ಮೌಂಟ್ ಮಾಂಗನೂಯಿ(ನ್ಯೂಜಿಲ್ಯಾಂಡ್):ವನಿತೆಯರ ಏಕದಿನ ಕ್ರಿಕೆಟ್ ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಮೊದಲ ಪಂದ್ಯವನ್ನು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಆಡುತ್ತಿದ್ದು, ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ.
ಮಹಿಳಾ ಏಕದಿನ ವಿಶ್ವಕಪ್ ಕ್ರಿಕೆಟ್: ಪಾಕ್ ವಿರುದ್ಧ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ - ಭಾರತ ಮತ್ತು ಪಾಕಿಸ್ತಾನ ಪಂದ್ಯ
2005 ಮತ್ತು 2017ರ ವಿಶ್ವಕಪ್ನ ರನ್ನರ್ ಅಪ್ ಆಗಿರುವ ಭಾರತದ ವನಿತೆಯ ತಂಡ ಈ ಬಾರಿ ಅನುಭವಿ ಆಟಗಾರರನ್ನು ಹೊಂದಿದೆ.
![ಮಹಿಳಾ ಏಕದಿನ ವಿಶ್ವಕಪ್ ಕ್ರಿಕೆಟ್: ಪಾಕ್ ವಿರುದ್ಧ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ Women's World Cup: Mithali Raj-led India win toss; opts to bat first against Pakistan](https://etvbharatimages.akamaized.net/etvbharat/prod-images/768-512-14650447-thumbnail-3x2-raaaa.jpg)
Women's World Cup: ಪಾಕಿಸ್ತಾನ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ವನಿತೆಯರ ತಂಡ
2005 ಮತ್ತು 2017ರ ವಿಶ್ವಕಪ್ನ ರನ್ನರ್ ಅಪ್ ಆಗಿರುವ ಭಾರತದ ವನಿತೆಯ ತಂಡ ಈ ಬಾರಿ ಅನುಭವಿ ಆಟಗಾರರನ್ನು ಹೊಂದಿದೆ. ಮಿಥಾಲಿ ರಾಜ್ ಮತ್ತು ಜೂಲನ್ ಗೋಸ್ವಾಮಿ ಬಹುತೇಕ ಕೊನೆಯ ವಿಶ್ವಕಪ್ ಆಡುತ್ತಿದ್ದು, ಟ್ರೋಫಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.
ಮಾರ್ಚ್ 4ರಿಂದ ವಿಶ್ವಕಪ್ ಆರಂಭವಾಗಿದೆ. ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ಧ ಮೊದಲ ಪಂದ್ಯವಾಡಿದ ವೆಸ್ಟ್ ಇಂಡೀಸ್ ಮೂರು ರನ್ಗಳಿಂದ ಜಯಗಳಿಸಿತ್ತು. ಎರಡನೇ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ದಕ್ಷಿಣ ಆಫ್ರಿಕಾ 32 ರನ್ನಿಂದ ಮತ್ತು ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 12ರನ್ಗಳ ಅಂತರದಿಂದ ಜಯಗಳಿಸಿದೆ.