ಕರ್ನಾಟಕ

karnataka

ETV Bharat / sports

WPL 2023: ಟಾಸ್​ ಗೆದ್ದು ಕ್ಷೇತ್ರ ರಕ್ಷಣೆ ಆಯ್ದುಕೊಂಡ ಗುಜರಾತ್ ಜೈಂಟ್ಸ್, ಅದ್ಧೂರಿ ಮನರಂಜನೆಯ ಆರಂಭ

ಡಬ್ಲ್ಯೂಪಿಎಲ್ ಮೊದಲ ಪಂದ್ಯದ ಟಾಸ್​ ಗೆದ್ದ ಗುಜರಾತ್ ಜೈಂಟ್ಸ್ ಫೀಲ್ಡಿಂಗ್​ ಆಯ್ಕೆ - ಬಾಲಿವುಡ್​ ತಾರೆಯರ ಅದ್ಧೂರಿ ಮನರಂಜನೆಯಿಂದ ಆರಂಭ - ಐದು ತಂಡದ ನಾಯಕಿಯರಿಂದ ಕಪ್​ ಅನಾವರಣ

ಸದಗ
ಸದಗಸ

By

Published : Mar 4, 2023, 7:48 PM IST

Updated : Mar 4, 2023, 8:06 PM IST

ಮುಂಬೈ (ಮಹಾರಾಷ್ಟ್ರ):ಬಹುನಿರೀಕ್ಷಿತ ಮಹಿಳೆಯರ ಪ್ರೀಮಿಯರ್ ಲೀಗ್ 2023 ಅದ್ಧೂರಿ ಮನರಂಜನಾ ಕಾರ್ಯಕ್ರಮಗಳಿಂದ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗುತ್ತಿದ್ದು, ಟಾಸ್ ​ಗೆದ್ದ ಗುಜರಾತ್​ ಪಡೆಯ ನಾಯಕಿ ಬೆತ್ ಮೂನಿ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಪಂಚ ತಂಡದ ನಾಯಕಿಯರು ಟಾಸ್​ಗೂ ಮೊದಲು ಕಪ್​ ಅನಾವರಣ ಮಾಡಿದರು.

ಮುಂಬೈ ಇಂಡಿಯನ್ಸ್ ಆಡುವ ತಂಡ:ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್​ ಕೀಪರ್), ಹರ್ಮನ್‌ಪ್ರೀತ್ ಕೌರ್ (ನಾಯಕಿ), ನ್ಯಾಟ್ ಸಿವರ್-ಬ್ರಂಟ್, ಅಮೆಲಿಯಾ ಕೆರ್, ಅಮನ್‌ಜೋತ್ ಕೌರ್, ಪೂಜಾ ವಸ್ತ್ರಾಕರ್, ಹುಮೈರಾ ಕಾಜಿ, ಇಸ್ಸಿ ವಾಂಗ್, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್

ಗುಜರಾತ್ ಜೈಂಟ್ಸ್ ಆಡುವ ತಂಡ: ಬೆತ್ ಮೂನಿ(ನಾಯಕಿ/ವಿಕೆಟ್​ ಕೀಪರ್​), ಸಬ್ಬಿನೇನಿ ಮೇಘನಾ, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡ್ನರ್, ಅನ್ನಾಬೆಲ್ ಸದರ್ಲ್ಯಾಂಡ್, ದಯಾಲನ್ ಹೇಮಲತಾ, ಜಾರ್ಜಿಯಾ ವೇರ್ಹ್ಯಾಮ್, ಸ್ನೇಹ ರಾಣಾ, ತನುಜಾ ಕನ್ವರ್, ಮೋನಿಕಾ ಪಟೇಲ್, ಮಾನ್ಸಿ ಜೋಶಿ

ಬಾಲಿವುಡ್​ ತಾರೆಯರಿಂದ ಮನರಂಜನೆ:ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ಕಿಯಾರಾ ಅಡ್ವಾಣಿ ಮತ್ತು ಕೃತಿ ಸನೋನ್ ಉದ್ಘಾಟನಾ ಸಮಾರಂಭದಲ್ಲಿ ಪ್ರಪಂಚದಾದ್ಯಂತದ ಅಭಿಮಾನಿಗಳನ್ನು ರಂಜಿಸಿದರು. ಖ್ಯಾತ ಗಾಯಕ ಎಪಿ ಧಿಲ್ಲೋನ್ ಅವರು ಸಂಭ್ರಮಾಚರಣೆಯಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಗೀತೆ ಹಾಡಿದ್ದಾರೆ. ಗಾಯಕ ಶಂಕರ್ ಮಹಾದೇವನ್, ನೀತಿ ಮೋಹನ್ ಮತ್ತು ಹರ್ದೀಪ್ ಕೌರ್ ಅವರ ಧ್ವನಿಯಲ್ಲಿ 'ಯೇ ತೋ ಬಾಸ್ ಶುರುವಾತಿ ಹೈ' ಡಬ್ಲ್ಯೂಪಿಎಲ್​ನ ಗೀತೆಗೆ ಟ್ವಿಟರ್​ನಲ್ಲಿ ಜಯ್​ ಶಾ ಬಿಡುಗಡೆ ಮಾಡಿದ್ದರು. ಎರಡು ನಿಮಿಷಗಳ ಈ ವಿಡಿಯೋದಲ್ಲಿ ದೀಪ್ತಿ ಶರ್ಮಾ, ಶೆಫಾಲಿ ವರ್ಮಾ ಸೇರಿದಂತೆ ಹಲವು ಕ್ರಿಕೆಟಿಗರು ಕಾಣಿಸಿಕೊಂಡಿದ್ದಾರೆ. ಮಹಿಳಾ ಕ್ರಿಕೆಟ್ ಬೆಳವಣಿಗೆಯನ್ನು ಗೀತೆಯಲ್ಲಿ ಚಿತ್ರಿಸಲಾಗಿದೆ.​

