ಮುಂಬೈ (ಮಹಾರಾಷ್ಟ್ರ):2019ರ ವಿಶ್ವಕಪ್ ಸೆಮೀಸ್ ಸೋಲಿನಲ್ಲಿ ಈಗ ಆಡುತ್ತಿರುವ ತಂಡದ ಅರ್ಧದಷ್ಟು ಆಟಗಾರರು ಆಡಿರಲಿಲ್ಲ. ಭಾರತ ಮೊದಲ ವಿಶ್ವಕಪ್ ಗೆದ್ದಾಗ ಹೆಚ್ಚಿನ ಆಟಗಾರರು ಹುಟ್ಟಿರಲೇ ಇಲ್ಲ. ಹೀಗಾಗಿ ಹಿಂದಿನ ಲೆಕ್ಕಾಚಾರ ಮಾಡುವುದಕ್ಕಿಂತ ವರ್ತಮಾನದ ಕೆಲಸದ ಬಗ್ಗೆ ಚಿಂತಿಸುವುದು ಉತ್ತಮ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
"2011ರ ವಿಶ್ವಕಪ್ ಗೆದ್ದಾಗ ಈ ತಂಡದಲ್ಲಿದ್ದ ಅರ್ಧದಷ್ಟು ಆಟಗಾರರು ಆಡುತ್ತಿರಲಿಲ್ಲ. ಮೊದಲ ವಿಶ್ವಕಪ್ ಗೆದ್ದಾಗ ಕೆಲ ಆಟಗಾರರು ಹುಟ್ಟಿಯೇ ಇರಲಿಲ್ಲ. ಬೆಳೆಯುತ್ತಿರುವ ಯುವ ಆಟಗಾರರಲ್ಲಿ ನಾವು ಇಂದು ಏನಾಗುತ್ತಿದೆ, ನಾಳೆ ಏನಾಗಬೇಕು ಎಂಬ ಆಸಕ್ತಿಯನ್ನು ನೀಡಬೇಕು. ಅಲ್ಲದೇ ಆಟಗಾರನಾಗಿ ಪ್ರತಿಯೊಬ್ಬ ಏನು ಮಾಡಬೇಕು ಎಂಬುದರ ಬಗ್ಗೆ ಹೆಚ್ಚು ಕೇಂದ್ರೀಕರಿಸಬೇಕಾಗಿದೆ. ತಂಡಕ್ಕಾಗಿ ಏನನ್ನು ಮಾಡಬಲ್ಲರು ಎಂದು ನೋಡಬೇಕಿದೆ. ಗಮನ ಯಾವಾಗಲೂ ವರ್ತಮಾನದ ಮೇಲೆ ಇರುತ್ತದೆ. ಇದು ತುಂಬಾ ಒಳ್ಳೆಯದು ಎಂದು ನಾನು ನಂಬುತ್ತೇನೆ. ಈ ರೀತಿಯ ಪಂದ್ಯಾವಳಿಗೆ ಹೋಗುವಾಗ, ಮೊದಲನೆ ಆಟದಿಂದ, ನಾವು ಇಂದು ಏನನ್ನು ಸಾಧಿಸಬಹುದು ಎಂಬುದರ ಮೇಲೆ ಯಾವಾಗಲೂ ಗಮನ ಹರಿಸಬೇಕು. ಇಂದು ನೀವು ಏನನ್ನು ಸಾಧಿಸುತ್ತೀರೋ ಅದು ನಾಳೆ ನೀವು ಏನನ್ನು ಸಾಧಿಸಬಹುದು ಎಂಬುದಕ್ಕೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ, ನಮ್ಮಲ್ಲಿರುವ ಯುವ ಆಟಗಾರರು ಉತ್ತಮವಾಗಿ ಬೆಳೆಯುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ.
ಕುಲ್ದೀಪ್ ಯಾದವ್ ಅವರನ್ನು ತಂಡದ ಬಲ ಎಂದು ರೋಹಿತ್ ಹೇಳಿದ್ದಾರೆ. ಧರ್ಮಶಾಲಾದಲ್ಲಿ ಕಿವೀಸ್ ತಂಡಕ್ಕೆ ಕುಲ್ದೀಪ್ ಕಾಡಿದ್ದರು, ಅದೇ ವಿಶ್ವಾಸವನ್ನು ಮುಂದುವರೆಸುತ್ತಾರೆ ಎಂದು ಹೇಳಿದ್ದಾರೆ. "ಕುಲ್ದೀಪ್ ಅವರಿಗೆ ವಹಿಸಲಾದ ಕಾರ್ಯವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ ಮತ್ತು ಅವರ ಕಾರ್ಯಕ್ಷಮತೆಯಿಂದ ನಮಗೆ ತುಂಬಾ ಸಂತೋಷವಾಗಿದೆ. 2019 ರಲ್ಲಿ ನಾನು ನಾಯಕನಾಗಿರಲಿಲ್ಲ ಆದ್ದರಿಂದ ಈ ಸುತ್ತಲಿನ ಮಾತುಕತೆಗಳೊಂದಿಗೆ ನೇರ ಸಂಪರ್ಕದಲ್ಲಿರಲಿಲ್ಲ. ಆದರೆ, ಆಗಲೂ ಮತ್ತು ಈಗಲೂ ನನ್ನ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಹಾರ್ದಿಕ್ ಗಾಯಗೊಂಡಿದ್ದರಿಂದ ನಾವು ನಮ್ಮ ಸಂಯೋಜನೆಯನ್ನು ಸ್ವಲ್ಪ ಬದಲಾಯಿಸಬೇಕಾಗಿತ್ತು, ಆದರೆ ಪ್ರತಿಯೊಬ್ಬ ಆಟಗಾರನಿಗೆ ನಿಯೋಜಿಸಲಾದ ಪಾತ್ರಗಳು ಬದಲಾಗಿಲ್ಲ ಮತ್ತು ಅವರು ಆ ಪಾತ್ರಗಳಲ್ಲಿ ಸಮರ್ಥವಾಗಿ ಕೆಲಸ ಮಾಡಿದ್ದಾರೆ" ಎಂದು ಹೇಳಿದರು.
"ಇತರ ವಿಷಯಗಳ ಬಗ್ಗೆ ಯೋಚಿಸಲು ಬೇರೆ ಸಮಯ ಇದೆ. ಆದರೆ, ಕ್ರಿಕೆಟ್ ಬಗ್ಗೆ ಪ್ರತಿಕ್ಷಣವೂ ಯೋಚನೆ ಮಾಡುತ್ತೇನೆ. ನನ್ನ ಪ್ರಯಾಣದ ಬಗ್ಗೆ ಯೋಚಿಸಲು ನನಗೀಗ ಸಮಯವಿಲ್ಲ. ಬಹುಶಃ ನಾನು ನವೆಂಬರ್ 19ರ ನಂತರ ಅದನ್ನು ಮಾಡುತ್ತೇನೆ. ಆಶಾದಾಯಕವಾಗಿ, ಅದೃಷ್ಟವು ಧೈರ್ಯಶಾಲಿಗಳಿಗೆ ಒಲವು ತೋರುತ್ತದೆ " ಎಂದು ಅವರು ನಗುತ್ತಾ ಹೇಳಿದರು.