ಕರ್ನಾಟಕ

karnataka

ETV Bharat / sports

ಆರನೇ ಬೌಲರ್​ ಕೊರತೆಯನ್ನು ವಿರಾಟ್​, ರೋಹಿತ್​, ಸೂರ್ಯ ನೀಗಿಸಬಲ್ಲರು: ರಾಹುಲ್​ ದ್ರಾವಿಡ್ - ವಿರಾಟ್​ ಕೊಹ್ಲಿ

ಕಳೆದ ಪಂದ್ಯಗಳಲ್ಲಿ ಐವರು ಪ್ರಮುಖ ಬೌಲರ್​ಗಳಿಂದಲೇ ತಂಡ ಯಶಸ್ಸು ಕಂಡಿದ್ದು, ಆರನೇ ಬೌಲರ್​ನ ಅವಶ್ಯಕತೆ ಬಿದ್ದಲ್ಲಿ ವಿರಾಟ್​ ಕೊಹ್ಲಿ ಮತ್ತು ಸೂರ್ಯಕುಮಾರ್​ ಯಾದವ್​ ಬೌಲಿಂಗ್​ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಕೋಚ್ ರಾಹುಲ್​ ದ್ರಾವಿಡ್​ ಹೇಳಿದ್ದಾರೆ.

Etv Bharat
Etv Bharat

By ETV Bharat Karnataka Team

Published : Nov 4, 2023, 10:04 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಆರನೇ ಆಯ್ಕೆ ಹಾರ್ದಿಕ್ ಪಾಂಡ್ಯ ಇದ್ದರು. ಆದರೆ ಅವರ ಅನುಪಸ್ಥಿತಿಯಲ್ಲಿ ಕಳೆದ ನಾಲ್ಕು ಪಂದ್ಯಗಳನ್ನು ಆಡಿದ್ದೇವೆ. ಆರನೇ ಆಯ್ಕೆಯಿಲ್ಲದೇ ನಾವು ವಿಶ್ವಕಪ್‌ಗೆ ಮೊದಲು ಆಸ್ಟ್ರೇಲಿಯಾ ಸರಣಿಯಲ್ಲಿ ಒಂದೆರಡು ಪಂದ್ಯಗಳನ್ನು ಆಡಿದ್ದೇವೆ ಎಂದು ಕೋಚ್​ ರಾಹುಲ್​ ದ್ರಾವಿಡ್​​ ದಕ್ಷಿಣ ಆಫ್ರಿಕಾದ ಮುಂದೆ ಕಳೆದ ಪಂದ್ಯದ ತಂಡವನ್ನೇ ಮುಂದುವರೆಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

ರಾಹುಲ್​ ದ್ರಾವಿಡ್​ಗೂ ಮುಂಚಿತವಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವುಮಾ, ವಿಶ್ವಕಪ್​ ವೇದಿಕೆಯಲ್ಲಿ ಭಾರತದ ವಿರುದ್ಧ ನಮ್ಮ ತಂಡದ ಬ್ಯಾಟರ್​ಗಳು ಉತ್ಸುಕರಾಗಿದ್ದಾರೆ ಎಂದು ಹೇಳಿಕೊಂಡಿದ್ದರು. ರಾಹುಲ್​ ಬಲಿಷ್ಠ ಬ್ಯಾಟಿಂಗ್​ ಬಲದ ಮುಂದೆ ಐವರು ಪ್ರಮುಖ ಬೌಲರ್​ಗಳನ್ನೇ ಪ್ರಯೋಗಿಸಲು ಮುಂದಾಗಿರುವುದಾಗಿ ಹೇಳಿಕೊಂಡಿದ್ದಾರೆ.

"ನಾವು ಮೊಹಾಲಿ ಮತ್ತು ಇಂದೋರ್‌ನಲ್ಲಿ ನಮ್ಮ ಎರಡು ಪಂದ್ಯಗಳನ್ನು ಗೆದ್ದಿದ್ದೇವೆ, ಆ ಪಂದ್ಯಗಳಲ್ಲಿ ನಾವು ಐದು ಬೌಲಿಂಗ್ ಆಯ್ಕೆಗಳೊಂದಿಗೆ ಮಾತ್ರ ಆಡಿದ್ದೇವೆ. ಆದ್ದರಿಂದ, ನಾವು ಆ ಸವಾಲಿಗೆ ನಿಜವಾಗಿಯೂ ಉತ್ತಮವಾಗಿ ಪ್ರತಿಕ್ರಿಯಿಸಿದ್ದೇವೆ. ಆರನೇ ಬೌಲಿಂಗ್​ ಅವಕಾಶ ಇಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ, ತಂಡ ಮತ್ತು ಆಟಗಾರರು ಈ ಹಿಂದೆ ಎಷ್ಟೋ ಪಂದ್ಯಗಳನ್ನು ಐವರು ಬೌಲರ್​ಗಳೊಂದಿಗೆ ಆಡಿದ್ದಾರೆ. ಅಲ್ಲದೇ ಉತ್ತಮ ಪ್ರದರ್ಶನವನ್ನೂ ನೀಡಿದ್ದಾರೆ. ಆರನೇ ಬೌಲಿಂಗ್​ ಇಲ್ಲದೆಯೂ ಆಡುವ ಸಾಮರ್ಥ್ಯ ತಂಡದಲ್ಲಿದೆ ಎಂದು ರಾಹುಲ್​ ದ್ರಾವಿಡ್​ ಹೇಳಿದ್ದಾರೆ.

