ನವದೆಹಲಿ:ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಇನ್ನೆರಡು ದಿನ ಬಾಕಿ ಉಳಿದಿದೆ. ಸತತ ಎರಡನೇ ಬಾರಿಗೆ ಫೈನಲ್ ತಲುಪಿರುವ ಭಾರತ, ಬಲಿಷ್ಠ ಆಸ್ಟ್ರೇಲಿಯಾದೊಂದಿಗೆ ಸೆಣಸಾಡಲಿದೆ. ಕಳೆದ ಬಾರಿ ನ್ಯೂಜಿಲ್ಯಾಂಡ್ ಎದುರಿನ ಸೋಲಿನಿಂದಾಗಿ ಚಾಂಪಿಯನ್ ಪಟ್ಟದಿಂದ ವಂಚಿತವಾಗಿತ್ತು. ಈ ಬಾರಿ ಗೆದ್ದು ಟೈಟಲ್ ಮುಡಿಗೇರಿಸಿಕೊಳ್ಳಲು ಎದುರು ನೋಡುತ್ತಿದೆ.
ಜೂನ್ 7 ರಿಂದ 11 ರವರೆಗೆ ಲಂಡನ್‌ನ ಓವಲ್ ಮೈದಾನದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಡೆಯಲಿದ್ದು. ಉಭಯ ತಂಡಗಳು ಕಠಿಣ ಅಭ್ಯಾಸ ನಡೆಸುತ್ತಿವೆ. ಐಪಿಎಲ್ ಗುಂಗಿನಿಂದ ಹೊರಬರಲು ಭಾರತ ತಂಡದ ಎಲ್ಲ ಸದಸ್ಯರ ಬೆವರಿಳಿಸುತ್ತಿದ್ದಾರೆ. ಸಸೆಕ್ಸ್ನ ಅರುಂಡೆಲ್ ಕೌಂಟಿ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದ ತಂಡ ಭಾನುವಾರ ಓವಲ್ ಮೈದಾನಕ್ಕೆ ಆಗಮಿಸಿದ್ದು, ಅಲ್ಲಿಯೇ ಪ್ರಾಕ್ಟೀಸ್ ಮಾಡುತ್ತಿದೆ. ಮೈದಾನದಲ್ಲಿ ತಂಡದ ಕಸರತ್ತಿನ ಚಿತ್ರಗಳನ್ನು ಬಿಸಿಸಿಐ ಟ್ವೀಟ್ ಮಾಡಿಕೊಂಡಿದೆ.
ಆಸೀಸ್ ತಂಡ ಬೆಕೆನ್ಹ್ಯಾಮ್ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದು, ಸೋಮವಾರ ಓವಲ್ ಮೈದಾನಕ್ಕೆ ಆಗಮಿಸಲಿದೆ. ತಂಡದ ವೇಗಿ ಹೇಜಲ್ವುಡ್ ಗಾಯದಿಂದ ಫೈನಲ್ ತಪ್ಪಿಸಿಕೊಳ್ಳಲಿದ್ದು, ತಂಡಕ್ಕೆ ತುಸು ಹಿನ್ನಡೆ ಉಂಟಾಗಿದೆ. ವುಡ್ ಬದಲಿಗೆ ಮೈಕಲ್ ನೆಸರ್ ಸ್ಥಾನ ಪಡೆದಿದ್ದಾರೆ.
ಪಂದ್ಯ ಡ್ರಾ- ಟೈ ರದ್ದಾದರೆ ಟ್ರೋಫಿ ಯಾರಿಗೆ?:ಸತತ ಎರಡನೇ ಬಾರಿಗೆ ಭಾರತ ತಂಡ ಫೈನಲ್ ತಲುಪಿದೆ. ಕಳೆದ ಬಾರಿ ನ್ಯೂಜಿಲ್ಯಾಂಡ್ ವಿರುದ್ಧ 8 ವಿಕೆಟ್ಗಳಿಂದ ಸೋಲು ಅನುಭವಿಸಿತ್ತು. ಈ ಬಾರಿ ಆಸೀಸ್ ಎದುರಾಳಿಯಾಗಿದ್ದು, ಪಂದ್ಯ ಡ್ರಾ, ಟೈ ಮತ್ತು ರದ್ದಾದರೆ ಯಾವ ತಂಡವು ಚಾಂಪಿಯನ್‌ಶಿಪ್ ಟ್ರೋಫಿಯನ್ನು ಪಡೆಯುತ್ತದೆ ಎಂಬುದು ಕ್ರಿಕೆಟ್ ಅಭಿಮಾನಿಗಳ ಕುತೂಹಲದ ಪ್ರಶ್ನೆಯಾಗಿದೆ.