ಕರ್ನಾಟಕ

karnataka

ETV Bharat / sports

ವಿಶ್ವಕಪ್‌ ಕ್ರಿಕೆಟ್: ಬಾಂಗ್ಲಾ ವಿರುದ್ಧದ ಪಂದ್ಯಕ್ಕೆ ಕೇನ್​ ವಿಲಿಯಮ್ಸನ್ ಕಣಕ್ಕೆ - icc world cup

ಬಾಂಗ್ಲಾ ವಿರುದ್ಧದ ನಾಳೆ ನಡೆಯಲಿರುವ ಪಂದ್ಯಕೆ ನ್ಯೂಜಿಲೆಂಡ್​ ನಾಯಕ ಕೇನ್​ ವಿಲಿಯಮ್ಸನ್​ ಮೈದಾನಕ್ಕಿಳಿಯಲಿದ್ದಾರೆ.

ಕೇನ್​ ವಿಲಿಯಮ್ಸನ್
ಕೇನ್​ ವಿಲಿಯಮ್ಸನ್

By ETV Bharat Karnataka Team

Published : Oct 12, 2023, 6:56 PM IST

ಹೈದರಾಬಾದ್​:ಫಿಟ್ನೆಸ್​ ಕಾರಣದಿಂದಾಗಿ ವಿಶ್ವಕಪ್​ ಕ್ರಿಕೆಟ್‌ನ ಆರಂಭಿಕ ಎರಡು ಪಂದ್ಯಗಳಿಂದ ಹೊರಗುಳಿದಿದ್ದ ನ್ಯೂಜಿಲೆಂಡ್​ ನಾಯಕ ಕೇನ್​ ವಿಲಿಯಮ್ಸನ್​ ಬಾಂಗ್ಲಾದೇಶ ವಿರುದ್ಧದ ಮುಂದಿನ ಪಂದ್ಯದಲ್ಲಿ ಆಡಲಿದ್ದಾರೆ. ಅಭ್ಯಾಸ ಪಂದ್ಯಗಳಲ್ಲಿ ಬ್ಯಾಟಿಂಗ್​ ಮಾಡಿದ್ದ ವಿಲಿಯಮ್ಸನ್​ ಫೀಲ್ಡಿಂಗ್​ಗೆ ಲಭ್ಯವಿರಲಿಲ್ಲ. ಹಾಲಿ ಚಾಂಪಿಯನ್ ಇಂಗ್ಲೆಂಡ್​ ಮತ್ತು ನೆದರ್ಲೆಂಡ್ ​ವಿರುದ್ಧದ ಪಂದ್ಯಗಳಿಂದ ಸಂಪೂರ್ಣವಾಗಿ ಅವರು ಹೊರಗುಳಿದಿದ್ದರು. ​​

ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಲಿಯಮ್ಸನ್, "ನನ್ನ ಗಾಯದ ಬಳಿಕ ಇದೊಂದು ಸುದೀರ್ಘ ಪ್ರಯಾಣವಾಗಿತ್ತು. ವಿಶ್ವಕಪ್ ತಂಡಕ್ಕೆ ಮರಳಲು ಕಾತರದಿಂದ ಎದುರು ನೋಡುತ್ತಿದ್ದೇನೆ. ಮುಂದಿನ ಪಂದ್ಯವನ್ನಾಡಲು ಬಹಳ ಉತ್ಸುಕನಾಗಿದ್ದೇನೆ. ಟಿಮ್​ ಕೂಡ ಚೇತರಿಸಿಕೊಳ್ಳುತ್ತಿದ್ದಾರೆ" ಎಂದು ತಿಳಿಸಿದರು.

2023ರ 16ನೇ ಆವೃತ್ತಿಯ ಐಪಿಎಲ್‌ ವೇಳೆ ಗಾಯಗೊಂಡಿದ್ದ ವಿಲಿಯಮ್ಸನ್​ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಏತನ್ಮಧ್ಯೆ ನಾಯಕನ ಅನುಪಸ್ಥಿತಿಯ ನಡುವೆಯೂ ​ಟಾಮ್​ ಲ್ಯಾಥಮ್ ನೇತೃತ್ವದ ​ತಂಡ ಆರಂಭಿಕ ಎರಡು ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಮುಂದಿನ ಪಂದ್ಯಕ್ಕೂ ​ಸೌಥಿ ಅಲಭ್ಯ:ತಂಡಕ್ಕೆಅನುಭವಿ ಆಟಗಾರ, ವೇಗಿ ಟೀಮ್​ ಸೌಥಿ ಅನುಪಸ್ಥಿತಿ ಮುಂದುವರೆಯಲಿದೆ. ಇಂಗ್ಲೆಂಡ್​ ವಿರುದ್ಧದ ಇತ್ತೀಚಿನ ಏಕದಿನ ಸರಣಿಯಲ್ಲಿ ಹೆಬ್ಬೆರಳ ಗಾಯಕ್ಕೆ ತುತ್ತಾಗಿರುವ ವೇಗಿ ಚೇತರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಬಾಂಗ್ಲಾ ಪಂದ್ಯಕ್ಕೂ ಅವರ ಅಲಭ್ಯತೆ ಕಾಡಲಿದೆ.

