ಬೆಂಗಳೂರು:ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಲ್ಲಿಯವರೆಗೂ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿಲ್ಲ. ಆದರೆ, ಮುಂಬರುವ ಋತುಗಳಲ್ಲಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮುವಲ್ಲಿ ಯಶಸ್ವಿಯಾದರೆ ಅದರ ಶ್ರೇಯ ಎಬಿ ಡಿವಿಲಿಯರ್ಸ್ಗೂ ಸಲ್ಲುತ್ತದೆ ಎಂದು ತಂಡದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮನದಾಳ ಹಂಚಿಕೊಂಡರು.
ಕಳೆದ ನವೆಂಬರ್ ತಿಂಗಳಲ್ಲಿ ಎಲ್ಲ ಮಾದರಿಯ ಕ್ರಿಕೆಟ್ನಿಂದಲೂ ನಿವೃತ್ತಿ ಘೋಷಣೆ ಮಾಡಿರುವ ಎಬಿಡಿ, ಐಪಿಎಲ್ನಿಂದಲೂ ದೂರ ಉಳಿದಿದ್ದಾರೆ. 2011ರಲ್ಲಿ ಆರ್ಸಿಬಿ ತಂಡ ಸೇರಿಕೊಂಡಿದ್ದ ಅವರು 11 ಆವೃತ್ತಿಗಳಲ್ಲೂ ಬೆಂಗಳೂರು ತಂಡದ ಭಾಗವೇ ಆಗಿದ್ದರು. ಆದರೆ, ತಂಡ ಯಾವುದೇ ಆವೃತ್ತಿಯಲ್ಲೂ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಲಿಲ್ಲ.