ಕರ್ನಾಟಕ

karnataka

ETV Bharat / sports

ಹೋಳಿ ಹಬ್ಬದ ಬಣ್ಣದಲ್ಲಿ ಮಿಂದೆದ್ದ ಮಹಿಳಾ ಕ್ರಿಕೆಟ್​ ತಾರೆಯರು - ಈಟಿವಿ ಭಾರತ ಕನ್ನಡ

ಕ್ರಿಕೆಟ್​ ಮಹಿಳಾ ಆಟಗಾರರು ಹೋಳಿ ಹಬ್ಬವನ್ನು ಬುಧವಾರ ಅದ್ಧೂರಿಯಾಗಿ ಆಚರಿಸಿದರು.

holy
ಕ್ರಿಕೆಟ್​ ತಾರೆಯರು

By

Published : Mar 9, 2023, 11:03 AM IST

ವುಮೆನ್ಸ್​ ಪ್ರೀಮಿಯರ್​ ಲೀಗ್​ (ಡಬ್ಲ್ಯುಪಿಎಲ್​/ ಮಹಿಳಾ ಐಪಿಎಲ್) ನಲ್ಲಿ ಇದುವರೆಗೆ ಆರು ಪಂದ್ಯಗಳು ನಡೆದಿವೆ. ಬುಧವಾರ ಗುಜರಾತ್​ ಜೈಂಟ್ಸ್​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ನಡುವೆ ಪಂದ್ಯವಿತ್ತು. ಇದರಲ್ಲಿ ಎರಡು ಬಾರಿ ಸೋಲು ಕಂಡಿದ್ದ ಗುಜರಾತ್​ 11 ರನ್​ಗಳ ಜಯ ಸಾಧಿಸಿತು. ಡಬ್ಲ್ಯುಪಿಎಲ್​ನಲ್ಲಿ ಸೋಲು-ಗೆಲುವಿನ ಪೈಪೋಟಿ ಮುಂದುವರೆಯುತ್ತಿದೆ. ಈ ನಡುವೆ ಕ್ರಿಕೆಟ್​ ಮಹಿಳಾಮಣಿಗಳು ಹೋಳಿ ಹಬ್ಬವನ್ನು ಜೋರಾಗಿಯೇ ಆಚರಿಸಿದ್ದಾರೆ.

ವಿದೇಶಿ ಮಹಿಳಾ ಆಟಗಾರರು ಹೆಚ್ಚು ಉತ್ಸಾಹದಿಂದ ಹೋಳಿ ಆಡಿದರು. ಎಲಿಸಾ ಹೀಲಿ, ಶೆಫಾಲಿ ಶರ್ಮಾ, ಹರ್ಮನ್​ ಪ್ರೀತ್​ ಕೌರ್​ ಸೇರಿದಂತೆ ಎಲ್ಲಾ ಆಟಗಾರರು ತಮ್ಮ ತಂಡದ ಆಟಗಾರರ ಜೊತೆ ಬಗೆಬಗೆ ಬಣ್ಣದಲ್ಲಿ ಮಿಂದೆದ್ದರು. ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದರು. ಮುಂಬೈ ಇಂಡಿಯನ್ಸ್​, ಯುಪಿ ವಾರಿಯರ್ಸ್​, ಆರ್​ಸಿಬಿ ಆಟಗಾರರು ಸಾಮಾಜಿಕ ಮಾಧ್ಯಮದಲ್ಲಿ ಹೋಳಿ ಆಚರಣೆಯ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಭಾರತೀಯ ಹಬ್ಬವಾದ ಹೋಳಿಯನ್ನು ಎಲ್ಲರೂ ಖುಷಿಯಿಂದ ಆಚರಿಸುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ:ಮೊದಲ ಜಯ ದಾಖಲಿಸಿದ ಗುಜರಾತ್​ ಜೈಂಟ್ಸ್ : ಆರ್​ಸಿಬಿಗೆ ಸತತ ಮೂರನೇ ಸೋಲು

