ಬರೋಡ :ವಿಜಯ ಹಜಾರೆ ಟ್ರೋಫಿಗೆ ವಾರವಿರುವಾಗ ಭಾರತ ತಂಡದ ಆಲ್ರೌಂಡರ್ ಕೃನಾಲ್ ಪಾಂಡ್ಯ ಬರೋಡ ಕ್ರಿಕೆಟ್ ತಂಡದ ನಾಯಕತ್ವವನ್ನು ತ್ಯಜಿಸಿ ಅಚ್ಚರಿ ಮೂಡಿಸಿದ್ದಾರೆ.
ಬರೋಡ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಅಜಿತ್ ಲೇಲೆ ಕೃನಾಲ್ ಪಾಂಡ್ಯ ನಾಯಕತ್ವವನ್ನು ತ್ಯಜಿಸಿರುವ ಸುದ್ದಿಯನ್ನು ಎಎನ್ಐಗೆ ಖಚಿತಪಡಿಸಿದ್ದಾರೆ. ಆದರೆ, ಅವರು ಒಬ್ಬ ಆಟಗಾರನಾಗಿ ತಂಡಕ್ಕೆ ಲಭ್ಯರಿರುತ್ತಾರೆ ಎಂದು ಅವರು ಹೇಳಿದ್ದಾರೆ.
"ಹೌದು ಅವರು ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಅವರು ಬಿಸಿಎ ಪ್ರೆಸಿಡೆಂಟ್ಗೆ ಮಾತ್ರ ಇಮೇಲ್ ಕಳುಹಿಸಿದ್ದಾರೆ. ನನಗೆ ಅದು ಬಂದಿಲ್ಲ. ಅಧ್ಯಕ್ಷರು ಅವರ ರಾಜೀನಾಮೆ ವಿಷಯವನ್ನು ಘೋಷಿಸಿದ್ದಾರೆ ಎಂದು ಅಜಿತ್ ತಿಳಿಸಿದ್ದಾರೆ.