ಬೆಂಗಳೂರು:ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ ಕೊನೆಯ ಲೀಗ್ ಪಂದ್ಯದಲ್ಲಿ ನೆದರ್ಲ್ಯಾಂಡ್ ವಿರುದ್ಧ ಭಾರತ ಆರಾಮವಾಗಿ ಗೆಲುವು ಸಾಧಿಸಿದೆ. ವಿಶ್ವಕಪ್ ಪಂದ್ಯಾವಳಿಯ ನೆಚ್ಚಿನ ತಂಡವಾದ ಭಾರತವು ಸತತ ಒಂಬತ್ತು ಲೀಗ್ ಪಂದ್ಯಗಳನ್ನು ಗೆಲ್ಲಲು ಆಲ್ ರೌಂಡ್ ಪ್ರದರ್ಶನ ನೀಡಿತು. ನಿನ್ನೆ (ಭಾನುವಾರ) ನಡೆದ ನೆದರ್ರ್ಲೆಂಡ್ಸ್ ವಿರುದ್ಧದ ಪಂದ್ಯದುದ್ದಕ್ಕೂ ಉತ್ತಮ ಫೀಲ್ಡಿಂಗ್ ಮಾಡಿದ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ಗೆ ಪಂದ್ಯಶ್ರೇಷ್ಠ ಫೀಲ್ಡರ್ ಪ್ರಶಸ್ತಿ ಕೊಡಲಾಯಿತು.
ಸೂರ್ಯನನ್ನು ಅಪ್ಪಿಕೊಂಡು ಹುರಿದುಂಬಿಸಿದ ಆಟಗಾರರು:ಭಾರತದ ಪಂದ್ಯದ ನಂತರ ಪ್ರೇಕ್ಷಕರು, ಫೀಲ್ಡರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಯಾವಾಗ ನೀಡುತ್ತಾರೆ ಎಂದು ಕಾಯುತ್ತಾರೆ. ಈ ಪ್ರಶಸ್ತಿಯನ್ನು ಭಾರತೀಯ ಫೀಲ್ಡಿಂಗ್ ಕೋಚ್, ಅತ್ಯುತ್ತಮ ಫೀಲ್ಡಿಂಗ್ ಆಟಗಾರನಿಗೆ ಪ್ರದಾನ ಮಾಡಲಾಗುತ್ತದೆ. ನೆದರ್ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಸೂರ್ಯಕುಮಾರ್ ಯಾದವ್ಗೆ ಬೆಸ್ಟ್ ಫೀಲ್ಡರ್ ಪ್ರಶಸ್ತಿ ಘೋಷಣೆಯಾದ ತಕ್ಷಣವೇ ಎಲ್ಲಾ ಆಟಗಾರರು ಸೂರ್ಯ ಕುಮಾರ್ ಅವರನ್ನು ಅಪ್ಪಿಕೊಂಡು ಹುರಿದುಂಬಿಸಿದರು.
ಫೀಲ್ಡಿಂಗ್ ಆಫ್ ದಿ ಮ್ಯಾಚ್ ಫೀಲ್ಡರ್ಸ್ ಪ್ರಶಸ್ತಿಯನ್ನು ಪ್ರತಿ ಬಾರಿಯೂ ವಿಭಿನ್ನವಾಗಿ ಘೋಷಿಸಲಾಗುತ್ತದೆ. ಕೆಲವೊಮ್ಮೆ ಇದನ್ನು ಫ್ಲೈಯಿಂಗ್ ಕ್ಯಾಮೆರಾ ಮೂಲಕ ಘೋಷಿಸಲಾಗುತ್ತದೆ. ಇನ್ನೂ ಕೆಲವೊಮ್ಮೆ ಅದನ್ನು ಪ್ಲೇಯರ್ ಮೂಲಕ ಘೋಷಿಸಲಾಗುತ್ತದೆ. ಈ ಬಾರಿ ಎಂ. ಚಿನ್ನಸ್ವಾಮಿ ಮೈದಾನದ ಸಿಬ್ಬಂದಿ ಘೋಷಣೆ ಮಾಡಿದ್ದಾರೆ. ನಂತರ, ಸೂರ್ಯಕುಮಾರ್ ಯಾದವ್ ಸಿಬ್ಬಂದಿಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು.