ಮುಂಬೈ(ಮಹಾರಾಷ್ಟ್ರ):ಮಹಿಳಾ ಪ್ರೀಮಿಯರ್ ಲೀಗ್ನ ಚೊಚ್ಚಲ ಟ್ರೋಫಿಯನ್ನು ಮುಂಬೈ ವನಿತೆಯರು ಗೆದ್ದು ಬೀಗಿದ್ದಾರೆ. ಫೈನಲ್ ಪಂದ್ಯದಲ್ಲಿ ಡೆಲ್ಲಿ ತಂಡ ನೀಡಿದ್ದ 132 ರನ್ಗಳ ಗುರಿಯನ್ನು ಹರ್ಮನ್ ಪ್ರೀತ್ ಕೌರ್ ಪಡೆ ಕೇವಲ 3 ವಿಕೆಟ್ಗಳನ್ನು ಕಳೆದುಕೊಂಡು ಪೂರೈಸಿತು. ಈ ಮೂಲಕ 7 ವಿಕೆಟ್ಗಳಿಂದ ಮುಂಬೈ ಗೆಲುವು ಸಾಧಿಸಿತು.
ಇಂದು ಇಲ್ಲಿನ ಬ್ರಾಬೋರ್ನ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ, ಬೃಹತ್ ರನ್ಗಳನ್ನು ಪೇರಿಸುವಲ್ಲಿ ಡೆಲ್ಲಿ ತಂಡಕ್ಕೆ ಸಾಧ್ಯವಾಗಲಿಲ್ಲ. ಡೆಲ್ಲಿ ನೀಡಿದ್ದ 132 ರನ್ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ತಂಡ ಸಹ ನಿರೀಕ್ಷಿತ ಉತ್ತಮ ಆರಂಭ ಪಡೆಯಲಿಲ್ಲ.
ಆರಂಭಿಕವಾಗಿ ಬಂದ ಹೇಲಿ ಮ್ಯಾಥ್ಯೂಸ್ 13 ಮತ್ತು ಯಾಸ್ತಿಕಾ ಭಾಟಿಯಾ 4 ರನ್ ಮಾತ್ರ ಬಾರಿಸಿದರು. ನಂತರ ಬಂದ ನಾಟ್ ಸ್ಕೈವರ್ ಬ್ರಂಟ್ ಆಕರ್ಷಕ ಅಜೇಯ ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 55 ಎಸತೆಗಳನ್ನು ಎದುರಿಸಿದ ಬ್ರಂಟ್ ಏಳು ಬೌಂಡರಿಗಳ ಸಮೇತ 60 ರನ್ ಬಾರಿಸಿದರು. ಮತ್ತೊಂದೆಡೆ, ಹರ್ಮನ್ಪ್ರೀತ್ ಕೌರ್ ಕೂಡ ಉತ್ತಮ ಬ್ಯಾಟ್ ಬಿಸಿ ತಂಡದಲ್ಲಿ ಗೆಲುವಿಗೆ ಕಾರಣವಾದರು. 39 ಬಾಲ್ಗಳಲ್ಲಿ 5 ಬೌಂಡರಿಗಳೊಂದಿಗೆ 37 ರನ್ ಬಾರಿಸಿದರು. ಇದರ ನಡುವೆ ಪಂದ್ಯ ರೋಚಕ ಘಟ್ಟಕ್ಕೆ ತಲುಪಿತ್ತು. ಮೆಲಿ ಕೇರ್ 2 ಬೌಂಡರಿಗಳ ಸಮೇತ 14 ರನ್ ಬಾರಿಸಿ ಗೆಲುವಿನ ತಂಡದ ಕೊಡುಗೆ ನೀಡಿದರು. ಕೊನೆಗೆ 19.3 ಓವರ್ಗಳಲ್ಲಿ 134 ರನ್ಗಳನ್ನು ಮುಂಬೈ ಬಾರಿಸಿತು.
ಡೆಲ್ಲಿ ಇನ್ಸಿಂಗ್: ಡೆಲ್ಲಿ ಉತ್ತಮ ಆರಂಭವನ್ನು ಪಡೆಯಲು ಮೆಗ್ ಲ್ಯಾನಿಂಗ್ ಪಡೆಗೆ ಸಾಧ್ಯವಾಗಲಿಲ್ಲ. ಆರಂಭಿಕರಾಗಿ ಕ್ರೀಸ್ಗೆ ಬಂದ ನಾಯಕಿ ಲ್ಯಾನಿಂಗ್ ಹಾಗೂ ಶಫಾಲಿ ವರ್ಮಾ ಜೋಡಿ ತಂಡದ ಮೊತ್ತ 12 ರನ್ಗಳು ಆಗುವಷ್ಟರಲ್ಲಿ ಬೇರ್ಪಟ್ಟಿತ್ತು. ಪವರ್ ಫ್ಲೇನಲ್ಲೇ 4 ಎಸತೆಗಳಲ್ಲಿ ತಲಾ ಒಂದು ಸಿಕ್ಸರ್, ಬೌಂಡರಿ ಸಮೇತ 11 ರನ್ ಬಾರಿಸಿ ಶಫಾಲಿ ವರ್ಮಾ ವಿಕೆಟ್ ಒಪ್ಪಿಸಿದರು. ಇಸ್ಸಿ ವಾಂಗ್ ಎರಡನೇ ಓವರ್ನಲ್ಲಿ ಮೆಲಿ ಕೆರ್ ಕೈಗೆ ಶಫಾಲಿ ಕ್ಯಾಚ್ ಕೊಟ್ಟು ನಿರ್ಗಮಿಸಿದರು.
