ಮುಂಬೈ (ಮಹಾರಾಷ್ಟ್ರ): ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ 2019ರ ವಿಶ್ವಕಪ್ ಆವೃತ್ತಿಗೆ ಹೋಲಿಸಿದರೆ ಹೆಚ್ಚಿನ ಅಪಾಯಗಳನ್ನು ತೆಗೆದುಕೊಳ್ಳಲು ಸಿದ್ಧರಿದ್ದಾರೆ ಎಂದು ಭಾರತದ ಮಾಜಿ ಆರಂಭಿಕ ಆಟಗಾರ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ ಮತ್ತು ಹಿಂದಿನ ಆವೃತ್ತಿಯ ಜೊತೆಗೆ ಈ ವರ್ಷದ ಪ್ರದರ್ಶನವನ್ನು ವಿಮರ್ಶಿಸಿದ್ದಾರೆ.
ಐಪಿಎಲ್ ವೇಳೆ ಗಾಯಕ್ಕೆ ತುತ್ತಾದ ಕೇನ್ ವಿಲಿಯಮ್ಸನ್ ವಿಶ್ವಕಪ್ ಹಿನ್ನೆಲೆಯಲ್ಲಿ ಹೆಚ್ಚಿನ ಶ್ರಮ ವಹಿಸಿ ಚೇತರಿಕೊಂಡು ವಿಶ್ವಕಪ್ ತಂಡದ ಜೊತೆಗೆ ಭಾರತಕ್ಕೆ ಪ್ರವಾಸ ಮಾಡಿದರು. ಆರಂಭದಲ್ಲಿ ಕೆಲ ಪಂದ್ಯಗಳನ್ನು ಆಡದೇ, ನಂತರ ಮೈದಾನಕ್ಕೆ ಮರಳಿದರು. ಆದರೆ, ಮತ್ತೆ ಹೆಬ್ಬೆರಳು ಮುರಿದಿದ್ದರಿಂದ ಕೆಲ ಪಂದ್ಯಗಳನ್ನು ಕಳೆದುಕೊಳ್ಳಬೇಕಾಯಿತು. ಇಷ್ಟೆಲ್ಲ ಆದರೂ ವಿಲಿಯಮ್ಸನ್ ಉತ್ತಮ ಫಾರ್ಮ್ನಲ್ಲಿದ್ದಾರೆ. 9 ಲೀಗ್ ಪಂದ್ಯದಲ್ಲಿ ಕೇವಲ 3 ಪಂದ್ಯವನ್ನು ಆಡಿರುವ ವಿಲಿಯಮ್ಸನ್ 3 ಅರ್ಧಶತಕ ಗಳಿಸಿದ್ದಾರೆ. ಒಂದು ಪಂದ್ಯದಲ್ಲಿ 95 ರನ್ಗಳಿಗೆ ವಿಕೆಟ್ ಕಳೆದಕೊಂಡಿದ್ದಾರೆ. 3 ಪಂದ್ಯದಿಂದ ಕೇನ್ 187 ರನ್ಗಳನ್ನು ಕಲೆಹಾಕಿದ್ದಾರೆ.
ಟೆಸ್ಟ್ನ ತಾಳ್ಮೆಯ ಬ್ಯಾಟಿಂಗ್ ಆಡುತ್ತಿದ್ದ ಕೇನ್ ಈಗ ತಮ್ಮ ಅಗ್ರೆಸಿವ್ ಬ್ಯಾಟಂಗ್ ಪ್ರದರ್ಶನ ನೀಡುತ್ತಿದ್ದಾರೆ. ವಿಶ್ವಕಪ್ನಲ್ಲಿ ಕೇನ್ 93.50 ಸರಾಸರಿ ಮತ್ತು 93.03ರ ರನ್ ರೇಟ್ ಹೊಂದಿದ್ದಾರೆ. ಅವರ ಮೂರು ಇನ್ನಿಂಗ್ಸ್ನಿಂದ 20 ಬೌಂಡರಿ ಮತ್ತು 3 ಸಿಕ್ಸ್ ಬಂದಿದೆ. ಈ ಬ್ಯಾಟಿಂಗ್ ಕಂಡ ಗವಾಸ್ಕರ್ ಓವರ್‌ಗೆ 6 ರನ್ ಗಳಿಸುವ ಉದ್ದೇಶದಿಂದ ಆಡುತ್ತಿದ್ದಾರೆ ಎಂದು ಹೇಳಿದ್ದಾರೆ.
