ಕರ್ನಾಟಕ

karnataka

ETV Bharat / sports

ಬೌಲಿಂಗ್​ ವೇಳೆ ಕುಸಿದು ಬಿದ್ದ ಹಾರ್ದಿಕ್​ ಪಾಂಡ್ಯ ಪಾದಕ್ಕೆ ಗಾಯ: ಮೈದಾನದಿಂದ ಹೊರನಡೆದ ಆಲ್​​ರೌಂಡರ್​

ಭಾರತ ಕ್ರಿಕೆಟ್​ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬೌಲಿಂಗ್​ ವೇಳೆ ಕುಸಿದು ಬಿದ್ದು ಪಾದಕ್ಕೆ ಗಾಯ ಮಾಡಿಕೊಂಡು ಮೈದಾನದಿಂದ ಹೊರನಡೆದರು.

ಹಾರ್ದಿಕ್​ ಪಾಂಡ್ಯ ಪಾದಕ್ಕೆ ಗಾಯ
ಹಾರ್ದಿಕ್​ ಪಾಂಡ್ಯ ಪಾದಕ್ಕೆ ಗಾಯ

By ETV Bharat Karnataka Team

Published : Oct 19, 2023, 4:30 PM IST

ಪುಣೆ (ಮಹಾರಾಷ್ಟ್ರ):ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್‌ (ಎಂಸಿಎ) ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್​ ಪಂದ್ಯದಲ್ಲಿ ಭಾರತಕ್ಕೆ ಆರಂಭಿಕ ಆಘಾತ ಉಂಟಾಗಿದೆ. ತಂಡದ ಸ್ಟಾರ್​ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಬೌಲಿಂಗ್​ ವೇಳೆ ಕುಸಿದುಬಿದ್ದು ಕಾಲು ನೋವಿಗೆ ತುತ್ತಾಗಿದ್ದಾರೆ. ಇದರಿಂದ ಅವರು ಮೈದಾನದಿಂದ ಹೊರಹೋದರು.

ಆರಂಭಿಕರಾದ ತನ್​ಜಿದ್​ ಹಸನ್​ ಮತ್ತು ಲಿಟನ್​ ದಾಸ್​ ಉತ್ತಮವಾಗಿ ಬ್ಯಾಟಿಂಗ್​ ಮಾಡುತ್ತಿದ್ದಾಗ 9 ನೇ ಓವರ್​ ಬೌಲಿಂಗ್​ ಮಾಡಲು ಹಾರ್ದಿಕ್​ ಕಣಕ್ಕಿಳಿದರು. ಓವರ್​ನ ಮೂರನೇ ಎಸೆತವನ್ನು ಲಿಟ್ಟನ್ ದಾಸ್ ಸ್ಟ್ರೈಟ್ ಡ್ರೈವ್ ಆಡಿದಾಗ ಬಲಗಾಲಿನಿಂದ ನಿಲ್ಲಿಸಲು ಯತ್ನಿಸುತ್ತಿರುವ ವೇಳೆ ನಿಯಂತ್ರಣ ತಪ್ಪಿ ಕುಸಿದು ಬಿದ್ದರು. ಈ ವೇಳೆ ಕಾಲು ತಿರುಗಿದ್ದರಿಂದ ಪಾದ ಉಳುಕಿತು. ನೋವಿನಿಂದ ಮೈದಾನದಲ್ಲೇ ಬರೋಡಾ ಆಲ್​ರೌಂಡರ್​ ಕುಳಿತರು.

ಮೈದಾನಕ್ಕೆ ಬಂದ ತಂಡದ ಫಿಸಿಯೋ ಹಾರ್ದಿಕ್ ಪಾಂಡ್ಯರನ್ನು ಪರೀಕ್ಷಿಸಿದರು. ನೋವಿನಿಂದ ಕೆಲಕಾಲ ಏಳಲಾಗದೇ ಆಟಗಾರ ಪಿಚ್​ ಮೇಲೆಯೇ ಕುಳಿತಿದ್ದರು. ಬಲ ಪಾದಕ್ಕೆ ಸ್ಟ್ರಾಪ್ ಮಾಡಿದ ನಂತರ ಎದ್ದು ಮತ್ತೆ ಬೌಲಿಂಗ್​ಗೆ ಅಣಿಯಾದಾಗ ನೋವು ಹೆಚ್ಚಾಯಿತು. ಬೌಲಿಂಗ್​ ಮಾಡಲು ಸಾಧ್ಯವಿಲ್ಲ ಎಂದು ನಾಯಕನಿಗೆ ತಿಳಿಸಿ ಫಿಸಿಯೋ ಜೊತೆಗೆ ಮೈದಾನದಿಂದ ಹೊರನಡೆದರು.

