ಕರ್ನಾಟಕ

karnataka

By

Published : Mar 10, 2023, 1:19 PM IST

ETV Bharat / sports

ಮಹಿಳಾ ಪ್ರೀಮಿಯರ್​ ಲೀಗ್:​ ಪ್ಲೇ ಆಫ್‌​ ಹಂತ ತಲುಪುತ್ತಾ RCB? ಹೀಗಿದೆ ಲೆಕ್ಕಾಚಾರ

ಸತತ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಆರ್​ಸಿಬಿ ತಂಡ ಪ್ಲೇ ಆಫ್​ ಹಾದಿ ಹಿಡಿಯುವ ಬಗೆ ಹೇಗೆ ನೋಡೋಣ.

ಮಹಿಳಾ ಆರ್​ಸಿಬಿ ತಂಡ
ಮಹಿಳಾ ಆರ್​ಸಿಬಿ ತಂಡ

ಹೈದರಾಬಾದ್​: ಮಹಿಳಾ ಪ್ರೀಮಿಯರ್​ ಲೀಗ್​ 2023 ರ ಮೊದಲನೇ ಆವೃತ್ತಿಯಲ್ಲಿ ಮುಂಬೈ ತಂಡ ಭರ್ಜರಿ ಪ್ರದರ್ಶನ ತೋರುತ್ತಿದೆ. ಈವರೆಗೂ ಆಡಿರುವ ಮೂರು ಪಂದ್ಯಗಳಲ್ಲಿ ಹರ್ಮನ್​ ಪ್ರೀತ್​ ಕೌರ್​ ಬಳಗ ಗೆಲುವು ದಾಖಲಿಸುತ್ತ ಬಂದಿದ್ದು ಪ್ಲೇ ಆಫ್​​ ಹಾದಿಯನ್ನು ಮತ್ತಷ್ಟು ಸುಲಭ ಮಾಡಿಕೊಂಡಿದೆ. ಅಷ್ಟೇ ಅಲ್ಲ, ಅಂಕಪಟ್ಟಿಯಲ್ಲೂ ಮುಂಬೈ 4.228+ ಸರಾಸರಿಯ ರನ್​ ರೇಟ್​ ಹೊಂದಿದ್ದು ಅಗ್ರಸ್ಥಾನದ ಓಟ ಮುಂದುವರೆಸಿದೆ. ಒಂದೆಡೆ ಮುಂಬೈ ಅಬ್ಬರ ಮುಂದುವರೆದರೆ ಮತ್ತೊಂದೆಡೆ ಮಂಧಾನ ಪಡೆ ಸತತ ಸೋಲಿನಿಂದ ಕಂಗೆಟ್ಟಿದೆ.

ಸ್ಮತಿ ಮಂಧಾನ ನಾಯಕತ್ವದ ಆರ್​ಸಿಬಿ ಸತತ ಮೂರು ಪಂದ್ಯಗಳಲ್ಲೂ ನೀರಸ ಪ್ರದರ್ಶನ ತೋರಿದ್ದು, ಮೊದಲ ಆವೃತ್ತಿಯಲ್ಲೇ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಇನ್ನು ಆಡಿರುವ ಮೂರು ಪಂದ್ಯಗಳಲ್ಲಿ ಸೋತಿರುವ ಆರ್​ಸಿಬಿ -2.263 ರನ್​ ರೇಟ್‌ನೊಂದಿಗೆ ಮಹಿಳಾ ಪ್ರೀಮಿಯರ್​ ಲೀಗ್​ನ ಅಂಕಪಟ್ಟಿಯ ಕೊನೆಯ ಸ್ಥಾನಕ್ಕೆ ಮುಗ್ಗರಿಸಿದೆ.​ ಅಲ್ಲದೇ ಆರ್​ಸಿಬಿಯ ಪ್ಲೇ ಆಫ್​ ಹಾದಿ ಮತ್ತಷ್ಟು​ ಕಠಿಣವಾಗಿದೆ.

