ಕರ್ನಾಟಕ

karnataka

By

Published : Dec 6, 2021, 4:05 PM IST

ETV Bharat / sports

ಯಾರೋ ಟೀಕಿಸುತ್ತಿದ್ದಾರೆಂದು ನಮ್ಮ ಆಟಗಾರರನ್ನ ಬಿಡುವುದಿಲ್ಲ, ಇಡೀ ತಂಡದ ಬೆಂಬಲ ಅವರಿಗಿರುತ್ತೆ: ರಹಾನೆ ಪರ ನಿಂತ ಕೊಹ್ಲಿ

ರಹಾನೆ ಆಸ್ಟ್ರೇಲಿಯಾ ಪ್ರವಾಸದ ನಂತರ ಲಯ ಕಳೆದುಕೊಂಡಿದ್ದಾರೆ. ನಡೆದ ಇಂಗ್ಲೆಂಡ್​ ವಿರುದ್ಧದ ಎರಡು ಸರಣಿ ಮತ್ತು ಪ್ರಸ್ತುತ ಕಿವೀಸ್ ಸರಣಿಯಲ್ಲೂ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ, ಅವರನ್ನು ಮುಂಬರುವ ಸರಣಿಯಲ್ಲಿ ಕೈಬಿಡಬೇಕೆಂಬ ಟೀಕೆಗಳು ಕೇಳಿ ಬರುತ್ತಿದ್ದರೂ ಕೊಹ್ಲಿ ಮಾತ್ರ ರಹಾನೆ ಬೆನ್ನಿಗೆ ನಿಂತಿದ್ದಾರೆ..

Kohli on Rahane's future
ರಹಾನೆ ಭವಿಷ್ಯದ ಬಗ್ಗೆ ಕೊಹ್ಲಿ ಸ್ಪಷ್ಟನೆ

ಮುಂಬೈ :ಕಳೆದ ಕೆಲವು ಇನ್ನಿಂಗ್ಸ್​ಗಳಲ್ಲಿ ಫಾರ್ಮ್​​ ಸಮಸ್ಯೆ ಎದುರಿಸುತ್ತಿರುವ ಅಜಿಂಕ್ಯ ರಹಾನೆಗೆ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಬೆಂಬಲ ಸೂಚಿಸಿದ್ದಾರೆ. ಹೊರಗೆ ನಡೆಯುತ್ತಿರುವ ಚರ್ಚೆಯನ್ನಾಧರಿಸಿ ಯಾವುದೇ ಆಟಗಾರನ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ರಹಾನೆ ಆಸ್ಟ್ರೇಲಿಯಾ ಪ್ರವಾಸದ ನಂತರ ಲಯ ಕಳೆದುಕೊಂಡಿದ್ದಾರೆ. ಇಂಗ್ಲೆಂಡ್​ ವಿರುದ್ಧದ ಎರಡು ಸರಣಿ ಮತ್ತು ಪ್ರಸ್ತುತ ಕಿವೀಸ್ ಸರಣಿಯಲ್ಲೂ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾದರು. ಹಾಗಾಗಿ, ಮುಂಬೈ ಟೆಸ್ಟ್​ನಿಂದ ಅವರನ್ನು ಗಾಯದ ಕಾರಣ ನೀಡಿ ತಂಡದಿಂದ ಹೊರಗಿಡಲಾಗುತ್ತು.

ಆದರೆ, ಈಗಾಗಲೇ ಗಂಭೀರ್​ ಸೇರಿದಂತೆ ಕೆಲವು ಕ್ರಿಕೆಟಿಗರು ರಹಾನೆ ಆಯ್ಕೆಯನ್ನು ಪ್ರಶ್ನಿಸುತ್ತಿದ್ದಾರೆ. ಆದರೆ, ಕೊಹ್ಲಿ ಮಾತ್ರ ಯಾವುದೇ ಆಟಗಾರನ ಫಾರ್ಮ್​​ ಅನ್ನು ಯಾರಿಂದಲೂ ತೀರ್ಮಾನಿಸಲಾಗದು ಎಂದಿದ್ದಾರೆ. ತಂಡ ತಮ್ಮ ಆಟಗಾರರು ಕಠಿಣ ಪರಿಸ್ಥಿತಿಯಲ್ಲಿದ್ದಾಗ ಬೆಂಬಲ ನೀಡುವ ಅಗತ್ಯವಿದೆ ಎಂದು ಹೇಳಿದ್ದಾರೆ.

