ಕರ್ನಾಟಕ

karnataka

ETV Bharat / sports

ಮಹಿಳಾ ಟಿ20 ವಿಶ್ವಕಪ್: ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿದ ಭಾರತ - ಭಾರತ ತಂಡ

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡವನ್ನು 5 ರನ್​ಗಳಿಂದ ಮಣಿಸಿದ ಆಸ್ಟ್ರೇಲಿಯಾ ಫೈನಲ್​ಗೇರಿತು.

Etv Bharat
Etv Bharat

By

Published : Feb 23, 2023, 10:02 PM IST

Updated : Feb 24, 2023, 2:45 PM IST

ಕೇಪ್​ಟೌನ್​ (ದಕ್ಷಿಣ ಆಫ್ರಿಕಾ):ಮಹಿಳಾ ಟಿ20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಮತ್ತೆ ಮುಗ್ಗರಿಸಿತು. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್​ ಪಂದ್ಯದಲ್ಲಿ ಕೇವಲ 5 ರನ್​ಗಳಿಂದ ಭಾರತೀಯ ವನಿತೆಯರು ಸೋಲು ಕಂಡರು. ಹರ್ಮನ್‌ಪ್ರೀತ್ ಕೌರ್ (52) ಮತ್ತು ಜೆಮಿಮಾ ರಾಡ್ರಿಗಸ್ (43) ಉತ್ತಮ ಬ್ಯಾಟಿಂಗ್​ ನಡುವೆಯೂ ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು.

ಟಾಸ್​ ಗೆದ್ದು ಮೊದಲ ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ನಿಗದಿತ 20 ಓವರ್​ಗಳಲ್ಲಿ 172 ರನ್​ ಸವಾಲಿನ ಮೊತ್ತ ಪೇರಿಸಿತು. ಬೃಹತ್​ ಗುರಿ ಬೆನ್ನಟ್ಟಿದ ಭಾರತ ತಂಡ 8 ವಿಕೆಟ್ ಕಳೆದುಕೊಂಡು 167 ರನ್​ ಗಳಿಸಲಷ್ಟೇ ಶಕ್ತವಾಯಿತು. ಆಸ್ಟ್ರೇಲಿಯಾ ಫೈನಲ್​ಗೆ ಲಗ್ಗೆ ಇಟ್ಟಿತು.

ಭಾರತ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಶಫಾಲಿ ಮರ್ಮಾ ಮತ್ತು ಸ್ಮೃತಿ ಮಂಧಾನ ಒಳ್ಳೆಯ ಜೊತೆಯಾಟ ನೀಡಲು ವಿಫಲರಾದರು. ಆರು ಎಸೆತಗಳಲ್ಲಿ ಒಂದು ಬೌಂಡರಿ ಸಮೇತ ಒಂಭತ್ತು ರನ್​ ಬಾರಿಸಿದ್ದ ಶಫಾಲಿ ಮೇಗನ್ ಶುಟ್ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು. ಇತ್ತ, ಭರವಸೆ ಮತ್ತು ಸ್ಟಾರ್​ ಆಟಗಾರ್ತಿ ಸ್ಮೃತಿ ಮಂಧಾನ ಕೂಡ ಆಶ್ಲೀ ಗಾರ್ಡ್ನರ್​​ ಎಸೆತದಲ್ಲಿ ಎಲ್​ಬಿ ಬಲೆಗೆ ಸಿಲುಕಿ ವಿಕೆಟ್​ ಒಪ್ಪಿಸಿದರು. ಇದರ ಬೆನ್ನಲ್ಲೇ ಯಾಸ್ತಿಕಾ ಭಾಟಿಯಾ ರನೌಟ್​ ಆಗಿ ಪೆವಿಲಿಯನ್​ ಸೇರಿಕೊಂಡರು. ಇದರಿಂದ ತಂಡದ ಮೊತ್ತ 28 ರನ್​ಗಳಾಗುವಷ್ಟರಲ್ಲಿ ಮೂರು ಪ್ರಮುಖ ವಿಕೆಟ್​ಗಳನ್ನು ಟೀಂ ಇಂಡಿಯಾ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಆದರೆ, ನಂತರ ಬಂದ ಹರ್ಮನ್‌ಪ್ರೀತ್ ಕೌರ್ ಮತ್ತು ಜೆಮಿಮಾ ರಾಡ್ರಿಗಸ್ ಬಿರುಸಿನ ಬ್ಯಾಟಿಂಗ್​ ಬೀಸಿ ತಂಡಕ್ಕೆ ಚೇತರಿಕೆ ನೀಡಿದರು. 34 ಎಸೆತಗಳಲ್ಲಿ ಸಿಕ್ಸರ್​ ಮತ್ತು ಆರು ಬೌಂಡರಿಗಳೊಂದಿಗೆ ಹರ್ಮನ್‌ಪ್ರೀತ್ ಆಕರ್ಷಕ ಅರ್ಧ ಶತಕ ಬಾರಿಸಿದರು. ಇದರ ನಡುವೆ ಜೆಮಿಮಾ ಅರ್ಧ ಶತಕದ ಅಂಚಿನಲ್ಲಿ ಎಡವಿದರು. 24 ಎಸೆತಗಳಲ್ಲಿ ಆರು ಬೌಂಡರಿ ಸಮೇತ 43 ರನ್​ ಸಿಡಿಸಿದ್ದ ಜೆಮಿಮಾ, ಡಾರ್ಸಿ ಬ್ರೌನ್ ​ಬೌಲಿಂಗ್​ನಲ್ಲಿ ವಿಕೆಟ್​ ಒಪ್ಪಿಸಿದರು.

ಇದಾದ ಸ್ವಲ್ಪ ಹೊತ್ತಿನಲ್ಲಿ ಹರ್ಮನ್‌ಪ್ರೀತ್ ರನೌಟ್​ಗೆ ಸಿಲುಕಿದರು. ಇದೇ ತಂಡದ ಸೋಲಿಗೆ ಕಾರಣವೂ ಆಯಿತು. ನಂತರದಲ್ಲಿ ರಿಚಾ ಘೋಷ್​ (14) ಮತ್ತು ದೀಪ್ತಿ ಶರ್ಮಾ (20 ಅಜೇಯ), ಸ್ನೇಹಾ ರಾಣಾ (11) ರನ್​ ಬಾರಿಸಿ ತಂಡಕ್ಕೆ ನೆರವಾದರು. ಆದರೆ, ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯಾ ಪರವಾಗಿ ಡಾರ್ಸಿ ಬ್ರೌನ್, ಆಶ್ಲೀ ಗಾರ್ಡ್ನರ್ ತಲಾ ಎರಡು ವಿಕೆಟ್​ ಹಾಗೂ ಮೇಗನ್ ಶುಟ್, ಜೆಸ್ ಜೊನಾಸೆನ್ ತಲಾ ಒಂದು ವಿಕೆಟ್​ ಪಡೆದರು.

ಇದನ್ನೂ ಓದಿ:ಏಕದಿನ ಸರಣಿಗೆ ಆಸೀಸ್​ ತಂಡ ಪ್ರಕಟ: ಗಾಯಾಳುಗಳಾದ ಮ್ಯಾಕ್ಸಿ, ಮಾರ್ಷ್, ರಿಚರ್ಡ್​ಸನ್​ ವಾಪಸ್​

Last Updated : Feb 24, 2023, 2:45 PM IST

ABOUT THE AUTHOR

...view details