ಕರ್ನಾಟಕ

karnataka

ETV Bharat / sports

ವನಿತೆಯರ ಏಷ್ಯಾಕಪ್​ ಟಿ 20: ಭಾರತಕ್ಕೆ ಸುಲಭ ತುತ್ತಾದ ಥಾಯ್ಲೆಂಡ್​​​, ಸೆಮೀಸ್​ಗೆ ಎಂಟ್ರಿಕೊಟ್ಟ ಇಂಡಿಯನ್​ ವುಮೆನ್ಸ್​ - ಈಟಿವಿ ಭಾರತ ಕನ್ನಡ

ಥಾಯ್ಲೆಂಡ್​​ ವಿರುದ್ಧ ಭರ್ಜರಿ ಬೌಲಿಂಗ್​ ಪ್ರದರ್ಶಿಸಿದ ಭಾರತ ವನಿತೆಯರು 9 ವಿಕೆಟ್​ಗಳ ಜಯ ದಾಖಲಿಸಿದ್ದಾರೆ. ಅರ್ಹತಾ ಆರು ಪಂದ್ಯಗಳಲ್ಲಿ ಐದನ್ನು ಗೆದ್ದು ಭಾರತ 10 ಅಂಕ ಗಳಿಸಿ ಟಾಪ್​ನಲ್ಲಿದೆ.

India vs Thailand match report
ಭಾರತಕ್ಕೆ ಸುಲಭ ತುತ್ತಾದ ಥೈಲ್ಯಾಂಡ್

By

Published : Oct 10, 2022, 4:10 PM IST

ಸಿಲ್ಹೆಟ್ (ಬಾಂಗ್ಲಾದೇಶ):ಭಾರತ ವನಿತೆಯರು ಮತ್ತು ಥಾಯ್ಲೆಂಡ್​ ವನಿತೆಯರ ನಡುವಿನ ಏಷ್ಯಾಕಪ್​ ಪಂದ್ಯದಲ್ಲಿ ಭಾರತ 9 ವಿಕೆಟ್​ಗಳ ಜಯ ಗಳಿಸಿದೆ. ಥಾಯ್ಲೆಂಡ್​ ನೀಡಿದ್ದ 38 ರನ್​ಗಳ ಸುಲಭ ಗುರಿಯನ್ನು ಒಂಡು ವಿಕೆಟ್​ ನಷ್ಟದಿಂದ ಭಾರತ ಜಯಿಸಿತು. ಈ ಮೂಲಕ ಆರು ಪಂದ್ಯಗಳಲ್ಲಿ 5 ಗೆದ್ದು 10 ಅಂಕಗಳಿಂದ ಸೆಮಿಫೈನಲ್​ ಪಂದ್ಯಕ್ಕೆ ಕ್ವಾಲಿಫೈ ಆಗಿದೆ.

ಥಾಯ್ಲೆಂಡ್​ ನೀಡಿದ್ದ 38 ರನ್​ಗಳ ಗುರಿಯನ್ನು ಬೆನ್ನು ಹತ್ತಿದ ಭಾರತ 6 ಓವರ್​ಗೆ ಒಂದು ವಿಕೆಟ್​ ಕಳೆದುಕೊಂಡು ಗೆಲುವು ಸಾಧಿಸಿದೆ. ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ(8) ಬೂಚತಮ್​ಗೆ ವಿಕೆಟ್​ ಒಪ್ಪಿಸಿದರು. ಸಬ್ಬಿನೇನಿ ಮೇಘನಾ(20) ಮತ್ತು ಪೂಜಾ ವಸ್ತ್ರಕರ್(12) ರನ್​ ಗಳಿಸಿ 6 ಓವರ್​ಗಳಲ್ಲಿ​ 40 ರನ್​ ಬಾರಿಸುವ ಮೂಲಕ ಸುಲಭ ಜಯ ಸಾಧಿಸಿದರು.

ಮೊದಲ ಇನ್ನಿಂಗ್ಸ್​ : ಟಾಸ್​ಗೆದ್ದ ಮಂದಾನ ಬೌಲಿಂಗ್​ ಆಯ್ಕೆ ಮಾಡಿಕೊಂಡರು. ಬ್ಯಾಟಿಂಗ್​ಗೆ ಇಳಿದ ಥಾಯ್ಲೆಂಡ್​ ತಂಡಕ್ಕೆ ಭಾರತೀಯ ಬೌಲರ್​ಗಳು ಕಾಡಿದರು. ಥಾಯ್ಲೆಂಡ್​ ಪರ ಎನ್ ಕೊಂಚರೊಯೆಂಕೈ 12 ರನ್​ ಗಳಿಸಿದ್ದು ಬಿಟ್ಟರೆ, ಮತ್ತಾರು ಹತ್ತು ರನ್​ನ ಗಡಿ ಮುಟ್ಟಲೇ ಇಲ್ಲ. ಮೂರು ಜನ ಸೊನ್ನೆ ಸುತ್ತಿದರು. ಯಾರೋಬ್ಬರೂ ಕ್ರೀಸ್​ನಲ್ಲಿ ನಿಲ್ಲಲಿಲ್ಲ. 15.1 ಓವರ್​ಗೆ 37 ರನ್​ ಗಳಿಸಿ ತನ್ನೆಲ್ಲಾ ವಿಕೆಟ್​ಗಳನ್ನು ಥಾಯ್ಲೆಂಡ್​ ಕಳೆದು ಕೊಂಡಿತು.

ಭಾರತ ಪರ ಸ್ನೇಹ ರಾಣಾ (3), ರಾಜೇಶ್ವರಿ ಗಾಯಕ್ವಾಡ್(2), ದೀಪ್ತಿ ಶರ್ಮಾ(2) ಮತ್ತು ಮೇಘನಾ ಸಿಂಗ್ (1)ಮ ವಿಕೆಟ್​ ಪಡೆದರು. ನಾಲ್ಕು ಓವರ್​ ಹಾಕಿ 3 ವಿಕೆಟ್​ ಪಡೆದು 9 ರನ್​ ಬಿಟ್ಟುಕೊಟ್ಟು 2.25 ಎಕಾನಮಿಯಲ್ಲಿ ಬೌಲಿಂಗ್​ ಮಾಡಿದ ಸ್ನೇಹ ರಾಣಾಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.

ಇದನ್ನೂ ಓದಿ :ಮಹಿಳಾ ಏಷ್ಯಾ ಕಪ್​ : ಭಾರತಕ್ಕೆ 59 ರನ್​ಗಳ ಗೆಲುವು, ಶಫಾಲಿ ವರ್ಮಾ ಆಕರ್ಷಕ ಅರ್ಧ ಶತಕ

ABOUT THE AUTHOR

...view details