"ಓವರ್‌ಗೆ ಆರು ರನ್‌ಗಳು ಯಾವುದೇ ಮಾನದಂಡದ ಪ್ರಕಾರ ಉತ್ತಮ ಸ್ಕೋರಿಂಗ್ ದರವಾಗಿದೆ. ಆದ್ದರಿಂದ ಕೇನ್ ವಿಲಿಯಮ್ಸನ್ ಅದನ್ನು ಮಾಡಲು ನೋಡುತ್ತಾರೆ. ಬೌಂಡರಿ ಹೊಡೆಯಲು ಸಾಧ್ಯ ಇರುವ ಬಾಲ್ ಬಂದಾಗ ಅದನ್ನು ಯಶಸ್ವಿಯಾಗಿ ತೆಗೆದುಕೊಳ್ಳುತ್ತಾರೆ. ಈ ಬಾರಿ ಈ ಇಂಟೆಂಟ್ನಿಂದ ಕೇನ್ ಬ್ಯಾಟಿಂಗ್ ಮಾಡುತ್ತಿರುವುದು ಎದುರಾಳಿಗೆ ಅಪಾಯಕಾರಿ ಆಗಿದೆ. 2019ರಲ್ಲಿ ಕೇನ್ ಬ್ಯಾಟಿಂಗ್ ಈ ರೀತಿಯಾಗಿ ನೋಡಿರಲಿಲ್ಲ. ಈ ವರ್ಷ ಕೇನ್ ಬೌಂಡರಿಗೆ ಹೆಚ್ಚು ನೋಡುತ್ತಿದ್ದಾರೆ. 95 ರನ್ ಗಳಿಸಿದ್ದಾಗ ಶತಕಕ್ಕೆ ಸಿಕ್ಸ್ ಹೊಡೆಯಲು ಪ್ರಯತ್ನಿಸಿ ಔಟ್ ಆದರು. ಕೇನ್ ಕುಲ್ದೀಪ್ ವಿರುದ್ಧವೂ ಇದೇ ಅಸ್ತ್ರವನ್ನು ಪ್ರಯೋಗಿಸುತ್ತಾರೆ" ಎಂದು ಭಾವಿಸುತ್ತೇನೆ ಎಂದಿದ್ದಾರೆ.
ಕುಲ್ದೀಪ್ ಯಾದವ್ ಭಾರತ ತಂಡಕ್ಕೆ ಇದುವರೆಗೂ ಒಂಬತ್ತು ಪಂದ್ಯಗಳಿಂದ 14 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ಮೊದಲ ಪವರ್ ಪ್ಲೇ ನಂತರ ರನ್ ಕಡಿವಾಣ ಹಾಕಿದ್ದಾರೆ. ಹಾಗೇ ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಸ್ಪಿನ್ನರ್ಗಳು ಭಾರತದ ಪಂದ್ಯಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ, ಹೀಗಾಗಿ ಸೆಮಿಫೈನಲ್‌ನಲ್ಲಿ ರೋಹಿತ್ಗೆ ಎದುರಾಳಿಗಳನ್ನು ಕಟ್ಟಿಹಾಕಲು ಇದು ಪ್ರಮುಖ ಅಂಶವಾಗಿದೆ. ವಿಲಿಯಮ್ಸನ್ ಅವರನ್ನು ಕುಲ್ದೀಪ್ ಚೆನ್ನಾಗಿ ನಿಭಾಯಿಸಬಲ್ಲರು ಎಂದು ಗವಾಸ್ಕರ್ ಹೇಳಿದ್ದಾರೆ.
"ವಿಲಿಯಮ್ಸನ್ ಕುಲ್ದೀಪ್ ವಿರುದ್ಧ ಉತ್ತಮವಾಗಿ ಆಟಬಲ್ಲ. ದೊಡ್ಡ ಬ್ರೇಕ್ ತೆಗೆದುಕೊಂಡು ತಂಡಕ್ಕೆ ಮರಳಿದ್ದಾರೆ. ಹಾಗೆ ಅವರಿಂದ ತಂಡದಲ್ಲಿ ದೊಡ್ಡ ವ್ಯತ್ಯಾಸ ಉಂಟುಮಾಡುವ ಸಾಮರ್ಥ್ಯವೂ ಇದೆ. ಯಾವುದೇ ಸ್ಥಾನದಲ್ಲಿ ಬಂದು ಬ್ಯಾಟಿಂಗ್ ಮಾಡಬಲ್ಲ ಆಟಗಾರ. ಕೇನ್ ಕುಲ್ದೀಪ್ ವಿರುದ್ಧ ಆಡುವ ಬಗ್ಗೆ ಗೊಂದಲಕ್ಕೊಳಗಾಗುತ್ತಾನೆ ಎಂದು ನಾನು ಭಾವಿಸುವುದಿಲ್ಲ. ಹೇಗೆ ಎದುರಿಸಬೇಕು ಎಂದು ತಿಳಿಯುತ್ತಾರೆ. ಒತ್ತಡ ಇದ್ದಲ್ಲಿ ಕುಲ್ದೀಪ್ ಬಾಲ್ ದಂಡಿಸದೇ ಬೇರೆ ಓವರ್‌ಗೆ ಕಾಯುತ್ತಾರೆ. ಆದರೆ, ಕುಲ್ದೀಪ್ ಕೇನ್ ವಿಲಿಯಮ್ಸನ್ ಮೇಲೆ ತಮ್ಮ ಹಿಡಿತ ಸಾಧಿಸಬಲ್ಲರು" ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:'ಸೆಮೀಸ್ ಹಂತದಲ್ಲಿ ಎಲ್ಲವೂ ಮೊದಲಿನಿಂದ ಆರಂಭವಾದಂತೆ, ಇಲ್ಲಿ ಏನು ಬೇಕಾದರೂ ಆಗಬಹುದು': ಕೇನ್ ವಿಲಿಯಮ್ಸನ್