ಅಹಮದಾಬಾದ್ (ಗುಜರಾತ್): ಭಾರತ-ಪಾಕಿಸ್ತಾನ ನಡುವಿನ ಪಂದ್ಯವು ಪ್ರೇಕ್ಷಕರ ಸಮ್ಮುಖದಲ್ಲಿ ವಿಲಕ್ಷಣ ವಿದ್ಯಮಾನವನ್ನು ಕಂಡಿತು, ಪಾಕಿಸ್ತಾನದ ಆರಂಭಿಕ ಆಟಗಾರ ಇಮಾಮ್-ಉಲ್-ಹಕ್ ಅವರನ್ನು ಔಟ್ ಮಾಡುವ ಮೊದಲು ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮಾಡಿದ ಕಾರ್ಯವು ಅನೇಕರ ಗಮನ ಸೆಳೆಯಿತು. ಪಾಕಿಸ್ತಾನ ಇನ್ನಿಂಗ್ಸ್ ಆರಂಭದಲ್ಲಿ ಅಬ್ದುಲ್ಲಾ ಶಫೀಕ್ ಅವರ ವಿಕೆಟ್ ಕಳೆದುಕೊಂಡಿತು. ನಂತರ ಇಮಾಮ್ ಉಲ್ ಹಕ್ ಜೊತೆಗೆ ಬಾಬರ್ ಅಜಮ್ 82 ರನ್ನ ಜೊತೆಯಾಟ ಕಟ್ಟಿದರು.
ಆದರೆ ಈ ಜೊತೆಯಾಟಕ್ಕೆ ಹಾರ್ದಿಕ್ ಪಾಂಡ್ಯ ಬ್ರೇಕ್ ಹಾಕಿದರು. 36 ರನ್ ಗಳಿಸಿ ಆಡುತ್ತಿದ್ದ ಉಲ್-ಹಕ್ ಪಾಂಡ್ಯ ಅವರ ಎಸೆತವನ್ನು ವಿಕೆಟ್ ಕೀಪರ್ ಕೆಎಲ್ ರಾಹುಲ್‌ಗೆ ಕ್ಯಾಚ್ ಕೊಟ್ಟು ಔಟಾದರು. ಹಾರ್ದಿಕ್ ಅವರ ಔಟ್ ಸ್ವಿಂಗ್ ಬಾಲ್ಗೆ ಬ್ಯಾಕ್‌ಫೂಟ್ ಡ್ರೈವ್ ಆಡಲು ಪ್ರಯತ್ನಿಸಿದರು ಮತ್ತು ಸ್ಟಂಪ್‌ಗಳ ಹಿಂದೆ ಸಿಕ್ಕಿಬಿದ್ದರು.
ಆದರೆ, ಎಸೆತಕ್ಕೂ ಮುನ್ನ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಚೆಂಡನ್ನು ನೋಡುತ್ತಾ ಕೆಲ ಮಾತುಗಳನ್ನಾಡಿದರು. ಅದೇ ಎಸೆತದಲ್ಲಿ ವಿಕೆಟ್ ಪಡೆಯುತ್ತಿದ್ದಂತೆ ಚೆಂಡು ಬೌಲರ್‌ಗಳ ಆಜ್ಞೆಯನ್ನು ಕೇಳುತ್ತಿದೆಯೇನೋ ಎಂಬಂತಿತ್ತು. ಈ ವಿಲಕ್ಷಣ ಘಟನೆ ಜಗತ್ತಿನಾದ್ಯಂತ ಅನೇಕರ ಗಮನ ಸೆಳೆಯಿತು.
ಬೇರೆ ಜೆರ್ಸಿ ಧರಿಸಿದ ವಿರಾಟ್:ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಮ್ಯಾಜಿಕ್ ಟ್ರಿಕ್ ಆಟದ ಟಾಕಿಂಗ್ ಪಾಯಿಂಟ್ ಆಗಿದ್ದಲ್ಲದೇ, ಸ್ಟಾರ್ ಬ್ಯಾಟರ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಇನ್ನಿಂಗ್ಸ್‌ನ ಆರಂಭದಲ್ಲಿ ಬೇರೆ ಜರ್ಸಿ ತೊಟ್ಟಿದ್ದರು. ವಿರಾಟ್ ಕೊಹ್ಲಿ ತ್ರಿವರ್ಣ ಧ್ವಜದ ಬದಲಿಗೆ ಬಿಳಿ ಪಟ್ಟಿಯ ಜರ್ಸಿಯನ್ನು ತಪ್ಪಾಗಿ ಧರಿಸಿದ್ದರು. ಆದರೆ ಅವರು ಅದನ್ನು ತಿಳಿದ ನಂತರ ಬದಲಾಯಿಸಿಕೊಂಡರು. ವಿರಾಟ್ ಕೊಹ್ಲಿ ನಂತರ ಅದನ್ನು ಸರಿಪಡಿಸಿದರು. ಆದರೆ ಅವರ ಕೃತ್ಯವು ಭಾರತ-ಪಾಕಿಸ್ತಾನದ ಮೊದಲ ಇನ್ನಿಂಗ್ಸ್‌ನಲ್ಲಿ ಚರ್ಚೆಯ ಅಂಶಗಳಲ್ಲಿ ಒಂದಾಗಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಉತ್ತಮ ಬೌಲಿಂಗ್ ಪ್ರದರ್ಶನವನ್ನು ನೀಡಿದೆ. ಪಾಕಿಸ್ತಾನದ ಟಾಪ್ ಫೋರ್ ಬ್ಯಾಟರ್ಗಳು ರನ್ ಗಳಿಸಿದ್ದು, ಬಿಟ್ಟರೆ ಮತ್ತಾರು ಇನ್ನಿಂಗ್ಸ್ ಕಟ್ಟದಂತೆ ಭಾರತೀಯ ಬೌಲರ್ಗಳು ನೋಡಿಕೊಂಡರು. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ರವೀಂದ್ರ ಜಡೇಜ ಮತ್ತು ಹಾರ್ದಿಕ್ ಪಾಂಡ್ಯ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಇದರಿಂದ ಪಾಕಿಸ್ತಾನ ತಂಡ 42.5 ಓವರ್ 191 ರನ್ ಆಲ್ಔಟ್ ಆಯಿತು.
ಇದನ್ನೂ ಓದಿ:ಗಿಲ್, ವಿರಾಟ್ ವಿಕೆಟ್ ಕಳೆದುಕೊಂಡ ಭಾರತ.. ಮುಂದುವರಿದ ರೋಹಿತ್ ಘರ್ಜನೆ