ಕೊಹ್ಲಿ ಬೌಲಿಂಗ್​:ಹಾರ್ದಿಕ್​​ ಪಾದದ ನೋವಿನಿಂದಾಗಿ ಹೊರನಡೆದ ಬಳಿಕ ಉಳಿದ 3 ಎಸೆತಗಳನ್ನು ಹಾಕಲು ನಾಯಕ ರೋಹಿತ್​ ಶರ್ಮಾ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗೆ ಚೆಂಡು ನೀಡಿದರು. ತಮ್ಮದೇ ಶೈಲಿಯಲ್ಲಿ ಮೂರು ಎಸೆತಗಳನ್ನು ಮುಗಿಸಿದ ಕೊಹ್ಲಿಗೆ ಕ್ರೀಡಾಂಗಣದಲ್ಲಿ ನೆರೆದಿದ್ದ ಎಲ್ಲ ಪ್ರೇಕ್ಷಕರು ಕೊಹ್ಲಿ..ಕೊಹ್ಲಿ.. ಎಂದು ಕೂಗಿ ಚಿಯರ್​ ಮಾಡಿದರು. ಪಾಂಡ್ಯ ಮೂರು ಎಸೆತದಲ್ಲಿ 8 ರನ್​ ನೀಡಿದರೆ, ಕೊಹ್ಲಿ ಅಷ್ಟೇ ಎಸೆತದಲ್ಲಿ 2 ರನ್​ ನೀಡಿದರು. ಹಾರ್ದಿಕ್​ ಬದಲಿಗೆ ಸೂರ್ಯಕುಮಾರ್ ಯಾದವ್ ಕ್ಷೇತ್ರರಕ್ಷಣೆಗೆ ಇಳಿದರು. ಹಾರ್ದಿಕ್ ಪಾಂಡ್ಯ ಮತ್ತೆ ಅಂಗಳಕ್ಕೆ ಇಳಿಯುತ್ತಾರೋ ಇಲ್ಲವೋ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ.

ಇನ್ನೂ, 30 ಓವರ್​ ಮುಕ್ತಾಯಕ್ಕೆ ಬಾಂಗ್ಲಾದೇಶ 4 ವಿಕೆಟ್​ ನಷ್ಟಕ್ಕೆ 144 ರನ್​ ಗಳಿಸಿದೆ. ಆರಂಭಿಕರಾದ ತನ್​ಜಿದ್​ ಹಸನ್​, ಲಿಟ್ಟನ್​ ದಾಸ್​ ಅರ್ಧಶತಕ ಬಾರಿಸಿದರು. ಉತ್ತಮ ಸ್ಥಿತಿಯಲ್ಲಿದ್ದ ಬಾಂಗ್ಲಾಕ್ಕೆ ಸ್ಪಿನ್ನರ್​ ಸರ್​ ರವೀಂದ್ರ ಜಡೇಜಾ ಡಬಲ್​ ಸ್ಟ್ರೋಕ್​ ನೀಡಿ, ಪಂದ್ಯದ ಮೇಲೆ ಭಾರತ ಹಿಡಿತ ಸಾಧಿಸುವಂತೆ ಮಾಡಿದರು.

ಇದನ್ನೂ ಓದಿ:'ರೋಹಿತ್ ಕ್ರಿಕೆಟ್ ವಿಶ್ವಕಪ್ ಎತ್ತಿ ಹಿಡಿಯುವವರೆಗೂ ನಾನು ಡೇಟಿಂಗ್ ಮಾಡುವುದಿಲ್ಲ': ಮಹಿಳಾ ಅಭಿಮಾನಿಯ ಕೂಗು..

ABOUT THE AUTHOR

...view details