ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 2020-21ರ ಸೀನಿಯರ್ ಮಹಿಳಾ ಕ್ರಿಕೆಟರ್ಗಳ ವಾರ್ಷಿಕ ಗುತ್ತಿಗೆಯನ್ನು ಪ್ರಕಟಿಸಿದೆ. ಕರ್ನಾಟಕದ ವೇದಾ ಕೃಷ್ಣಮೂರ್ತಿ ಆಟಗಾರ್ತಿಯರ ಗುತ್ತಿಗೆಯಿಂದ ಹೊರಬಿದ್ದಿದ್ದಾರೆ. ಯುವ ಆಟಗಾರ್ತಿ ರಿಚಾ ಘೋಷ್ ಇದೇ ಮೊದಲ ಬಾರಿಗೆ ಗುತ್ತಿಗೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಎ ಗ್ರೇಡ್ನಲ್ಲಿರುವವರಿಗೆ 50 ಲಕ್ಷರೂ, ಬಿ ಗ್ರೇಡ್ನಲ್ಲಿರುವವರಿಗೆ 30 ಲಕ್ಷ ರೂ ಮತ್ತು ಸಿ ಗ್ರೇಡ್ನಲ್ಲಿರುವವರಿಗೆ 10 ಲಕ್ಷ ರೂ ದೊರೆಯಲಿದೆ. ಒಟ್ಟು 19 ಆಟಗಾರ್ತಿಯರು ಗುತ್ತಿಗೆಯಲ್ಲಿ ಅವಕಾಶ ಪಡೆದಿದ್ದಾರೆ.
ಟಿ-20 ತಂಡದ ನಾಯಕಿಹರ್ಮನ್ ಪ್ರೀತ್ ಕೌರ್, ಎಡಗೈ ಓಪನರ್ ಸ್ಮೃತಿ ಮಂಧಾನ ಮತ್ತು ಹಿರಿಯ ಸ್ಪಿನ್ನರ್ ಪೂನಮ್ ಯಾದವ್ ಎ ಗ್ರೇಡ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಟೆಸ್ಟ್ ಮತ್ತು ಏಕದಿನ ತಂಡದ ನಾಯಕಿ ಮಿಥಾಲಿ ರಾಜ್, ಅನುಭವಿ ಬೌಲರ್ ಜೂಲನ್ ಗೋಸ್ವಾಮಿ, ದೀಪ್ತಿ ಶರ್ಮಾ, ಪೂನಮ್ ರಾವುತ್, ರಾಜೇಶ್ವರಿ ಗಾಯಕ್ವಾಡ್, ಶೆಫಾಲಿ ವರ್ಮಾ, ರಾಧಾ ಯಾದವ್, ಶಿಖಾ ಪಾಂಡೆ, ತಾನಿಯಾ ಭಾಟಿಯಾ ಮತ್ತು ಜಮಿಮಾ ರೋಡ್ರಿಗಸ್ ಬಿ ಗ್ರೇಡ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಮಾನ್ಸಿ ಜೋಶಿ, ಅರುಂಧತಿ ರೆಡ್ಡಿ , ಪೂಜಾ ವಸ್ತ್ರಾಕರ್, ಹರ್ಲೀನ್ ಡಿಯೋಲ್, ಪ್ರಿಯಾ ಪೂನಿಯಾ, ರಿಚಾ ಘೋಷ್ ಸಿ ಗುಂಪಿನಲ್ಲಿದ್ದಾರೆ.
ಕೆಲವು ಪ್ರಸಿದ್ಧ ಆಟಗಾರ್ತಿಯರಾದ ವೇದಾ ಕೃಷ್ಣ ಮೂರ್ತಿ, ಏಕ್ತಾ ಬಿಷ್ತ್, ಡಿ ಹೇಮಲತಾ ಮತ್ತು ಅಂಜು ಪಾಟೀಲ್ ಈ ವಾರ್ಷಿಕ ಗುತ್ತಿಗೆ ಕಳೆದುಕೊಂಡಿದ್ದಾರೆ. ಈ ಗುತ್ತಿಗೆಯ ಅವಧಿ ಅಕ್ಟೋಬರ್ 2020ರಿಂದ ಸೆಪ್ಟೆಂಬರ್ 2021ರವರೆಗಿರಲಿದೆ.
ಇದನ್ನು ಓದಿ:ಮಾಜಿ ಕ್ರಿಕೆಟರ್ ತಾಯಿಯ ಚಿಕಿತ್ಸೆಗೆ 6.77 ಲಕ್ಷ ರೂ. ನೀಡಿ ಹೃದಯ ವೈಶಾಲ್ಯತೆ ಮೆರೆದ ಕೊಹ್ಲಿ