ಮುಂಬೈ:ವಿಮೆನ್ಸ್ ಪ್ರೀಮಿಯರ್ ಲೀಗ್ನ ಚೊಚ್ಚಲ ಆವೃತ್ತಿಯಲ್ಲಿ ಈಗಾಗಲೇ ಎರಡು ತಂಡಗಳಿಗೆ ಪ್ಲೇ-ಆಫ್ ಪ್ರವೇಶ ಖಾತ್ರಿಯಾಗಿದೆ. ಇಂದಿನ ಮೊದಲ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವೆ ಪೈಪೋಟಿ ನಡೆಯಲಿದ್ದು, ವಾರಿಯರ್ಸ್ ಗೆದ್ದರೆ ಪ್ಲೇ-ಆಫ್ ಪ್ರವೇಶ ಪಡೆಯಲಿದೆ.
ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ದಾಖಲಿಸಿದ ಹುಮ್ಮಸ್ಸಿನಲ್ಲಿ ಯುಪಿ ಇದ್ದರೆ ಬೆಂಗಳೂರಿನೆದುರು ಸೋಲಿನ ಕಹಿಯಲ್ಲಿ ಸ್ನೇಹಾ ರಾಣಾ ಪಡೆ ಇದೆ. ಇಂದಿನ ಗೆಲುವು ಯುಪಿ ವಾರಿಯರ್ಸ್ಗೆ ಪ್ಲೇ-ಆಫ್ ಪ್ರವೇಶ ದೊರಕಿಸಿಕೊಡಲಿದೆ. ಇಂದು ಗುಜರಾತ್ ಯುಪಿಯನ್ನು ಮಣಿಸಿದರೆ, ಗುಜರಾತ್ ಹಾಗೂ ಬೆಂಗಳೂರಿನ ಪ್ಲೇ-ಆಫ್ ಕನಸು ಜೀವಂತವಾಗಿರಲಿದೆ. ನಾಳೆ ನಡೆಯುವ ಮುಂಬೈ- ಬೆಂಗಳೂರು ಪಂದ್ಯದಲ್ಲಿ ಯಾರು ಕ್ವಾಲಿಫೈ ಆಗುತ್ತಾರೆ ಎಂಬುದು ಫೈನಲ್ ಆಗಲಿದೆ. ಇಂದು ಯುಪಿ ಗೆದ್ದಲ್ಲಿ ಆರ್ಸಿಬಿ ಮತ್ತು ಜಿಜಿಯ ಪ್ರಯಾಣ ಲೀಗ್ನಲ್ಲೇ ಅಂತ್ಯವಾಗುತ್ತದೆ.
ಸಂಭಾವ್ಯ ತಂಡಗಳು: ಗುಜರಾತ್ ಜೈಂಟ್ಸ್: ಲಾರಾ ವೊಲ್ವಾರ್ಡ್ಟ್, ಸೋಫಿಯಾ ಡಂಕ್ಲೆ, ಎಸ್ ಮೇಘನಾ, ಆಶ್ಲೇ ಗಾರ್ಡನರ್, ಡಿ ಹೇಮಲತಾ, ಹರ್ಲೀನ್ ಡಿಯೋಲ್, ಸ್ನೇಹ ರಾಣಾ (ನಾಯಕಿ), ಅಶ್ವಿನಿ ಕುಮಾರಿ, ಸುಷ್ಮಾ ವರ್ಮಾ (ವಿಕೆಟ್ ಕೀಪರ್), ಕಿಮ್ ಗಾರ್ತ್, ತನುಜಾ ಕನ್ವರ್
ಯುಪಿ ವಾರಿಯರ್ಸ್:ಅಲಿಸ್ಸಾ ಹೀಲಿ (ನಾಯಕಿ ಮತ್ತು ವಿಕೆಟ್‌ಕೀಪರ್), ದೇವಿಕಾ ವೈದ್ಯ, ಕಿರಣ್ ನವಗಿರೆ, ತಹ್ಲಿಯಾ ಮೆಕ್‌ಗ್ರಾತ್, ಗ್ರೇಸ್ ಹ್ಯಾರಿಸ್, ದೀಪ್ತಿ ಶರ್ಮಾ, ಸೋಫಿ ಎಕ್ಲೆಸ್ಟೋನ್, ಸಿಮ್ರಾನ್ ಶೇಖ್, ಪಾರ್ಶ್ವಿ ಚೋಪ್ರಾ, ಅಂಜಲಿ ಸಾರ್ವಾನಿ, ಅಂಜಲಿ ಸಾರ್ವಾನಿ.
ನೇರ ಫೈನಲ್ಗೆ ಪ್ರವೇಶ ಪಡೆಯುತ್ತಾ ಎಂಐ?:ಇಂದಿನ ಎರಡನೇ ಪಂದ್ಯ ಅಂಕಪಟ್ಟಿಯ ಅಗ್ರಸ್ಥಾನದದಲ್ಲಿರುವ ಮುಂಬೈ ಮತ್ತು ಡೆಲ್ಲಿ ತಂಡಗಳ ನಡುವೆ ನಡೆಯಲಿದೆ. ಉಭಯ ತಂಡಗಳು ಪ್ಲೇ-ಆಫ್ ಅರ್ಹತೆ ಪಡೆದುಕೊಂಡಿದೆ. ಇಂದು ನಡೆಯುವ ಪಂದ್ಯದಲ್ಲಿ ಮುಂಬೈ ಗೆಲುವು ದಾಖಲಿಸಿದರೆ ನೇರ ಫೈನಲ್ ಪ್ರವೇಶ ಪಡೆಯುತ್ತದೆ.