ಡಬ್ಲ್ಯುಪಿಎಲ್ ಪಾಯಿಂಟ್ಸ್​ ಪಟ್ಟಿ: ಡಬ್ಲ್ಯುಪಿಎಲ್‌ ಪಾಯಿಂಟ್ಸ್ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ತಾನಾಡಿದ ಎರಡು ಪಂದ್ಯಗಳಲ್ಲಿ ಎರಡನ್ನೂ ಗೆದ್ದು 4 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಕೂಡ ಎರಡು ಪಂದ್ಯಗಳನ್ನು ಗೆದ್ದು 4 ಅಂಕಗಳನ್ನು ಪಡೆದಿದೆ. ದೆಹಲಿ ಕ್ಯಾಪಿಟಲ್ಸ್ ರನ್ ರೇಟ್ ಮುಂಬೈ ಇಂಡಿಯನ್ಸ್ ಗಿಂತ ಕಡಿಮೆ ಇದೆ. ಯುಪಿ ವಾರಿಯರ್ಸ್ ಎರಡರಲ್ಲಿ ಒಂದು ಪಂದ್ಯವನ್ನು ಗೆದ್ದು 2 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ ಮತ್ತು ಗುಜರಾತ್ ಜೈಂಟ್ಸ್ ಮೂರು ಪಂದ್ಯಗಳಲ್ಲಿ ಒಂದನ್ನು ಗೆದ್ದು 2 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಅದೇ ರಾಯಲ್ ಚಾಲೆಂಜರ್ಸ್ ತಂಡವು ತನ್ನ ಎಲ್ಲಾ ಮೂರು ಪಂದ್ಯಗಳಲ್ಲಿ ಸೋತು ಶೂನ್ಯ ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ.

ಟೀ ಇಂಡಿಯಾ ಪುರುಷರ ತಂಡದಲ್ಲಿ ಹೋಳಿ ಸಂಭ್ರಮ: ಕೊನೆಯ ಮತ್ತು ನಾಲ್ಕನೇ ಟೆಸ್ಟ್​ ಪಂದ್ಯಕ್ಕಾಗಿ ಭಾರತ ಪುರುಷರ ಕ್ರಿಕೆಟ್ ತಂಡ ಮಾರ್ಚ್​ 8 ರಂದು ಅಹಮದಾಬಾದ್​ ತಲುಪಿತ್ತು. ಅಲ್ಲಿ ಟೀ ಇಂಡಿಯಾ ಹೋಳಿ ಹಬ್ಬವನ್ನು ನಿನ್ನೆ ಭರ್ಜರಿಯಾಗಿ ಆಚರಿಸಿತು. ಅಹಮದಾಬಾದ್​ಗೆ ಬರುವ ಬಸ್​ನಲ್ಲೂ ಅವರು ಹೋಳಿ ಆಚರಣೆ ಮಾಡಿದ್ದರು. ಕ್ರೀಡಾಂಗಣಕ್ಕೆ ತಲುಪಿದ ಬಳಿಕ ನಾಯಕ ರೋಹಿತ್​ ಶರ್ಮಾ ಎಲ್ಲರಿಗೂ ಬಣ್ಣ ಬಳಿದು, ಜೊತೆಯಾಗಿ ಹೋಳಿ ಆಡಿ ಸಂಭ್ರಮಸಿದ್ದರು. ಈ ವಿಡಿಯೋವನ್ನು ಬಿಸಿಸಿಐ ಟ್ವಿಟರ್​ನಲ್ಲಿ ಹಂಚಿಕೊಂಡಿದೆ.

ದೇಶಾದ್ಯಂತ ಕಳೆಗಟ್ಟಿದ ಹೋಳಿ: ದೇಶಾದ್ಯಂತ ಹೋಳಿ ಹಬ್ಬವನ್ನು ಪ್ರತಿ ವರ್ಷ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಯಾವುದೇ ಜಾತಿ ಮತಗಳ ಭೇದವಿಲ್ಲದೆ ಎಲ್ಲರೂ ಜೊತೆಯಾಗಿ ಸೇರಿ ಬಣ್ಣದ ಓಕುಳಿಯಲ್ಲಿ ಮಿಂದೇಳುತ್ತಾರೆ. ಈ ಹಬ್ಬವನ್ನು ವಸಂತ ಮಾಸದಲ್ಲಿ ಆಚರಿಸಲಾಗುತ್ತದೆ. ಜನರು ಬಣ್ಣಗಳನ್ನು ಪರಸ್ಪರ ಎರಚಿ ಹೋಳಿಯನ್ನು ಸಂಭ್ರಮಿಸುತ್ತಾರೆ.

ಇದನ್ನೂ ಓದಿ:4ನೇ ಟೆಸ್ಟ್‌: ಟಾಸ್​ ಗೆದ್ದ ಸ್ಮಿತ್‌ ಪಡೆ ಬ್ಯಾಟಿಂಗ್​; ಭಾರತ-ಆಸೀಸ್​ ಪ್ರಧಾನಿಗಳ 'ಕ್ರಿಕೆಟ್​ ದೋಸ್ತಿ'

ABOUT THE AUTHOR

...view details