ಹೈದರಾಬಾದ್: ಟಿ20, ಟಿ10 ಮಾದರಿಯ ಕ್ರಿಕೆಟ್ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ನ ಕ್ರೇಜ್ನ್ನು ಕಮ್ಮಿ ಮಾಡಿದೆ. ಪುರುಷರ ಮಾದರಿಯ ಕ್ರಿಕೆಟ್ನಲ್ಲೇ ಟೆಸ್ಟ್ ಕ್ರಿಕೆಟ್ ವರ್ಷದಲ್ಲಿ ಬೆರಳೆಣಿಕೆಗೆ ಇಳಿಕೆ ಆಗಿದೆ. ಇನ್ನು ವನಿತೆಯರ ಕ್ರಿಕೆಟ್ ವಿಭಾಗದಲ್ಲಿ ಹೆಚ್ಚು ಚಿರಪರಿಚಿತ ಆಗಿರುವುದು ಚುಟುಕು ಮಾದರಿಯ ಕ್ರಿಕೆಟ್ ಮಾತ್ರ. ವನಿತೆಯ ಟಿ20 ಕ್ರಿಕೆಟ್ಗೂ ಇನ್ನೂ ದೊಡ್ಡ ಮಟ್ಟಿನ ಅಭಿಮಾನಿಗಳು ಹುಟ್ಟಿಕೊಂಡಿಲ್ಲ. ಆದರೆ, ಲೀಗ್ ಕ್ರಿಕೆಟ್ಗಳ ಮೂಲಕ ಅವುಗಳೂ ಪ್ರವರ್ಧಮಾನಕ್ಕೆ ಬರುತ್ತಿದೆ.
ಈ ಪೀಠಿಕೆ ಹಾಕಲು ಕಾರಣ ಭಾರತದಲ್ಲಿ ಮಹಿಳೆಯರ ಟೆಸ್ಟ್ ಕ್ರಿಕೆಟ್ ಬರೋಬ್ಬರಿ 9 ವರ್ಷಗಳ ನಂತರ ನಡೆಯುತ್ತಿದೆ ಎಂಬುದನ್ನು ಹೇಳಲು. 'ಭಾರತದ ವನಿತೆಯರ ಕ್ರಿಕೆಟ್ 2019ರ ನಂತರ ಪುರುಷರ ಕ್ರಿಕೆಟ್ಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ಸಾಧಿಸಿದೆ' ಎಂದು ಮಾಜಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ.
ಆದರೆ ಬಾಲ್- ಬ್ಯಾಟ್ನ ಆಟದಲ್ಲಿ ಟೆಸ್ಟ್ ಮಾದರಿಯನ್ನು ಸ್ಕಿಲ್ ಮತ್ತು ನೈಜ ಕ್ರಿಕೆಟ್ ಎಂದು ಕರೆಯಲಾಗುತ್ತದೆ. ಆದರೆ, ವನಿತೆಯರ ಕ್ರಿಕೆಟ್ ತಂಡಕ್ಕೆ ಹೆಚ್ಚಿನ ಟೆಸ್ಟ್ ಪಂದ್ಯಗಳನ್ನು ಆಡಿಸುತ್ತಿಲ್ಲ ಬಿಸಿಸಿಐ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ದೇಶಗಳ ನಡುವೆ ಆಶಸ್ ಸರಣಿ ನಡೆಯುವುದರಿಂದ ವಾರ್ಷಿಕವಾಗಿ ಒಂದು ಟೆಸ್ಟ್ ಸರಣಿ ಆದರೂ ನಡೆಯುತ್ತದೆ. ಆದರೆ, ಭಾರತಕ್ಕೆ ಈ ರೀತಿಯ ಯಾವುದೇ ಟೆಸ್ಟ್ ಸರಣಿಗಳಿಲ್ಲ.
ದೇಶೀಯ ಋತುವಿನಲ್ಲೂ ಟೆಸ್ಟ್ ಪಂದ್ಯ ಬೇಕು:ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ಗೂ ಮುನ್ನ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಪನಾಯಕಿ ಸ್ಮೃತಿ ಮಂಧಾನ, ಅಂತಾರಾಷ್ಟ್ರೀಯವಾಗಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ನಡೆಸಿದರೆ, ದೇಶೀಯ ವನಿತೆಯರ ಕ್ರಿಕೆಟ್ ಋತುವಿನಲ್ಲೂ 4 ಅಥವಾ 2 ದಿನದ ಟೆಸ್ಟ್ ಮಾದರಿಯ ಪಂದ್ಯಗಳನ್ನು ಆಡಿಸಬಹುದು. ಇದರಿಂದ ಆಟಗಾರ್ತಿಯರಿಗೆ ಅನುಭವ ಸಿಗುತ್ತದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಅಭ್ಯಾಸಕ್ಕೂ ಮುನ್ನ ಹೆಚ್ಚಿ ಆಟಗಾರ್ತಿಯರು ಕೋಚ್ ಬಳಿ ಟೆಸ್ಟ್ನ ಮನಸ್ಥಿತಿ ಏನು ಎಂದು ಪ್ರಶ್ನೆ ಮಾಡುತ್ತಿದ್ದಾರೆ" ಎಂದಿದ್ದರು.