ಕರ್ನಾಟಕ

karnataka

ETV Bharat / sports

ಮಹಿಳಾ ಕ್ರಿಕೆಟ್‌: 4ನೇ ಟಿ20 ಸೋತ ಭಾರತ; ಸರಣಿ ಗೆದ್ದ ಆಸ್ಟ್ರೇಲಿಯಾ - ಈಟಿವಿ ಭಾರತ ಕನ್ನಡ

ಭಾರತ-ಆಸ್ಟ್ರೇಲಿಯಾ 4ನೇ ಟಿ20: 189 ರನ್ ಗುರಿ ಹೊಂದಿದ್ದ ಭಾರತ 20 ಓವರ್​ಗಳಲ್ಲಿ 181 ರನ್​ಗಳಿಗೆ ಆಲೌಟ್​ ಆಗುವ ಮೂಲಕ ಸೋಲು ಕಂಡಿತು.

Australia won by seven runs
ಆಸ್ಟ್ರೇಲಿಯಾಗೆ ಜಯ

By

Published : Dec 18, 2022, 10:02 AM IST

Updated : Dec 18, 2022, 10:58 AM IST

ಮುಂಬೈ: ಇಲ್ಲಿ ಶನಿವಾರ ನಡೆದ ನಾಲ್ಕನೇ ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಭಾರತದ ವಿರುದ್ಧ ಏಳು ರನ್​ಗಳಿಂದ ಜಯ ಸಾಧಿಸಿತು. ಗೆಲುವಿಗಾಗಿ 189 ರನ್​ ಗುರಿ ಬೆನ್ನತ್ತಿದ್ದ ಭಾರತ 20 ಓವರ್​ಗಳಲ್ಲಿ 181 ರನ್​ಗಳಿಗೆ ಆಲೌಟ್​ ಆಗಿ ನಿರಾಶೆ ಅನುಭವಿಸಿತು. ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್​ 30 ಎಸೆತಗಳಲ್ಲಿ 46 ರನ್​ ಗಳಿಸಿದರು.

ಮೊದಲು ಬ್ಯಾಟ್ ಮಾಡಿದ ಪ್ರವಾಸಿ ಆಸ್ಟ್ರೇಲಿಯಾ ಉತ್ತಮ ಪ್ರದರ್ಶನ ನೀಡಿದ್ದು 3 ವಿಕೆಟ್​ಗೆ 188 ರನ್ ಗಳಿಸಿತು. ಎಲ್ಲಿಸ್​ ಪೆರ್ರಿ ಔಟಾಗದೆ 72 ರನ್​ ಗಳಿಸಿ ಗೆಲುವಿನ ರುವಾರಿಯಾದರು. ಅಶ್ಲೀಗ್​ ಗಾರ್ಡ್ನರ್ 42 ರನ್ ಕಲೆ ಹಾಕುವ ಮೂಲಕ ಪೆರ್ರಿಗೆ ಉತ್ತಮ ಸಾಥ್ ಕೊಟ್ಟರು.

ಭಾರತದ ಪರ ದೀಪ್ತಿ ಶರ್ಮಾ 2 ವಿಕೆಟ್ ಪಡೆದರೆ, ನಾಯಕಿ ಹರ್ಮನ್ ಪ್ರೀತ್​ ಒಂದು ವಿಕೆಟ್ ಕಿತ್ತರು. ಐದು ಪಂದ್ಯಗಳ ಚುಟುಕು ಸರಣಿಯಲ್ಲಿ ಆಸ್ಟ್ರೇಲಿಯಾ ಮೊದಲ, ಮೂರನೇ ಮತ್ತು ನಾಲ್ಕನೇ ಪಂದ್ಯದಲ್ಲಿ ಗೆದ್ದರೆ, ಭಾರತ ಎರಡನೇ ಪಂದ್ಯದಲ್ಲಿ ಜಯಶಾಲಿಯಾಗಿತ್ತು. ಈ ಮೂಲಕ ಭಾರತ ಮಹಿಳೆಯರು 3-1 ರಿಂದ ಸರಣಿ ಸೋಲು ಅನುಭವಿಸಿದರು.

ಸಂಕ್ಷಿಪ್ತ ಸ್ಕೋರ್​ ಪಟ್ಟಿ: ಆಸ್ಟ್ರೇಲಿಯಾ: 20 ಓವರ್​ಗಳಲ್ಲಿ 3 ವಿಕೆಟ್​ಗೆ 188 ರನ್ (ಎಲ್ಲಿಸ್​ ಪೆರ್ರಿ 72*, ಅಶ್ಲೀಗ್​ ಗಾರ್ಡ್ನರ್ 42: ದೀಪ್ತಿ ಶರ್ಮಾ 2/35)

ಭಾರತ: 20 ಓವರ್​ಗಳಲ್ಲಿ 181 ರನ್​ (ಹರ್ಮನ್​ ಪ್ರೀತ್ ಕೌರ್ 46, ರಿಚಾ ಗೋಶ್ 40*: ಅಶ್ಲೀಗ್​ ಗಾರ್ಡ್ನರ್ 2/20, ಅಲಾನಾ ಕಿಂಗ್ 2/23)

ಇದನ್ನೂ ಓದಿ:ಸ್ಪೇನ್ ಮಣಿಸಿ ಹಾಕಿ ನೇಷನ್ಸ್​ ಕಪ್ ಗೆದ್ದ ಭಾರತದ ವನಿತೆಯರು, ಪ್ರೊ ಲೀಗ್​ಗೆ ಅರ್ಹತೆ

Last Updated : Dec 18, 2022, 10:58 AM IST

ABOUT THE AUTHOR

...view details