ಹೈದರಾಬಾದ್: 2023ರ ವಿಶ್ವಕಪ್‌ನ ಕಾಲು ಭಾಗದಷ್ಟು ಪಂದ್ಯಗಳು ನಡೆದಿದೆ ಅಷ್ಟೇ. ಅಷ್ಟರಲ್ಲೇ ಎರಡು ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಬಲಿಷ್ಠ ತಂಡಗಳು ಎಂದು ಕರೆಸಿಕೊಳ್ಳುವ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕ ಕ್ರಮವಾಗಿ ಅಫ್ಘಾನಿಸ್ತಾನ, ನೆದರ್ಲೆಂಡ್ ಎದುರು ಸೋಲು ಕಂಡಿದೆ. ದೆಹಲಿಯ ಫಿರೋಜ್ ಶಾ ಕೋಟ್ಲಾ ಮತ್ತು ಧರ್ಮಶಾಲಾ ಮೈದಾನ ಈ ಫಲಿತಾಂಶಕ್ಕೆ ಸಾಕ್ಷಿಯಾಯಿತು.
ಕಳೆದ ಐದು ಪಂದ್ಯಗಳಲ್ಲಿ ಹರಿಣಗಳ ಪಡೆ 338, 416, 315, 428, 311 ರನ್ ಕಲೆಹಾಕಿತ್ತು. ನಿನ್ನೆ ಡಚ್ಚರು ನೀಡಿದ್ದ 246 ರನ್ನ ಗುರಿಯನ್ನು ಬೆನ್ನಟ್ಟಿದ ತಂಡ 207 ರನ್ಗೆ ಸರ್ವಪತನ ಕಂಡಿತು. ಕಳೆದ ಪಂದ್ಯಗಳಲ್ಲಿ ಶತಕಗಳನ್ನು ಸಿಡಿಸಿದ್ದ ಆಟಗಾರರು ಡಚ್ ಬೌಲಿಂಗ್ ಮುಂದೆ ಮಂಕಾಗಿದ್ದರು.
ಭಾರತದಲ್ಲಿ ಕ್ರಿಕೆಟ್ ಅನ್ನು ವೃತ್ತಿ ಪರವಾಗಿ ಆಡಲಾಗುತ್ತಿದೆ. ಆದರೆ, ನೆದರರ್ಲೆಂಡ್ನಲ್ಲಿ ಆ ರೀತಿ ಇನ್ನೂ ಕ್ರಿಕೆಟ್ ಬೆಳೆದಿಲ್ಲ. ನೆದರ್ಲೆಂಡ್ ಉತ್ತಮ ಸಾಕರ್ - ಆಡುವ ದೇಶ ಎಂದು ಕರೆಯಲ್ಪಡುತ್ತದೆ. ಅವರು 2014 ಫಿಫಾ ವಿಶ್ವಕಪ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದರು ಮತ್ತು 2010 ಫಿಫಾ ವಿಶ್ವಕಪ್‌ನಲ್ಲಿ ರನ್ನರ್ ಅಪ್ ಆಗಿದ್ದರು. ಡಚ್ಚರ ತಂಡ ಹಾಕಿಯಲ್ಲಿಯೂ ಉತ್ತಮವಾಗಿದೆ. ಆದರೆ, ಈ ಯುರೋಪಿಯನ್ ರಾಷ್ಟ್ರದ ಕೆಲವೇ ಆಟಗಾರರು ಕ್ರಿಕೆಟ್ ವೃತ್ತಿಪರವಾಗಿ ತೆಗೆದುಕೊಡಿಂದ್ದಾರೆ. ಟೆಸ್ಟ್ ಆಡುವ ತಂಡವನ್ನು ನೆದರ್ಲೆಂಡ್ ವಿಶ್ವಕಪ್‌ನಲ್ಲಿ ಮಣಿಸಿದ ಸಾಧನೆ ಮಾಡಿತು. ಈ ಸಮಯದಲ್ಲಿ ಗಮನಾರ್ಹ ವಿಷಯ ಎಂದರೆ 2022ರ ಟಿ20 ವಿಶ್ವಕಪ್‌ನಲ್ಲಿ ನೆದರ್ಲೆಂಡ್ ಹರಿಣಗಳ ಪಡೆಯನ್ನು ಹೊರಹಾಕಿತ್ತು.