌ ಮಾಡಿದ್ದಾರೆ.

ABOUT THE AUTHOR

...view details