ಚೆನ್ನೈನ ಎಂ.ಚಿದಾಂಬರಂ ಮೈದಾನದಲ್ಲಿ ಬಾಂಗ್ಲಾ ವಿರುದ್ಧ ನ್ಯೂಜಿಲೆಂಡ್​ ತನ್ನ ಮೂರನೇ ಪಂದ್ಯ ಆಡಲಿದೆ. ನಾಯಕ ಶಕೀಬ್ ಅಲ್ ಹಸನ್ ನೇತೃತ್ವದ ತಂಡವನ್ನು ಮಣಿಸಿ ಅಗ್ರಸ್ಥಾನದ ಓಟ ಮುಂದುವರೆಸಲು ಕಿವೀಸ್​ ಯೋಜನೆ ರೂಪಿಸಿದೆ. ಮತ್ತೊಂದೆಡೆ, ಹಿಂದಿನ ಪಂದ್ಯದಲ್ಲಿ ಇಂಗ್ಲೆಂಡ್​ ವಿರುದ್ಧ ಸೋತಿರುವ ಬಾಂಗ್ಲಾ ಪುಟಿದೇಳಲು ಹವಣಿಸುತ್ತಿದೆ.

ವಿಲಿಯಮ್ಸನ್ ODI ರೆಕಾರ್ಡ್ಸ್​​: ಕೇನ್ ವಿಲಿಯಮ್ಸನ್ 2019ರ ಏಕದಿನ ವಿಶ್ವಕಪ್‌ ಸರಣಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಿದ್ದರು. ಉತ್ತಮ ನಿರ್ವಹಣೆ ತೋರಿದ್ದ ಅವರು ಫೈನಲ್​ ಹಂತದವರೆಗೂ ತಂಡವನ್ನು ಕೊಂಡೊಯ್ದಿದ್ದರು. ಸೂಪರ್​ ಓವರ್​ನಲ್ಲೂ ಪಂದ್ಯ ಡ್ರಾ ಕಂಡ ಹಿನ್ನೆಲೆಯಲ್ಲಿ ಬೌಂಡರಿ ಎಣಿಕೆಯ ಆಧಾರದ ಮೇಲೆ ಇಂಗ್ಲೆಂಡ್​ ಅನ್ನು ಚಾಂಪಿಯನ್​ ಎಂದು ಘೋಷಿಸಲಾಗಿತ್ತು. ಕೇನ್​ ವಿಲಿಯಮ್ಸನ್​ ಈವರೆಗೂ 161 ಏಕದಿನ ಪಂದ್ಯಗಳನ್ನಾಡಿದ್ದು 6,554 ರನ್ ಗಳಿಸಿದ್ದಾರೆ. ಇದರಲ್ಲಿ 13 ಶತಕಗಳು ಮತ್ತು 42 ಅರ್ಧ ಶತಕ ಒಳಗೊಂಡಿವೆ. ಅವರ ಗರಿಷ್ಠ ಸ್ಕೋರ್​ 148 ಆಗಿದೆ. ಕೇನ್​ 2010ರಲ್ಲಿ ಡಂಬುಲ್ಲಾದಲ್ಲಿ ಭಾರತದ ವಿರುದ್ಧ ತಮ್ಮ ಏಕದಿನ ಚೊಚ್ಚಲ ಪಂದ್ಯ ಆಡಿದ್ದರು.

ಇದನ್ನೂ ಓದಿ:ತನ್ನ ದಾಖಲೆ ಪುಡಿಗಟ್ಟಿದ ರೋ'ಹಿಟ್' ಶರ್ಮಾಗೆ '45 ಸ್ಪೆಷಲ್‌' ಎಂದು ಅಭಿನಂದಿಸಿದ ಕ್ರಿಸ್‌ ಗೇಲ್

ABOUT THE AUTHOR

...view details