ಕರ್ನಾಟಕ

karnataka

ETV Bharat / sports

ಮಹಿಳಾ ವಿಶ್ವಕಪ್: ಪಾಕಿಸ್ತಾನ ಮಣಿಸಿ ಅಗ್ರಸ್ಥಾನಕ್ಕೇರಿದ ಆಸ್ಟ್ರೇಲಿಯಾ

ಮಹಿಳಾ ವಿಶ್ವಕಪ್​ನ 6ನೇ ಪಂದ್ಯದಲ್ಲಿ ಪಾಕಿಸ್ತಾನ ತಂಡ ನೀಡಿದ್ದ 191 ರನ್​ಗಳ ಸಾಧಾರಣ ಗುರಿಯನ್ನು ಆಸ್ಟ್ರೇಲಿಯಾ ಮಹಿಳಾ ತಂಡ ಕೇವಲ 3 ವಿಕೆಟ್ ಕಳೆದುಕೊಂಡು, ಇನ್ನೂ 92 ಎಸೆತಗಳಿರುವಂತೆಯೇ ತಲುಪಿ ಟೂರ್ನಿಯಲ್ಲಿ 2ನೇ ಜಯ ಸಾಧಿಸಿದೆ.

Women's World Cup:
ಮಹಿಳಾ ವಿಶ್ವಕಪ್ 2022

By

Published : Mar 8, 2022, 3:17 PM IST

ಮೌಂಟ್​ ಮೌಂಗನ್ಯುಯಿ:ವಿಶ್ವಕಪ್​ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ಆಸ್ಟ್ರೇಲಿಯಾ ಮಹಿಳಾ ತಂಡ ಮಂಗಳವಾರ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್​​ಗಳ ಸುಲಭ ಜಯ ಸಾಧಿಸಿ, ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು.

ಟಾಸ್​ ಸೋತು ಬ್ಯಾಟಿಂಗ್‌ ಮಾಡಿದ್ದ ಪಾಕಿಸ್ತಾನ ತಂಡ 191 ರನ್​ಗಳ ಸಾಧಾರಣ ಗುರಿ ನೀಡಿತ್ತು. ಈ ಮೊತ್ತವನ್ನು ಆರಂಭಿಕ ಬ್ಯಾಟರ್​ ಅಲಿಸ್ಸಾ ಹೀಲಿ ಅವರ ಸ್ಫೋಟಕ 72 ರನ್​ಗಳ ನೆರವಿನಿಂದ ಆಸೀಸ್​ ತಂಡ 3 ವಿಕೆಟ್ ಕಳೆದುಕೊಂಡು, ಇನ್ನೂ 92 ಎಸೆತಗಳಿರುವಂತೆ ತಲುಪಿತು.

191 ರನ್​ಗಳ ಗುರಿ ಬೆನ್ನಟ್ಟಿದ ಕಾಂಗರೂ ಪಡೆಗೆ ಆರಂಭಿಕ ಬ್ಯಾಟರ್​ ಹೀಲಿ ಮತ್ತು ರೇಚಲ್ ಹೇನ್ಸ್​ ಮೊದಲ ವಿಕೆಟ್​ಗೆ 60 ರನ್​ಗಳ ಜೊತೆಯಾಟ ನೀಡಿದರು. ತಮಗೆ ಸಿಕ್ಕ ಜೀವದಾನವನ್ನು ಸಮರ್ಥವಾಗಿ ಬಳಸಿಕೊಂಡ ಈ ಇಬ್ಬರು ಆರಂಭಿಕ ಬ್ಯಾಟರ್ಸ್​ ಕೆಟ್ಟ ಎಸೆತಗಳನ್ನು ದಂಡಿಸುತ್ತಾ ರನ್ ಕಲೆ ಹಾಕಿದರು.

ಹೇನ್ಸ್​ 34 ಎಸೆತಗಳಲ್ಲಿ 7 ಬೌಂಡರಿ ಸಹಿತ 34 ರನ್​ಗಳಿಸಿ ನಶ್ರಾ ಸಂಧುಗೆ ವಿಕೆಟ್​ ಒಪ್ಪಿಸಿದರು. ನಂತರ ಬಂದ ನಾಯಕಿ ಲ್ಯಾನಿಂಗ್​ 37 ಎಸೆತಗಳಲ್ಲಿ 6 ಬೌಂಡರಿಸಹಿತ 35 ರನ್​ಗಳಿಸಿದರು. ವಿಕೆಟ್ ಕೀಪರ್ ಹೀಲಿ 79 ಎಸೆತಗಳಲ್ಲಿ 72 ರನ್​ಗಳಿಸಿ ಔಟಾದರು. ಅನುಭವಿ ಪೆರ್ರಿ ಅಜೇಯ 26, ಬೆತ್ ಮೂನಿ ಅಜೇಯ 23 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ್ದ ಪಾಕಿಸ್ತಾನ ನಾಯಕಿ ಬಿಸ್ಮಾ ಮರೂಫ್​(78) ಮತ್ತು ಅಲಿಯಾ ರಿಯಾಜ್​(53) ಅವರ ಅರ್ಧಶತಕದ ನೆರವಿನಿಂದ ಪಾಕಿಸ್ತಾನ ತಂಡ 50 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 190 ರನ್​ಗಳಿಸಿತ್ತು.

ಅಲಾನ ಕಿಂಗ್ 9 ಓವರ್​ಗಳಲ್ಲಿ 24ಕ್ಕೆ 2, ಮೇಗನ್ ಶೂಟ್, ಪೆರ್ರಿ, ಅಮಂಡ ವೆಲ್ಲಿಂಗ್ಟನ್​ ಮತ್ತು ನಿಕೋಲಾ ಕ್ಯಾರಿ ತಲಾ ಒಂದು ವಿಕೆಟ್ ಪಡೆದರು.

ಇದನ್ನೂ ಓದಿ:'ಇದು ಸೂಕ್ತ ಸಮಯವಾಗಿರಲಿಲ್ಲ'..ವಾರ್ನ್ ಬಗ್ಗೆ ಅನಗತ್ಯ ಹೇಳಿಕೆ ನೀಡಿ ಪಶ್ಚಾತ್ತಾಪ ಪಟ್ಟ ಗವಾಸ್ಕರ್‌!

ABOUT THE AUTHOR

...view details