ಅಹಮದಾಬಾದ್ (ಗುಜರಾತ್): ಐಸಿಸಿ ವಿಶ್ವಕಪ್ 2023ರಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಆಸ್ಟ್ರೇಲಿಯ ಕ್ರಿಕೆಟ್ ತಂಡ ನವೆಂಬರ್ 4ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ ದೊಡ್ಡ ಹಿನ್ನಡೆ ಅನುಭವಿಸಿದೆ. ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಗಾಯದಿಂದಾಗಿ ಈ ಪಂದ್ಯದಿಂದ ಹೊರಗುಳಿದಿದ್ದಾರೆ.
ನ್ಯೂಜಿಲೆಂಡ್ ಪಂದ್ಯದ ನಂತರ ಆಸ್ಟ್ರೇಲಿಯಾಕ್ಕೆ ಒಂದು ವಾರದದ ಬಿಡುವಿತ್ತು. ಹೀಗಾಗಿ ಆಸಿಸ್ ಆಟರಾರರು ವಿಶ್ರಾಂತಿಯಲ್ಲಿ ಇದ್ದರು. ಬಿಡುವಿನ ಸಮಯದಲ್ಲಿ ಮ್ಯಾಕ್ಸ್‌ವೆಲ್ ಗಾಲ್ಫ್ ಆಡಿದ್ದಾರೆ. ಈ ವೇಳೆ, ಅವರು ಗಾಯಗೊಂಡಿದ್ದರಿಂದ ಇಂಗ್ಲೆಂಡ್ ವಿರುದ್ಧ ಆಡಲು ಸಾಧ್ಯವಾಗುತ್ತಿಲ್ಲ. ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ನವೆಂಬರ್ 4ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಡಾಂಗಣದಲ್ಲಿ ಪಂದ್ಯ ಆಡಲಿದೆ. ಈ ಪಂದ್ಯ ಕಾಂಗರೂ ಪಡೆಗೆ ಸೆಮೀಸ್ ಪ್ರವೇಶಕ್ಕೆ ಅತ್ಯಂತ ಪ್ರಮುಖವಾಗಿದ್ದು, ಮ್ಯಾಕ್ಸ್‌ವೆಲ್ ಅಲಭ್ಯತೆ ಆಸಿಸ್ಗೆ ಕಾಡುವ ಸಾಧ್ಯತೆ ಇದೆ.
ಐದು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಆಸ್ಟ್ರೇಲಿಯಾ 2023ರ ವಿಶ್ವಕಪ್‌ನಲ್ಲಿ ನಿರಾಸೆಯ ಆರಂಭ ಪಡೆಯಿತು. ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಗಳಲ್ಲಿ ಸೋಲು ಕಂಡ ಕಾಂಗರೂಪಡೆ ನಂತರ ಸತತ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡಿತು. ಇದರಿಂದ ತಂಡ ವಿಶ್ವಕಪ್ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಇನ್ನೊಂದು ಗೆಲುವು ಆಸ್ಟ್ರೇಲಿಯಾಕ್ಕೆ ಸೆಮೀಸ್ ಪ್ರವೇಶ ಪಕ್ಕಾ ಆಗಲಿದೆ.