ನವದೆಹಲಿ: ಪಾಕಿಸ್ತಾನ ವಿರುದ್ಧದ ಗೆಲುವಿಗಾಗಿ ಟೀಂ ಇಂಡಿಯಾವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ವಿಶೇಷವಾಗಿ ಪ್ರಧಾನಿ ಮೋದಿ ತಮ್ಮ ಟ್ವೀಟ್‌ನಲ್ಲಿ ವಿರಾಟ್ ಕೊಹ್ಲಿಯ ಅದ್ಭುತ ಇನ್ನಿಂಗ್ಸ್ ಬಗ್ಗೆ ಕೊಂಡಾಡಿದ್ದಾರೆ. ವಿರಾಟ್ ಅಮೋಘ ಪ್ರದರ್ಶನ ನೀಡಿದ್ದಾರೆ ಎಂದು ಹೊಗಳಿದ್ದಾರೆ.
ಪಾಕಿಸ್ತಾನ ವಿರುದ್ಧ ಭಾರತ ತಂಡ ಗೆಲುವಿನ ನಂತರ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. 'ಟೀಮ್ ಇಂಡಿಯಾಕ್ಕೆ ಅದ್ಭುತ ಗೆಲುವು! ಇಂದಿನ ಶ್ರೇಷ್ಠ ಪ್ರದರ್ಶನಕ್ಕಾಗಿ ಭಾರತ ತಂಡಕ್ಕೆ ಅಭಿನಂದನೆಗಳು. ವಿರಾಟ್ ಕೊಹ್ಲಿ ತಮ್ಮ ಅಮೋಘ ಇನ್ನಿಂಗ್ಸ್‌ನಲ್ಲಿ ಗಮನಾರ್ಹ ದೃಢತೆಯನ್ನು ಪ್ರದರ್ಶಿಸಿದರು. ಮುಂದಿನ ಆಟಗಳಿಗೆ ಶುಭಾಶಯಗಳು ಎಂದು ವಿಶೇಷವಾಗಿ ವಿರಾಟ್ ಕೊಹ್ಲಿಗೆ ಟ್ಯಾಗ್ ಮಾಡುವ ಮೂಲಕ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿ, ಟಿ20 ವಿಶ್ವಕಪ್ ಆರಂಭಿಸಲು ಪರಿಪೂರ್ಣ ಮಾರ್ಗ. ದೀಪಾವಳಿ ಆರಂಭ. ಎಂತಹ ಅದ್ಭುತ ಇನ್ನಿಂಗ್ಸ್ ವಿರಾಟ್ ಕೊಹ್ಲಿ. ಇಡೀ ತಂಡಕ್ಕೆ ಅಭಿನಂದನೆಗಳು ಎಂದು ಬರೆದಿದ್ದಾರೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತ ತಂಡದ ಪ್ರದರ್ಶನವನ್ನು ಅಭೂತಪೂರ್ವ ಪ್ರಯತ್ನ ಎಂದು ಬಣ್ಣಿಸಿದರು ಮತ್ತು ವಿರಾಟ್ ಕೊಹ್ಲಿ ಅವರ ಅತ್ಯುತ್ತಮ ಇನ್ನಿಂಗ್ಸ್ ಅನ್ನು ಶ್ಲಾಘಿಸಿದರು. ಇಂದು ಮೆಲ್ಬೋರ್ನ್‌ನಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾದ ಅಪೂರ್ವ ಪ್ರಯತ್ನ. ವಿರಾಟ್ ಕೊಹ್ಲಿ ತಮ್ಮ ಜೀವನದ ಅತ್ಯುತ್ತಮ ಇನ್ನಿಂಗ್ಸ್‌ಗಳಲ್ಲಿ ಒಂದನ್ನು ಆಡಿದ್ದಾರೆ. ಈ ಅದ್ಭುತ ಗೆಲುವು ಪ್ರಪಂಚದಾದ್ಯಂತದ ಎಲ್ಲ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಸಂತೋಷಪಡಿಸಿದೆ. ತಂಡಕ್ಕೆ ನನ್ನ ಅಭಿನಂದನೆಗಳು ಎಂದು ಕೇಂದ್ರ ರಕ್ಷಣಾ ಸಚಿವರು ಟ್ವೀಟ್ ಮಾಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಪಾಕಿಸ್ತಾನದ ವಿರುದ್ಧ ಅದ್ಭುತ ಗೆಲುವಿಗಾಗಿ ಟೀಂ ಇಂಡಿಯಾವನ್ನು ಅಭಿನಂದಿಸಿದ್ದಾರೆ. ಇಂದು ಮೆಲ್ಬೋರ್ನ್‌ನಲ್ಲಿ ಪಾಕಿಸ್ತಾನ ವಿರುದ್ಧದ ಈ ಅದ್ಭುತ ಗೆಲುವಿಗಾಗಿ ಭಾರತ ತಂಡಕ್ಕೆ ಅಭಿನಂದನೆಗಳು. ವಿರಾಟ್ ಕೊಹ್ಲಿ ಐತಿಹಾಸಿಕ ಇನ್ನಿಂಗ್ಸ್ ಆಗಿದೆ. ಇತರ ಪಂದ್ಯಗಳಿಗೆ ಶುಭವಾಗಲಿ ಎಂದು ನಡ್ಡಾ ಟ್ವೀಟ್ ಮಾಡಿದ್ದಾರೆ. .
