ಮುಂಬೈ:ಬಹುನಿರೀಕ್ಷಿತ ವುಮೆನ್ ಪ್ರೀಮಿಯರ್ ಲೀಗ್ (ವನಿತೆಯರ ಐಪಿಎಲ್)ನ ಮೆಗಾ ಹರಾಜು ಪ್ರಕ್ರಿಯೆ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯುತ್ತಿದ್ದು, 246 ಭಾರತೀಯ ಮತ್ತು ಒಟ್ಟು 409 ಆಟಗಾರ್ತಿಯರ ಹರಾಜು ನಡೆಯುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್, ಆರ್‌ಸಿಬಿ, ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಸ್ ಐದು ತಂಡಗಳು ಹರಾಜಿನಲ್ಲಿ ಆಟಗಾರರನ್ನು ಖರೀದಿಸಲಿದೆ. ಬಹುನಿರೀಕ್ಷಿತ ಸ್ಮೃತಿ ಮಂಧಾನ ಬೆಂಗಳೂರು ತಂಡದ ಪಾಲಾಗಿದ್ದು, ಕೌರ್ ಮುಂಬೈಗೆ ಬಿಕರಿಯಾಗಿದ್ದಾರೆ.
ಮೊದಲ ಸೆಟ್‌ನ ನಂತರ ಏಳು ಆಟಗಾರರು ಮಾರಾಟವಾಗಿದ್ಯುದು, ಆರ್‌ಸಿಬಿ ಸ್ಮೃತಿ ಮಂಧಾನ ಅವರಿಗೆ 3.40 ಕೋಟಿ, ನ್ಯೂಜಿಲ್ಯಾಂಡ್ ಸೋಫಿ ಡಿವೈನ್ 50 ಲಕ್ಷಕ್ಕೆ, ಆಸ್ಟ್ರೇಲಿಯಾದ ಎಲೆಸ್ ಪೆರ್ರಿ 1.70 ಕೋಟಿಗೆ, ವೇಗಿ ರೇಣುಕಾ ಸಿಂಗ್ ಆರ್‌ಸಿಬಿಗೆ 1.5 ಕೋಟಿಗೆ ಖರೀದಿಸಿದೆ. ಮಂಬೈ ಇಂಡಿಯನ್ಸ್ ಹರ್ಮನ್‌ಪ್ರೀತ್ ಕೌರ್ ಅವರನ್ನು 1.80 ಕೋಟಿ ರೂಗೆ, ಗುಜರಾತ್ ಜೈಂಟ್ಸ್ ಆಸ್ಟ್ರೇಲಿಯಾದ ಆಶ್ಲೀಗ್ ಗಾರ್ಡ್ನರ್ 3.20 ಕೋಟಿಗೆ, ಯುಪಿ ವಾರಿಯರ್ಸ್ ಇಂಗ್ಲೆಂಡ್‌ನ ಸೋಫಿ ಎಕ್ಲೆಸ್ಟೋನ್ 1.80 ಕೋಟಿಗೆ ಖರೀದಿಸಿದೆ. ವೆಸ್ಟ್ ಇಂಡೀಸ್‌ನ ಹೇಲಿ ಮ್ಯಾಥ್ಯೂಸ್ ಮಾರಾಟವಾಗದೇ ಉಳಿದಿದ್ದಾರೆ.
ಟೀ ಮ್ಯಾನೇಜ್ ಮೆಂಟ್ ಹೀಗಿದೆ: ಗುಜರಾತ್ ಜೈಂಟ್ಸ್: ರಾಚೆಲ್ ಹೇನ್ಸ್ (ಮುಖ್ಯ ಕೋಚ್), ನೂಶಿನ್ ಅಲ್ ಖದೀರ್ (ಬೌಲಿಂಗ್ ಕೋಚ್), ತುಷಾರ್ ಅರೋಥೆ (ಬ್ಯಾಟಿಂಗ್ ಕೋಚ್), ಮಿಥಾಲಿ ರಾಜ್ (ಮಾರ್ಗದರ್ಶಿ ಮತ್ತು ಸಲಹೆಗಾರ)
ಯುಪಿ ವಾರಿಯರ್ಜ್: ಜಾನ್ ಲೂಯಿಸ್ (ಮುಖ್ಯ ಕೋಚ್), ಅಂಜು ಜೈನ್ ಮತ್ತು ಆಶ್ಲೇ ನೋಫ್ಕೆ (ಸಹಾಯಕ ತರಬೇತುದಾರರು), ಲಿಸಾ ಸ್ಥಾಲೇಕರ್ (ಮಾರ್ಗದರ್ಶಿ)