ಕರ್ನಾಟಕ

karnataka

ETV Bharat / sports

ಜೈಪುರದಲ್ಲಿ ತಲೆ ಎತ್ತಲಿದೆ ವಿಶ್ವದ 3ನೇ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ.. ಇದರ ಸಾಮರ್ಥ್ಯ ಇಷ್ಟಿರುತ್ತೆ.. - ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ

ಅಹ್ಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ದಾಖಲೆ ಹೊಂದಿದ್ದರೆ, ಆಸ್ಟ್ರೇಲಿಯಾದ ಮೆಲ್ಬೋರ್ನ್​ ಕ್ರಿಕೆಟ್​ ಸ್ಟೇಡಿಯಂ 2ನೇ ಅತಿದೊಡ್ಡ ಕ್ರೀಡಾಂಗಣವಾಗಿದೆ..

third largest cricket stadium
ಕ್ರಿಕೆಟ್ ಸ್ಟೇಡಿಯಂ

By

Published : Jul 3, 2021, 4:00 PM IST

ಜೈಪುರ: ಜೈಪುರದಲ್ಲಿ ವಿಶ್ವದ ಮೂರನೇ ಅತಿ ದೊಡ್ಡ ಕ್ರಿಕೆಟ್​ ಸ್ಟೇಡಿಯಂ ನಿರ್ಮಾಣವಾಗಲಿದೆ. ಇದಕ್ಕಾಗಿ ಎಲ್ಲಾ ಸಿದ್ಧತೆ ಪೂರ್ಣಗೊಂಡಿದೆ. ಜೈಪುರ ಅಭಿವೃದ್ದಿ ಪ್ರಾಧಿಕಾರ ಸ್ಟೇಡಿಯಂಗೆ ಅಗತ್ಯವಾದ ಭೂಮಿಯನ್ನು ರಾಜಸ್ಥಾನ ಕ್ರಿಕೆಟ್ ಅಸೋಸಿಯೇಷನ್​ಗೆ ನೀಡಿದೆ.

ಜೈಪುರ ಅಭಿವೃದ್ಧಿ ಪ್ರಾಧಿಕಾರದ ಕಮಿಷನರ್​ ಗೌರವ್ ಗೋಯಲ್ ಆರ್​ಸಿಎ ಅಧ್ಯಕ್ಷ ವೈಭವ್ ಗೆಹ್ಲೋಟ್​ಗೆ ಜಾಗದ ಕಾಗದ ಪತ್ರಗಳನ್ನು ನೀಡಿದ್ದಾರೆ. ದೆಹಲಿ ರಸ್ತೆಯಲ್ಲಿರುವ ಚಾಂಪ್ ಹಳ್ಳಿಯಲ್ಲಿ ವಿಶ್ವದ 3ನೇ ದೊಡ್ಡ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗಲಿದೆ.

ಈ ಸ್ಟೇಡಿಯಂ 75,000 ಮಂದಿ ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ. ಇದು ಎರಡು ಹಂತದಲ್ಲಿ ನಿರ್ಮಾಣವಾಗಲಿದೆ. ಮೊದಲ ಹಂತದಲ್ಲಿ 45,000 ಜನರ ಸಾಮರ್ಥ್ಯದೊಂದಿಗೆ ನಿರ್ಮಿಸಲಾಗುವುದು ಮತ್ತು 2ನೇ ಹಂತದಲ್ಲಿ ಅದನ್ನು 30,000 ಜನರಿಗೆ ಸ್ಟೇಡಿಯಂ ಸಾಮರ್ಥ್ಯ ವಿಸ್ತರಿಸಲಾಗುವುದು ಎಂದು ವೈಭವ್ ಗೆಹ್ಲೋಟ್ ತಿಳಿಸಿದ್ದಾರೆ.

ಈ ಸ್ಟೇಡಿಯಂ 2.5 ವರ್ಷಗಳಿಂದ 3 ವರ್ಷಗಳವರೆಗೆ ಸುಮಾರು 100 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿದೆ. ಇದಕ್ಕಾಗಿ ಸುಮಾರು 650 ಕೋಟಿ ರೂಪಾಯಿಗಳು ವೆಚ್ಚವಾಗಲಿದೆ. ಮೊದಲ ಹಂತದಲ್ಲಿ 400 ಕೋಟಿ ರೂ. ಹೂಡಲಾಗುವುದು. ಇದಕ್ಕೆ ಬಿಸಿಸಿಐ 100 ಕೋಟಿ ರೂ. ಬಿಡುಗಡೆ ಮಾಡಿದೆ. ₹100 ಕೋಟಿ ಲೋನ್ ಪಡೆಯಲಾಗುತ್ತದೆ ಮತ್ತು ಕಾರ್ಪೊರೇಟ್ ಕಂಪನಿಗಳ ಮೂಲಕ ಆರ್​ಸಿಎ 90 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗುವುದು ಎಂದು ಗೆಹ್ಲೋಟ್ ತಿಳಿಸಿದ್ದಾರೆ.

ಈ ಹೊಸ ಸ್ಟೇಡಿಯಂನಲ್ಲಿ ಎರಡು ಅಭ್ಯಾಸದ ಮೈದಾನ, ಅಕಾಡೆಮಿ, ಕ್ಲಬ್ ಹೌಸ್​ ಹೋಟೆಲ್ ಮತ್ತು ಎಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣಗಳಲ್ಲಿ ಲಭ್ಯವಿರುವ ಎಲ್ಲಾ ಇತರ ಅತ್ಯಾಧುನಿಕ ಸೌಲಭ್ಯಗಳು ಇರಲಿವೆ ಎಂದು ತಿಳಿಸಿದ್ದಾರೆ.

ಅಹ್ಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ದಾಖಲೆ ಹೊಂದಿದ್ದರೆ, ಆಸ್ಟ್ರೇಲಿಯಾದ ಮೆಲ್ಬೋರ್ನ್​ ಕ್ರಿಕೆಟ್​ ಸ್ಟೇಡಿಯಂ 2ನೇ ಅತಿದೊಡ್ಡ ಕ್ರೀಡಾಂಗಣವಾಗಿದೆ.

ABOUT THE AUTHOR

...view details