ಟೂರ್ನಿ ಮಾದರಿ ಹೇಗೆ? :ಡಬಲ್​ ರೌಂಡ್​ ರಾಬಿನ್​ ಮಾದರಿಯಲ್ಲಿ ಲೀಗ್​ ಹಂತದ ಪಂದ್ಯಗಳು ನಡೆಯಲಿದ್ದು, ಪ್ರತೀ ತಂಡ ಇರತ ನಾಲ್ಕು ತಂಡಗಳ ಒಟ್ಟಿಗೆ 2 ಬಾರಿ ಮುಖಾಮುಖಿಯಾಗಲಿದೆ. ಲೀಗ್​ ಹಂತದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ತಂಡ ನೇರವಾಗಿ ಫೈನಲ್​ ಪ್ರವೇಶಿಸಲಿದ್ದು, 2 ಮತ್ತು 3ನೇ ಸ್ಥಾನದಲ್ಲಿರುವ ತಂಡ ಎಲಿಮಿನೇಟರ್​ ಎದುರಿಸಲಿದೆ. ಎಲಿಮಿನೇಟರ್​ ಗೆದ್ದ ತಂಡ ಫೈನಲ್​ನಲ್ಲಿ ಸೆಣಸಲಿದೆ.

ಇದನ್ನೂ ಓದಿ:ಜೂನಿಯರ್​ಗಳಿಂದ ಕಲಿಯಲು ಇದೊಂದು ಉತ್ತಮ ವೇದಿಕೆ: ಹರ್ಮನ್​ಪ್ರಿತ್​ ಕೌರ್​

ಡಬ್ಲ್ಯೂಪಿಎಲ್​ನ್ನು ಐಪಿಎಲ್‌ಗೆ ಹೋಲಿಸಬಹುದಾಗಿದೆ. ಐಪಿಎಲ್​ ಬಿಸಿಸಿಐಗೆ ಭಾರಿ ಯಶಸ್ಸು ತಂದುಕೊಟ್ಟ ಟೂರ್ನಿಯಾಗಿದೆ. ಇದೇ ರೀತಿಯ ನಿರೀಕ್ಷೆಗಳೂ ಈ ಪಂದ್ಯಗಳ ಮೇಲೆ ಎಲ್ಲರಿಗಿದೆ. ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ಭಾರತವನ್ನು ಪ್ರತಿನಿಧಿಸಿದ್ದು, ಐಪಿಎಲ್​ ವೇದಿಕೆಯಿಂದಲೇ. ಹೀಗಾಗಿ ಮಹಿಳೆಯರ ಪ್ರೀಮಿಯರ್ ಲೀಗ್ ಮುಂದಿನ ದಿನಗಳಲ್ಲಿ ಭಾರತದಲ್ಲಿ ವನಿತೆಯರ ಕ್ರಿಕೆಟನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯಲಿದೆ ಎಂದು ನಂಬಲಾಗಿದೆ.

ಡಬ್ಲ್ಯೂಪಿಎಲ್​ನ ಉದ್ಘಾಟನಾ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್ ಮತ್ತು ಯುಪಿ ವಾರಿಯರ್ಸ್ ತಂಡಗಳು ಕಪ್​ಗಾಗಿ ಹಣಾಹಣಿ ನಡೆಸಲಿವೆ. ಲೀಗ್ ಹಂತದ ಅಂತಿಮ ಪಂದ್ಯವು ಯುಪಿ ವಾರಿಯರ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಮಾರ್ಚ್ 21 ರಂದು ಬ್ರಬೋರ್ನ್ ಸ್ಟೇಡಿಯಂ ನಡೆಯಲಿದೆ. ಮಾರ್ಚ್ 24 ರಂದು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಮಹಿಳೆಯರ ಪ್ರೀಮಿಯರ್ ಲೀಗ್ 2023 ರ ಫೈನಲ್ ಮಾರ್ಚ್ 26 ರಂದು ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇದನ್ನೂ ಓದಿ:ಐಸಿಸಿ ವಿಶ್ವಕಪ್ ಲೀಗ್ ಪಾಯಿಂಟ್ಸ್​ನಲ್ಲಿ ಅಗ್ರಸ್ಥಾನಕ್ಕೇರಿದ ಇಂಗ್ಲೆಂಡ್: ಇನ್ನೂ ಅರ್ಹತೆ ಪಡೆಯದ ತಂಡಗಳ ವಿವರ ಇಲ್ಲಿದೆ..

Last Updated : Mar 4, 2023, 8:06 PM IST

ABOUT THE AUTHOR

...view details