ಆವೃತ್ತಿಯ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್‌ಸಿಬಿ 60 ರನ್‌ಗಳ ಸೋಲು ಅನುಭವಿಸಿತು. ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 9 ವಿಕೆಟ್‌ಗಳ ಸೋಲು, ಮೂರನೇ ಪಂದ್ಯದಲ್ಲಿ ಗುಜರಾತ್ ವಿರುದ್ಧದ 11 ರನ್‌ಗಳಿಂದ ಸೋಲುವ ಮೂಲಕ ಟೂರ್ನಿಯಿಂದ ಹೊರಬೀಳುವ ಹಂತ ತಲುಪಿದೆ. ಇನ್ನುಳಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದೇ ಆದಲ್ಲಿ ಆರ್​ಸಿಬಿ ಪ್ಲೇ ಆಫ್​ಗೇರಲೂಬಹುದು.

ಆರ್​ಸಿಬಿ ಪ್ಲೇ ಆಫ್​ ಹಾದಿ- 1: ಆರ್​ಸಿಬಿ ಉಳಿದ 5 ಪಂದ್ಯಗಳಲ್ಲಿ ಉತ್ತಮ ರನ್​ ರೇಟ್​ನೊಂದಿಗೆ ಗೆಲ್ಲಬೇಕು. ಮುಂದಿನ ಯುಪಿ ವಾರಿಯರ್ಸ್​ ವಿರುದ್ಧದ ಎರಡು, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಜೈಂಟ್ಸ್ ವಿರುದ್ದ ಉಳಿದಿರುವ ಒಂದು ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕು. ಹೀಗಾದಲ್ಲಿ ಆರ್​ಸಿಬಿ 10 ಅಂಕಗಳನ್ನು ಹೊಂದಲಿದೆ. ಇನ್ನು ಗುಜರಾತ್ ಜೈಂಟ್ಸ್ ತಂಡ ಎರಡು ಪಂದ್ಯಗಳಲ್ಲಿ ಸೋಲನ್ನ ಅನುಭವಿಸಿದರೆ ಆರ್​ಸಿಬಿ ಅಗ್ರ ಮೂರರಲ್ಲಿ ಸ್ಥಾನ ಪಡೆಯಲಿದೆ.

ಆರ್​ಸಿಬಿ ಪ್ಲೇ ಆಫ್​ ಹಾದಿ- 2: ಒಂದು ವೇಳೆ ಆರ್​ಸಿಬಿ 5 ಪಂದ್ಯ ಗೆಲ್ಲಲು ಆಗದೇ ಇದ್ದಲ್ಲಿ ಕನಿಷ್ಠ ನಾಲ್ಕು ಪಂದ್ಯಗಳನ್ನಾದರೂ ಗೆಲ್ಲಲೇ ಬೇಕು. ಆದರೆ ಯುಪಿ ವಾರಿಯರ್ಸ್ 4 ಪಂದ್ಯ ಮತ್ತು ಗುಜರಾತ್​ ಜೈಂಟ್ಸ್​ ಮೂರು ಪಂದ್ಯಗಳಲ್ಲಿ ಸೋಲಬೇಕು. ಹೀಗಾದಲ್ಲಿ ಆರ್​ಸಿಬಿ 8 ಅಂಕಗಳೊಂದಿಗೆ ಪ್ಲೇ ಆಫ್​ಗೆ​ ಪ್ರವೇಶ ಪಡೆಯುತ್ತದೆ.

ಇಂದಿನ ಪಂದ್ಯ: ಮಹಿಳಾ ಪ್ರೀಮಿಯರ್​ ಲೀಗ್​ನ 8ನೇ ಪಂದ್ಯ ಇಂದು ಆರ್​​ಸಿಬಿ ಮತ್ತು ಯುಪಿ ವಾರಿಯರ್ಸ್​ ಮಧ್ಯೆ ನಡಯಲಿದೆ. ಮುಂಬೈನ ಬ್ರಬೋರ್ನ್​ ಸ್ಟೇಡಿಯಂನಲ್ಲಿ ಸಂಜೆ 7 ಗಂಟೆಗೆ ಪಂದ್ಯ ಪ್ರಾರಂಭವಾಗಲಿದೆ.

ಇದನ್ನೂ ಓದಿ:ಗಾಯಗೊಂಡಿದ್ದ ಬೆತ್​ ಮೂನಿ ಡಬ್ಲ್ಯುಪಿಎಲ್​ನಿಂದ ಔಟ್​.. ಗುಜರಾತ್ ತಂಡಕ್ಕೆ ಸ್ನೇಹ ರಾಣಾ ನಾಯಕಿ

ABOUT THE AUTHOR

...view details