ಭಾನುವಾರದಂದು ಭಾರತವು ಟಿ20 ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿದೆ. ಪಾಕಿಸ್ತಾನ ನೀಡಿದ 160 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡದ ಆರಂಭ ಅತ್ಯಂತ ಕಳಪೆಯಾಗಿತ್ತು. ಭಾರತ 31 ರನ್‌ಗಳಿಗೆ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ, ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಅವರ ಜವಾಬ್ದಾರಿಯುತ ಆಟದಿಂದ ಭಾರತ ಗೆಲುವಿನ ಹೊಸ್ತಿಲು ತಲುಪಿತು.
ಮಾಜಿ ನಾಯಕ ವಿರಾಟ್ ಕೊಹ್ಲಿ ಅಬ್ಬರದ ಆಟವಾಡುತ್ತಲೇ ಪಾಕಿಸ್ತಾನ ವಿರುದ್ಧ ಭಾರತ ಐತಿಹಾಸಿಕ ಗೆಲುವಿಗೆ ಸಾಕ್ಷಿಯಾದರು. ನಿನ್ನೆ ನಡೆದ ಪಂದ್ಯದಲ್ಲಿ ಕೊಹ್ಲಿ 53 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿದರು. ಅವರು ತಮ್ಮ ಗೆಲುವಿನ ಇನ್ನಿಂಗ್ಸ್‌ನಲ್ಲಿ 6 ಬೌಂಡರಿಗಳು ಮತ್ತು 4 ಸಿಕ್ಸರ್‌ಗಳನ್ನು ಬಾರಿಸಿದ್ದು, ಪಂದ್ಯದ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು. ಪಂದ್ಯದ ನಂತರ, 'ಇದು ಹೇಗೆ ಸಂಭವಿಸಿತು ಎಂದು ನನಗೆ ತಿಳಿದಿಲ್ಲ, ಭಾವನೆಯನ್ನು ವಿವರಿಸಲು ನನ್ನ ಬಳಿ ಪದಗಳಿಲ್ಲ' ಎಂದು ಹೇಳಿದರು. ಪಾಕ್ ವಿರುದ್ಧದ ಗೆಲುವಿಗಾಗಿ ಟೀಂ ಇಂಡಿಯಾವನ್ನು ಅಭಿನಂದಿಸಿದ ಪ್ರಧಾನಿ ಮೋದಿ, ಕೊಹ್ಲಿಯನ್ನು ಹೊಗಳಿದ್ದಾರೆ.
ಜೋಹಾನ್ಸ್‌ಬರ್ಗ್, ಮೀರ್‌ಪುರ್, ಕೊಲಂಬೊ, ಕೊಲ್ಕತ್ತಾ, ಬರ್ಮಿಂಗ್‌ಹ್ಯಾಮ್, ಅಡಿಲೇಡ್, ಲಂಡನ್ ಮತ್ತು ಮ್ಯಾಂಚೆಸ್ಟರ್‌ನಲ್ಲಿ ಭಾರತ ವಿರುದ್ಧ ಪಾಕಿಸ್ತಾನದ ಪಂದ್ಯಗಳಲ್ಲಿ ನೀವು 'ಜನ ಗಣ ಮನ' ಕೇಳಿದ್ರೆ, ಭಾನುವಾರ ಮೆಲ್ಬೋರ್ನ್ ಕ್ರಿಕೆಟ್ ಮೈದಾನದ (ಎಂಸಿಜಿ) ವಾತಾವರಣವು ವಿಭಿನ್ನವಾಗಿತ್ತು. ಮೈದಾನದಲ್ಲಿದ್ದ 90,293 ಜನರಲ್ಲಿ ಕನಿಷ್ಠ 60,000 ಮಂದಿ ಭಾರತೀಯರಾಗಿರುವುದು ಗಮನಾರ್ಹ..
ಓದಿ:ನೋಬಾಲ್ ವಿವಾದ.. ಅಂಪೈರ್ ತೀರ್ಪಿಗೆ ಪಿಸಿಬಿ ಮುಖ್ಯಸ್ಥ ರಮೀಜ್ ರಾಜಾ ಆಕ್ಷೇಪ