ಬಳಿಕ ಬಂದ ಆಲಿಸ್ ಕ್ಯಾಪ್ಸೆ ಕೂಡ ಅದೇ ಓವರ್ನಲ್ಲಿ ಶೂನ್ಯಕ್ಕೆ ಔಟ್ ಆದರು. ಈ ಮೂಲಕ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಪೆವಿಲಿಯನ್ ಸೇರಿದರು. ನಂತರ ನಾಯಕಿ ಮೆಗ್ ಲ್ಯಾನಿಂಗ್ಗೆ ಜೊತೆಯಾದ ಜೆಮಿಯಾ ರಾಡ್ರಿಗಸ್ ಎರಡು ಆರ್ಕಷಕ ಬೌಂಡರಿ ಹೊಡೆಯುವ ಮೂಲಕ ಒಳ್ಳೆಯ ರನ್ ಕಲೆಹಾಕುವ ಮುನ್ಸೂಚನೆ ಕೊಟ್ಟರು. ಆದರೆ, ಮತ್ತೆ 4ನೇ ಓವರ್ ಬೌಲಿಂಗ್ ಮಾಡಲು ಬಂದ ಇಸ್ಸಿ ವಾಂಗ್ ಅವರು ರಾಡ್ರಿಗಸ್ ವಿಕೆಟ್ ಕಿತ್ತಿದರು. ಇನ್ನು, ಆಲ್ರೌಂಡರ್ ಮರಿಜಾನ್ನೆ ಕಪ್ ಮತ್ತು ನಾಯಕಿ ಲ್ಯಾನಿಂಗ್ ನಿಧಾನ ಗತಿಯಲ್ಲಿ ಬ್ಯಾಟ್ ಬೀಸಿ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು.
ಇದರ ನಡುವೆ ಬೌಲರ್ ಮೆಲಿ ಕೆರ್ ಅವರು 18 ರನ್ ಗಳಿಸಿದ್ದ ಮರಿಜಾನ್ನೆ ಕಪ್ ವಿಕೆಟ್ ಪಡೆದರು. ಇದರಿಂದ ತಾಳ್ಮೆಯ ಪ್ರರ್ದಶಿಸಿದ ನಾಯಕಿ ಲ್ಯಾನಿಂಗ್ 35 ರನ್ಗಳನ್ನು ಕಲೆ ಹಾಕಿದ್ದಾಗ ರನ್ ಔಟ್ ಬಲೆಗೆ ಬಿದ್ದರು. ಇದರ ಬೆನ್ನಲ್ಲೇ ಮತ್ತೊಬ್ಬ ಬ್ಯಾಟರ್ ಆರುಧಂತಿ ರೆಡ್ಡಿ ಕೂಡ ಮೆಲಿ ಕೆರ್ ಬಾಲಿಂಗ್ನಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಬಳಿಕ ಮಿನ್ನು ಮಣಿ (1) ರನ್, ತನಿಯಾ ಭಾಟಿಯಾ (0) ಬೇಗನ ಪೆವಿಲಿಯನ್ ಸೇರಿದರು. ಕೊನೆಯಲ್ಲಿ ಶಿಖಾ ಪಾಂಡೆ ಮತ್ತು ರಾಧಾ ಯಾದವ್ 27 ರನ್ಗಳ ಕೊಡುಗೆ ನೀಡಿದರು. ಅಂತಿಮ ವಿಕೆಟ್ಗೆ 50 ರನ್ಗಳ ಜೊತೆಯಾಟ ನೀಡಿ ಅಜೇಯರಾಗಿದರು. ಅಲ್ಲದೆ, ಈ ಜೋಡಿ ತಂಡ ಮೊತ್ತವನ್ನು 100ರ ಗಡಿ ದಾಟಿಸಿತು. ಇದಲ್ಲದೇ, ನಿಗದಿತ 20 ಓವರ್ಗಳಲ್ಲಿ ಡೆಲ್ಲಿ 9 ವಿಕೆಟ್ ಕಳೆದುಕೊಂಡು 139 ರನ್ ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕಲು ನೆರವಾದರು.