ಆರನೇ ಬೌಲರ್ ಅನುಪಸ್ಥಿತಿಯಲ್ಲಿ, ವಿರಾಟ್ ಕೊಹ್ಲಿ ಮತ್ತು ಸೂರ್ಯ ಕುಮಾರ್ ಯಾದವ್ ಪ್ಲಾನ್ ಬಿ ಆಗಿರುತ್ತಾರೆ ಎಂದಿದ್ದಾರೆ." ನಮ್ಮಲ್ಲಿ ಪ್ರಮುಖ ಆರನೇ ಬೌಲಿಂಗ್​ ಅಸ್ತ್ರ ಇಲ್ಲ ಎಂದು ಕಾಣಬಹುದು. ಆದರೆ ಸ್ವಿಂಗ್​ ಮಾಡುವ ವಿರಾಟ್​ ತಂಡದಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ವಿರಾಟ್​ಗೆ ಬೌಲಿಂಗ್​ ಕೊಡಬೇಕು ಎಂದು ಪ್ರೇಕ್ಷಕರೇ ಒತ್ತಾಯಿಸಿದ್ದರು. ನಾವು ಬೌಲಿಂಗ್​ ಕೊಡುವ ಬಗ್ಗೆ ಯೋಚಿಸಿದ್ದೆವು. ಆದರೆ ಪಂದ್ಯ ಬೇಗ ಮುಗಿಯಿತು. ನಂತರ ನಾವು ಸೂರ್ಯನನ್ನು ಹೊಂದಿದ್ದೇವೆ, ಹಾಗೇ ನಾಯಕ ರೋಹಿತ್ ಶರ್ಮಾ ಸಹ ಬೌಲಿಂಗ್​ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಕೋಚ್​ ಮಾಹಿತಿ ನೀಡಿದ್ದಾರೆ.

ಸೂರ್ಯ ಕುಮಾರ್ ಯಾದವ್ ಅವರ ಸಾಮರ್ಥ್ಯ ಟಿ20 ಯಿಂದ ಏಕದಿನಕ್ಕೆ ಆದ ಪರಿವರ್ತನೆಯ ಬಗ್ಗೆ ಮಾತನಾಡಿದ ಅವರು,"ಏಕದಿನ ಕ್ರಿಕೆಟ್‌ನಲ್ಲಿ ಕ್ರೀಸ್​ನಲ್ಲಿ ಹೆಚ್ಚು ಸಮಯ ಕಳೆದರೆ ರನ್​ ಗಳಿಸಬಹುದು. ಈ ಬಗ್ಗೆ ಸೂರ್ಯ ಅರಿತುಕೊಂಡಿದ್ದಾರೆ. ಅವರು ದೇಶೀಯ ಕ್ರಿಕೆಟ್‌ನಲ್ಲಿ ತುಂಬಾ ಆಡಿದ್ದಾರೆ ಮತ್ತು 10 ವರ್ಷಗಳ ಕಾಲದ ಅನುಭವ ಇದೆ. ಪರಿಸ್ಥಿತಿಗೆ ಅನುಗುಣವಾಗಿ ಅನುಭವವನ್ನು ಬಳಸಿಕೊಂಡು ಆಡುತ್ತಾರೆ" ಎಂದರು.

"ನಾವು ಪ್ರತಿಯೊಂದು ವಿಭಾಗದಲ್ಲೂ ನಮ್ಮ ಕೌಶಲ್ಯಗಳನ್ನು ನಿಜವಾಗಿಯೂ ಉತ್ತಮವಾಗಿ ನಿರ್ವಹಿಸಿದ್ದೇವೆ. ನಾವು ನಮ್ಮ ಕೌಶಲ್ಯಗಳನ್ನು ನಿಯಂತ್ರಿಸಿ ಯಾರಾದರೂ ನಮ್ಮನ್ನು ಮೀರಿಸಿದರೆ ಮತ್ತು ನಮ್ಮನ್ನು ಸೋಲಿಸಿದರೆ, ಅದೃಷ್ಟ. ನಾವು ಅವರ ಕೈ ಕುಲುಕುತ್ತೇವೆ. ಆದರೆ, ನಾವು ಈ ಫಲಿತಾಂಶದ ಲೆಕ್ಕವನ್ನು ಇಟ್ಟುಕೊಂಡು ಆಡುತ್ತಿಲ್ಲ. ಮೊದಲು ಪಂದ್ಯಕ್ಕೆ ನಮ್ಮ ಸಂಪೂರ್ಣ ಶ್ರಮವನ್ನು ಹಾಕುತ್ತೇವೆ ನಂತರ ಅದೇ ಉತ್ತಮ ಫಲಿತಾಂಶವನ್ನು ನೀಡುತ್ತದೆ" ಎಂದು ದ್ರಾವಿಡ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ವಿಶ್ವಕಪ್​ನಲ್ಲಿ ವೇಗದ ಶತಕ ದಾಖಲಿಸಿದ ಫಖರ್ ಜಮಾನ್: ಹಸನ್ ಅಲಿಗೆ ಶತಕ ವಿಕೆಟ್​ ಸಂಭ್ರಮ

ABOUT THE AUTHOR

...view details