ಮುಂಬೈ:ಚೊಚ್ಚಲವಿಮೆನ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಫೈನಲ್ ಹಂತಕ್ಕೆ ಬಂದಿದೆ. ಇಂದಿನ ಎರಡು ಪಂದ್ಯಗಳ ನಂತರ ನೇರ ಫೈನಲ್ ಪ್ರವೇಶಿಸುವ ತಂಡ ಯಾವುದು ಎಂದು ತಿಳಿಯಲಿದೆ. ಚೊಚ್ಚಲ ಲೀಗ್ನ ಪ್ರಶಸ್ತಿ ಪಂದ್ಯ ಮಾರ್ಚ್ 26ರಂದು ಭಾನುವಾರ ನಡೆಯಲಿದೆ. 24ರಂದು ಎಲಿಮಿನೇಟರ್ ನಡೆಯಲಿದ್ದು, ಯುಪಿ ವಾರಿಯರ್ಸ್ ಜೊತೆಗೆ ಯಾರು ಮುಖಾಮುಖಿ ಎಂದು ಕಾದು ನೋಡಬೇಕಿದೆ.
ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ ನಡುವೆ ಇಂದು 3:30ಕ್ಕೆ ಮುಂಬೈನ ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದರೆ ಬಹುತೇಕ ಮುಂಬೈ ಫೈನಲ್ಗೆ ನೇರ ಪ್ರವೇಶ ಪಡೆದಂತೆ. ಆದರೆ, ಸಂಜೆ ನಡೆಯುವ ಡೆಲ್ಲಿ ಮತ್ತು ವಾರಿಯರ್ಸ್ ಕದನದಲ್ಲಿ ಡೆಲ್ಲಿ ಉತ್ತಮ ರನ್ ರೇಟ್ನಿಂದ ಗೆದ್ದಲ್ಲಿ ಕ್ಯಾಪಿಟಲ್ಸ್ಗೆ ಫೈನಲ್ ಪ್ರವೇಶ ಸಿಗಲಿದೆ.
ನೇರ ಫೈನಲ್ ಪ್ರವೇಶ ಹೇಗೆ?:ವಿಮೆನ್ಸ್ ಪ್ರೀಮಿಯರ್ ಲೀಗ್ನ ಅಂತಿಮದಲ್ಲಿ ಅಂಕಪಟ್ಟಿಯಲ್ಲಿ ಯಾರು ಅಗ್ರಸ್ಥಾನದಲ್ಲಿ ಇರುತ್ತಾರೋ ಅವರು ನೇರ ಫೈನಲ್ ಪ್ರವೇಶ ಪಡೆಯುತ್ತಾರೆ. ಎರಡು ಮತ್ತು ಮೂರನೇ ಸ್ಥಾನದಲ್ಲಿರುವವರು ಎಲಿಮಿನೇಟರ್ನಲ್ಲಿ ಗೆದ್ದು, ಫೈನಲ್ ಆಡಬೇಕಿದೆ. ಪ್ರಸ್ತುತ 7 ರಲ್ಲಿ 5 ಪಂದ್ಯ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ 10 ಅಂಕ ಗಳಿಸಿ ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿದ್ದಾರೆ. ಡೆಲ್ಲಿ ಕ್ಯಪಿಟಲ್ಸ್ ನಿನ್ನೆ ಮುಂಬೈ ಇಂಡಿಯನ್ಸ್ ಮಣಿಸಿ ಅಗ್ರಸ್ಥಾನಕ್ಕೇರಿದೆ. ಮೆಗ್ ಲ್ಯಾನಿಂಗ್ ಪಡೆಗೆ +1.97 ರನ್ ರೇಟ್ ಇದ್ದು, ಮುಂಬೈಗೆ +1.72 ರನ್ ರೇಟ್ ಇದೆ. ಇಂದಿನ ಪಂದ್ಯದಲ್ಲಿ ಮುಂಬೈ ಮತ್ತು ಡೆಲ್ಲಿ ಗೆಲುವು ಸಾಧಿಸಿದರೆ ರನ್ ರೇಟ್ ಆಧಾರದಲ್ಲಿ ನೇರ ಫೈನಲ್ ಪ್ರವೇಶ ಸಿಗಲಿದೆ.
ಆರ್ಸಿಬಿ vs ಮುಂಬೈ ಇಂಡಿಯನ್ಸ್:ಭಾರತ ತಂಡ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಉಪನಾಯಕಿ ಸ್ಮೃತಿ ಮಂಧಾನ ನಡುವೆ ಇಂದಿನ ಮೊದಲ ಫೈಟ್ ನಡೆಯಲಿದೆ. ಆರ್ಸಿಬಿಗೆ ಇದು ಔಪಚಾರಿಕ ಪಂದ್ಯವಾಗಿದ್ದರೆ, ಮುಂಬೈಗೆ ಬೃಹತ್ ಗೆಲುವು ನೇರ ಫೈನಲ್ ಪ್ರವೇಶಕ್ಕೆ ಬೇಕಿದೆ. ಮುಂಬೈ ಸತತ ಎರಡು ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಎದುರಿಸುತ್ತಿದ್ದು ತಂಡದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ.
ಸಂಭಾವ್ಯ ತಂಡಗಳು: ಆರ್ಸಿಬಿ- ಸೋಫಿ ಡಿವೈನ್, ಸ್ಮೃತಿ ಮಂಧಾನ (ನಾಯಕಿ), ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್ (ವಿಕೆಟ್ ಕೀಪರ್), ಕನಿಕಾ ಅಹುಜಾ, ಶ್ರೇಯಾಂಕಾ ಪಾಟೀಲ್, ದಿಶಾ ಕಸತ್, ಮೇಗನ್ ಶುಟ್, ಆಶಾ ಶೋಬನಾ, ಪ್ರೀತಿ ಬೋಸ್