ಕರಾಚಿ, ಪಾಕಿಸ್ತಾನ: ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ವಿಶ್ವಕಪ್ ಪಂದ್ಯ ಅಕ್ಟೋಬರ್ 15 ರ ಬದಲಿಗೆ ಅಕ್ಟೋಬರ್ 14 ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ. ತಮ್ಮ ಎರಡು ಪಂದ್ಯಗಳ ದಿನಾಂಕಗಳನ್ನು ಬದಲಾಯಿಸುವ ಐಸಿಸಿ ಮತ್ತು ಬಿಸಿಸಿಐ ಪ್ರಸ್ತಾಪಕ್ಕೆ ಪಿಸಿಬಿ ಒಪ್ಪಿಗೆ ನೀಡಿದೆ.
ಅಹಮದಾಬಾದ್‌ನಲ್ಲಿ ನವರಾತ್ರಿ ಹಬ್ಬದ ಮೊದಲ ದಿನದಂದು ಭದ್ರತಾ ನಿಯೋಜನೆಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಮರು ನಿಗದಿಪಡಿಸಬೇಕಾಯಿತು. ಐಸಿಸಿ ಮತ್ತು ಬಿಸಿಸಿಐ ಅಹಮದಾಬಾದ್‌ನಲ್ಲಿ ಭಾರತ ವಿರುದ್ಧದ ಪಂದ್ಯ ಸೇರಿದಂತೆ ತನ್ನ ಎರಡು ಗುಂಪಿನ ಪಂದ್ಯಗಳನ್ನು ಮರು ನಿಗದಿಪಡಿಸಲು ಪಿಸಿಬಿ ಸಂಪರ್ಕಿಸಿದ್ದೆವು. ಇನ್ನೂ ಕೆಲವು ಪಂದ್ಯಗಳನ್ನು ಮರುನಿಗದಿಗೊಳಿಸಿರುವುದರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಪರಿಷ್ಕೃತ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.
ಪಾಕಿಸ್ತಾನ ತಂಡವು ಇದೀಗ ಅಕ್ಟೋಬರ್ 12 ರ ಬದಲಿಗೆ ಅಕ್ಟೋಬರ್ 10 ರಂದು ಹೈದರಾಬಾದ್‌ನಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯ ಆಡಲಿದ್ದು, ಭಾರತದ ವಿರುದ್ಧದ ಪಂದ್ಯಕ್ಕೆ ಮೂರು ದಿನಗಳ ಮೊದಲೇ ಅವಕಾಶ ದೊರೆದಂತಾಗುತ್ತದೆ.
ICC ವಿಶ್ವಕಪ್ 2023 ಪಾಕಿಸ್ತಾನದ ಪ್ರಸ್ತುತ ವೇಳಾಪಟ್ಟಿ:
ಅಕ್ಟೋಬರ್ 6 - ಹೈದರಾಬಾದ್‌ನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ
ಅಕ್ಟೋಬರ್ 12 - ಹೈದರಾಬಾದ್‌ನಲ್ಲಿ ಶ್ರೀಲಂಕಾ ವಿರುದ್ಧ
ಅಕ್ಟೋಬರ್ 15 - ಅಹಮದಾಬಾದ್‌ನಲ್ಲಿ ಭಾರತ ವಿರುದ್ಧ