ಕರ್ನಾಟಕ

karnataka

ETV Bharat / sports

Womens T20: ಇಂಗ್ಲೆಂಡ್​ ವಿರುದ್ಧ ದಾಖಲೆಯ ರನ್​ ಚೇಸ್​ ಮಾಡಿ ಗೆದ್ದ ಆಸ್ಟ್ರೇಲಿಯಾ

170 ರನ್​ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಕೇವಲ ಒಂದು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ನಾಯಕಿ ಮೆಗ್ ಲ್ಯಾನಿಂಗ್ 44 ಎಸೆತಗಳಲ್ಲಿ 8 ಬೌಂಡರಿಗಳ ಸಹಿತ ಅಜೇಯ 64 ರನ್​ಗಳಿಸಿದರೆ, ತಹಿಲಾ ಮೆಕ್​ಗ್ರಾತ್​ 49 ಎಸೆತಗಳಲ್ಲಿ 13 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ ಅಜೇಯ 91 ರನ್​ಗಳಿಸಿ ಗೆಲುವಿನ ರೂವಾರಿಗಳಾದರು.

By

Published : Jan 20, 2022, 8:09 PM IST

Australia beat England in record chase match
ಇಂಗ್ಲೆಂಡ್​ ವಿರುದ್ಧ ದಾಖಲೆಯ ರನ್​ ಚೇಸ್​ ಮಾಡಿದ ಆಸ್ಟ್ರೇಲಿಯಾ

ಅಡಿಲೇಡ್​: ಇಗ್ಲೆಂಡ್ ಮಹಿಳಾ ತಂಡದ ವಿರುದ್ಧ ಗುರುವಾರ ನಡೆದ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡ ದಾಖಲೆಯ ರನ್​ ಚೇಸ್​ ಮಾಡಿ ಗೆಲುವು ಸಾಧಿಸಿದೆ.

ಅಡಿಲೇಡ್​​ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮಹಿಳಾ ತಂಡ 20 ಓವರ್​ಗಳಲ್ಲಿ 54 ಎಸೆತಗಳಲ್ಲಿ 4 ವಿಕೆಟ್ ಕಳೆದುಕೊಂಡು 169 ರನ್​ಗಳಿಸಿತ್ತು. ಡೇನಿಯಲ್ ವೇಟ್​ 54 ಎಸೆತಗಳಲ್ಲಿ 6 ಬೌಂಡರಿ 3 ಸಿಕ್ಸರ್ ಸಹಿತ 70 ರನ್​ಗಳಿಸಿದರೆ, ಬ್ಯೂಮಾಂಟ್​ 24 ಎಸೆತಗಳಲ್ಲಿ 30, ನ್ಯಾಟ್ ಸೀವರ್​ 23 ಎಸೆತಗಳಲ್ಲಿ 32 ರನ್​ಗಳಿಸಿದ್ದರು. ತಹಿಲಾ ಮೆಕ್​ಗ್ರಾಕ್​ 26ಕ್ಕೆ 3, ಅಲನ್ ಕಿಂಗ್ 28ಕ್ಕೆ 1 ವಿಕೆಟ್ ಪಡೆದಿದ್ದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಇನ್ನು 170 ರನ್​ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಕೇವಲ ಒಂದು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ನಾಯಕಿ ಮೆಗ್ ಲ್ಯಾನಿಂಗ್ 44 ಎಸೆತಗಳಲ್ಲಿ 8 ಬೌಂಡರಿಗಳ ಸಹಿತ ಅಜೇಯ 64 ರನ್​ಗಳಿಸಿದರೆ, ತಹಿಲಾ ಮೆಕ್​ಗ್ರಾತ್​ 49 ಎಸೆತಗಳಲ್ಲಿ 13 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ ಅಜೇಯ 91 ರನ್​ಗಳಿಸಿ ಗೆಲುವಿನ ರೂವಾರಿಗಳಾದರು.

ದಾಖಲೆಯ ರನ್​ ಚೇಸ್​

ಇನ್ನು 3 ಓವರ್​ಗಳು ಬಾಕಿ ಉಳಿದಿರುವಂತೆ ಇಂಗ್ಲೆಂಡ್​ ನೀಡಿದ್ದ 170 ರನ್​ಗಳನ್ನು ಯಶಸ್ವಿಯಾಗಿ ಬೆನ್ನಟ್ಟು ಮೂಲಕ ಆಸ್ಟ್ರೇಲಿಯಾ ತನ್ನ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ಮೊತ್ತವನ್ನು ಚೇಸ್​ ಮಾಡಿದ ದಾಖಲೆ​ಗೆ ಪಾತ್ರವಾಯಿತು. ಈ ಹಿಂದೆ 2018ರಲ್ಲಿ ನ್ಯೂಜಿಲ್ಯಾಂಡ್ ತಂಡದ ವಿರುದ್ಧ 163 ರನ್​ಗಳ ಗುರಿಯನ್ನು ಬೆನ್ನಟ್ಟಿದ್ದು ಇಲ್ಲಿಯವರೆಗಿನ ದಾಖಲೆಯಾಗಿತ್ತು.

ಮಹಿಳಾ ಟಿ20ಯಲ್ಲಿ ಅಗ್ರ 5 ಯಶಸ್ವಿ ರನ್​ ಚೇಸ್​

ಇಂಗ್ಲೆಂಡ್ -199 vs ಭಾರತ

ಇಂಗ್ಲೆಂಡ್​ -179 vs ಆಸ್ಟ್ರೇಲಿಯಾ

ಭಾರತ -174 vs ಆಸ್ಟ್ರೇಲಿಯಾ

ದಕ್ಷಿಣ ಆಫ್ರಿಕಾ -173 vs ಪಾಕಿಸ್ತಾನ

ಆಸ್ಟ್ರೇಲಿಯಾ- 170 vs ಇಂಗ್ಲೆಂಡ್​

ಇದನ್ನೂ ಓದಿ: ವೆಂಕಟೇಶ್ ಅಯ್ಯರ್​ಗೆ ಬೌಲಿಂಗ್ ನೀಡದ ಕಾರಣ ಬಹಿರಂಗ ಪಡಿಸಿದ ಶಿಖರ್​ ಧವನ್​!

ABOUT THE AUTHOR

...view details