"ನಾನು ಅಜಿಂಕ್ಯ ರಹಾನೆ ಫಾರ್ಮ್​ ಅನ್ನು ತೀರ್ಮಾನಿಸಲಾಗಲ್ಲ. ನನ್ನ ಪ್ರಕಾರ ಯಾರಿದಂಲೂ ಸಾಧ್ಯವಿಲ್ಲ. ಯಾವ ಪ್ರದೇಶದಲ್ಲಿ ಉತ್ತಮಗೊಳ್ಳಬೇಕೆಂಬುದು ಆ ಆಟಗಾರನಿಗೆ ಮಾತ್ರ ತಿಳಿದಿರುತ್ತದೆ. ನಾವು ತಂಡ ಹಿಂದೆ ಕಠಿಣ ಪರಿಸ್ಥಿತಿಯಲ್ಲಿ ಸಿಲುಕಿದಾಗ ಆಕರ್ಷಕ ಪ್ರದರ್ಶನ ತೋರಿ ನೆರವಾಗಿದ್ದ ಆಟಗಾರರ ಬೆಂಬಲಕ್ಕೆ ನಿಲ್ಲಬೇಕಿದೆ" ಎಂದು ನ್ಯೂಜಿಲ್ಯಾಂಡ್​ ವಿರುದ್ಧ ಗೆದ್ದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಯಾವುದೇ ವ್ಯಕ್ತಿಯ ಮೇಲೆ ಒತ್ತಡವಿದ್ದರೆ, ಜನರು, ಮುಂದೆ ಏನಾಗಲಿದೆ? ಎಂದು ಕೇಳಲಾರಂಭಿಸುತ್ತಾರೆ. ನಾವು ಅಂತಹವರ ಹೇಳಿಕೆಯನ್ನು ಮನರಂಜಿಸಲು ಹೋಗುವುದಿಲ್ಲ. ಆ ಸಮತೋಲನವನ್ನು ನಾವು ಹೊರಗೆ ನಿರೀಕ್ಷಿಸಲು ಸಾಧ್ಯವಿಲ್ಲ. ಉತ್ತಮ ಪ್ರದರ್ಶನ ತೋರಿದಾಗ ಪ್ರಶಂಸಿಸುವ ಜನರೇ , ಎರಡೂ ತಿಂಗಳ ನಂತರ ಆ ಆಟಗಾರನನ್ನು ತಂಡದಿಂದ ಕೈಬಿಡಬೇಕೆನ್ನುತ್ತಾರೆ ಎಂದು ಟೀಂ ಇಂಡಿಯಾ ನಾಯಕ ಹೇಳಿದ್ದಾರೆ.

ಹೊರಗಿನ ಹೇಳಿಕೆಗಳನ್ನಾಧರಿಸಿ ಮ್ಯಾನೇಜ್​ಮೆಂಟ್ ಯಾವುದೇ ಆಟಗಾರನನ್ನು ತಂಡದಿಂದ ಕೈಬಿಡುವುದಿಲ್ಲ ಎಂದು ಕೊಹ್ಲಿ ತಿಳಿಸಿದ್ದಾರೆ." ನಾವು ಯಾವಾಗಲೂ ಹೊರಗಿನ ಮಾತುಗಳಿಗೆ ಅನುಗುಣವಾಗಿ ಪ್ರತಿಕ್ರಿಯಿಸುವುದಿಲ್ಲ. ಏಕೆಂದರೆ, ಒಬ್ಬ ಆಟಗಾರನ ಕಠಿಣ ಪರಿಶ್ರಮ ಎಷ್ಟಿರುತ್ತದೆ ಎನ್ನುವುದು ನಮಗೆ ಗೊತ್ತಿರುತ್ತದೆ. ನಾವು ಆ ಆಟಗಾರನಿಗೆ ಬೆಂಬಲಿಸುತ್ತೇವೆ, ಅವನು ರಹಾನೆ ಯಾಗಬಹುದು ಅಥವಾ ಬೇರೆ ಯಾರೇ ಆಗಬಹುದು. ಹೊರಗಿನ ವಾತಾವಾರಣದ ಆಧಾರದ ಮೇಲೆ ನಾವು ನಿರ್ಧಾರ ತೆಗೆದುಕೊಳ್ಳುವುದಿಲ್ಲ" ಎಂದಿದ್ದಾರೆ.

ಇದನ್ನೂ ಓದಿ:ICC Test rankings: ಟೆಸ್ಟ್​​ ರ‍್ಯಾಂಕಿಂಗ್​ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ ಭಾರತ

ABOUT THE AUTHOR

...view details