ರ್‍ಯಾಂಗಿಯೋರಾ(ನ್ಯೂಜಿಲ್ಯಾಂಡ್):ಸ್ಮೃತಿ ಮಂಧಾನ ಮತ್ತು ಬೌಲರ್ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಅಭ್ಯಾಸ ಪಂದ್ಯದಲ್ಲೂ ಭಾರತ ಮಹಿಳಾ ತಂಡ ಗೆಲುವು ಸಾಧಿಸಿದೆ.
ಏಕದಿನ ವಿಶ್ವಕಪ್ಗೂ ಮುನ್ನ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 258 ರನ್ಗಳಿಸಿತ್ತು. ಗಾಯದಿಂದ ಚೇತರಿಸಿಕೊಂಡಿರುವ ಆರಂಭಿಕ ಬ್ಯಾಟರ್ ಮಂಧಾನ 67 ಎಸೆತಗಳಲ್ಲಿ 7 ಬೌಂಡರಿಗಳ ಸಹಾಯದಿಂದ 66 ರನ್ಗಳಿಸಿದರೆ, ದೀಪ್ತಿ ಶರ್ಮಾ 64 ಎಸೆತಗಳಲ್ಲಿ 51, ಮಿಥಾಲಿ 42 ಎಸೆತಗಳಲ್ಲಿ 30, ಯಸ್ತಿಕಾ ಭಾಟಿಯಾ 53 ಎಸೆತಗಳಲ್ಲಿ 42 ರನ್ಗಳಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.
259 ರನ್ಗಳ ಗುರಿ ಬೆನ್ನಟ್ಟಿದ ವಿಂಡೀಸ್ ತಂಡವನ್ನು ಭಾರತೀಯ ಬೌಲರ್ಗಳು 177ಕ್ಕೆ ನಿಯಂತ್ರಿಸುವಲ್ಲಿ ಸಫಲರಾದರು. ಶೆಮೈನ್ ಕ್ಯಾಂಪ್ಬೆಲ್ಗ್ 86 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 63, ಹೇಲಿ ಮ್ಯಾಥ್ಯೂಸ್ 61 ಎಸೆತಗಳಲ್ಲಿ 44 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಆದರು.