ಕರ್ನಾಟಕ

karnataka

ಕೊಹ್ಲಿ ಭೇಟಿಯಾಗಲು ಹೋಗಿದ್ದೆ: ಮೈದಾನಕ್ಕೆ ನುಗ್ಗಿದ ಪ್ಯಾಲೆಸ್ಟೈನ್ ಬೆಂಬಲಿಗ ಯಾರು ಗೊತ್ತಾ?

By ETV Bharat Karnataka Team

Published : Nov 19, 2023, 6:03 PM IST

World Cup 2023 final: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್​ ವಿಶ್ವಕಪ್ ಫೈನಲ್​ ಪಂದ್ಯದ ವೇಳೆ ಪ್ಯಾಲೆಸ್ಟೈನ್ ಬೆಂಬಲಿಸುವ ವ್ಯಕ್ತಿಯೋರ್ವ ಮೈದಾನಕ್ಕೆ ನುಗ್ಗಿದ್ದ.

world-cup-2023-final-pitch-invader-halts-game-for-a-brief-moment
ಕೊಹ್ಲಿ ಭೇಟಿಯಾಗಲು ಹೋಗಿದ್ದೆ: ಮೈದಾನಕ್ಕೆ ನುಗ್ಗಿದ ಪ್ಯಾಲೆಸ್ಟೈನ್ ಬೆಂಬಲಿಗನ ಹೇಳಿಕೆ!

ಅಹಮದಾಬಾದ್ (ಗುಜರಾತ್​):ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್​ ವಿಶ್ವಕಪ್ ಫೈನಲ್​ ಪಂದ್ಯದ ವೇಳೆ ವ್ಯಕ್ತಿಯೋರ್ವ ಮೈದಾನಕ್ಕೆ ನುಗ್ಗಿರುವ ಆಘಾತಕಾರಿ ಘಟನೆ ನಡೆದಿದೆ. ಟೀಂ ಇಂಡಿಯಾದ ಬ್ಯಾಟಿಂಗ್​ ವೇಳೆ ಈ ವ್ಯಕ್ತಿ ಪ್ಯಾಲೆಸ್ಟೈನ್ ಧ್ವಜ ಹಿಡಿದು ಒಳ ನುಗ್ಗಿ, ವಿರಾಟ್ ಕೊಹ್ಲಿ ಅವರನ್ನು ಅಪ್ಪಿಕೊಳ್ಳಲು ಯತ್ನಿಸಿದ್ದಾನೆ. ತಕ್ಷಣವೇ ಭದ್ರತಾ ಸಿಬ್ಬಂದಿ ದೌಡಾಯಿಸಿ ಆತನನ್ನು ಹಿಡಿದು ಎಳೆದೊಯ್ದಿದ್ದಾರೆ.

ಕೊಹ್ಲಿ ಹೆಗಲಿನ ಮೇಲೆ ಕೈ ಹಾಕಿ ಆತಂಕ ಸೃಷ್ಟಿ: 2023ರ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿವೆ. ಟಾಸ್​ ಗೆದ್ದ ಆಸೀಸ್ ತಂಡ ಮೊದಲ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಇದರಿಂದ ಟೀಂ ಇಂಡಿಯಾ ಬ್ಯಾಟಿಂಗ್ ಮಾಡುತ್ತಿದೆ. ಭಾರತದ ಬ್ಯಾಟರ್​ಗಳು ಬ್ಯಾಟಿಂಗ್​ ಮಾಡುತ್ತಿರುವಾಗಲೇ ಈ ವ್ಯಕ್ತಿ ಮೈದಾನಕ್ಕೆ ನುಗ್ಗಿ ಆತಂಕ ಸೃಷ್ಟಿಸಿದ್ದಾನೆ. 'ಸ್ಟಾಪ್​ ಬಾಂಬಿಂಗ್​ ಪ್ಯಾಲೆಸ್ಟೈನ್​' (ಪ್ಯಾಲೆಸ್ಟೈನ್ ಮೇಲಿನ ಬಾಂಬ್​ ದಾಳಿಯನ್ನು ನಿಲ್ಲಿಸಿ) ಎಂದು ಬರೆದಿದ್ದ ಶರ್ಟ್ ಧರಿಸಿದ್ದ ವ್ಯಕ್ತಿ ಬ್ಯಾಟರ್​ ವಿರಾಟ್ ಕೊಹ್ಲಿ ಹೆಗಲ ಮೇಲೆ ಕೈ ಹಾಕಿ ಅಪ್ಪಿಕೊಳ್ಳಲು ಯತ್ನಿಸುವ ಮೂಲಕ ಕೆಲಕಾಲ ಆಘಾತ ಉಂಟು ಮಾಡಿದ್ದಾನೆ.

ಈ ವ್ಯಕ್ತಿ ಧರಿಸಿದ್ದ ಶರ್ಟ್ ಹಿಂಭಾಗದಲ್ಲಿ 'ಫ್ರೀ ಪ್ಯಾಲೆಸ್ಟೈನ್' ಎಂದೂ ಬರೆದಿದ್ದು, ಪ್ಯಾಲೆಸ್ಟೈನ್​ ಧ್ವಜವನ್ನೂ ಹಿಡಿದುಕೊಂಡಿದ್ದ. ಪ್ಯಾಲೆಸ್ಟೈನ್​ ಅನ್ನು ಬಿಂಬಿಸುವ ಹಸಿರು, ಕೆಂಪು, ಬಿಳಿ ಮತ್ತು ಕಪ್ಪು ಮುಖವಾಡವನ್ನು ಧರಿಸಿದ್ದ ಈ ವ್ಯಕ್ತಿ ಏಕಾಏಕಿ ನುಗ್ಗಿ ಪಿಚ್​ಅನ್ನು​ ಆಕ್ರಮಿಸುವ ಮೂಲಕ ಪಂದ್ಯಕ್ಕೆ ಅಡ್ಡಿ ಪಡಿಸಿದ್ದಾನೆ. ಆಗ ಕೂಡಲೇ ಭದ್ರತಾ ಸಿಬ್ಬಂದಿ ದೌಡಾಯಿಸಿ ಆತನನ್ನು ಹಿಡಿದುಕೊಂಡು ಮೈದಾನದಿಂದ ಹೊರಗೆ ಎಳೆದೊಯ್ದಿದ್ದಾರೆ. ಈ ವ್ಯಕ್ತಿ ಹೊರಗೆ ಬರುತ್ತಿದ್ದಂತೆ ಜನರ ಗುಂಪಿನತ್ತ ಬೆರಳು ತೋರಿಸುತ್ತಿರುವ ದೃಶ್ಯ ಸಹ ಸೆರೆಯಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ವಿರಾಟ್​ ಅಭಿಮಾನಿ ಎಂದ ಆರೋಪಿ:ಮೈದಾನಕ್ಕೆ ನುಗ್ಗಿದ ಆರೋಪಿಯನ್ನು ಅಹಮದಾಬಾದ್‌ನ ಚಂದ್‌ಖೇಡಾ ಪೊಲೀಸ್ ಠಾಣೆಗೆ ಕರೆತರಲಾಗಿದೆ. ಇಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಂದೆಡೆ, ಆತನನ್ನು ಪೊಲೀಸರು ಕರೆದೊಯ್ಯುತ್ತಿದ್ದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಈ ವ್ಯಕ್ತಿ, ತನ್ನನ್ನು ತಾನು ಆಸ್ಟ್ರೇಲಿಯಾದ ಜಾನ್ಸನ್ ಎಂದು ಹೇಳಿಕೊಂಡಿದ್ದಾನೆ.

''ನನ್ನ ಹೆಸರು ಜಾನ್ಸನ್ ವೆನ್. ನಾನು ಆಸ್ಟ್ರೇಲಿಯಾದಿಂದ ಬಂದಿದ್ದೇನೆ. ನಾನು ವಿರಾಟ್ ಕೊಹ್ಲಿ ಅವರನ್ನು ಭೇಟಿ ಮಾಡಲು ಮೈದಾನಕ್ಕೆ ಪ್ರವೇಶಿಸಿದೆ. ನಾನು ಪ್ಯಾಲೆಸ್ಟೈನ್ ಅನ್ನು ಬೆಂಬಲಿಸುತ್ತೇನೆ. ಯುದ್ಧದ ವಿರುದ್ಧ ಪ್ರತಿಭಟಿಸಿದೆ ಎಂದು ಆರೋಪಿ ಮಾಧ್ಯಮದವರಿಗೆ ತಿಳಿಸಿದ್ದಾನೆ.

1.32 ಲಕ್ಷ ಆಸನಗಳ ಸಾಮರ್ಥ್ಯ ಹೊಂದಿರುವ ನರೇಂದ್ರ ಮೋದಿ ಕ್ರೀಡಾಂಗಣವು ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನವಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾದ ಫೈನಲ್ ಹಣಾಹಣಿ ವೀಕ್ಷಿಸಲು ಅಪಾರ ಸಂಖ್ಯೆಯ ಅಭಿಮಾನಿಗಳು ಮೈದಾನದಲ್ಲಿ ಸೇರಿದ್ದಾರೆ. ಕ್ರಿಕೆಟ್​ ದಿಗ್ಗಜರು, ಖ್ಯಾತ ಸಿನಿ ತಾರೆಯರು ಸೇರಿದಂತೆ ಗಣ್ಯಾತಿಗಣ್ಯರು ಕೂಡ ಪಂದ್ಯ ವೀಕ್ಷಿಸಲು ಕ್ರೀಡಾಂಗಣದಲ್ಲಿ ನೆರೆದಿದ್ದಾರೆ.

ಇದನ್ನೂ ಓದಿ:2003 & 2023ರ ಫೈನಲ್ ಪಂದ್ಯಗಳಲ್ಲಿನ ಸಾಮ್ಯತೆಗಳೇನು? ಕುತೂಹಲಕಾರಿ ಮಾಹಿತಿ ಹಂಚಿಕೊಂಡ ಗೂಗಲ್!

ABOUT THE AUTHOR

...view details