ನವದೆಹಲಿ:ಫೆಬ್ರವರಿ 10ರಿಂದ ರಣಜಿ ಟ್ರೋಪಿ ಆರಂಭವಾಗಲಿದ್ದು, ಲಯ ಕಳೆದುಕೊಂಡು ಟೀಮ್ ಇಂಡಿಯಾದಿಂದ ಹೊರಬೀಳುವ ಭೀತಿ ಎದುರಿಸುತ್ತಿರುವ ಹಿರಿಯ ಬ್ಯಾಟರ್ಗಳಾದ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆಗೆ ಫಾರ್ಮ್ಗೆ ಮರಳುವುದಕ್ಕೆ ಅದ್ಭುತ ಅವಕಾಶ ಸಿಕ್ಕಂತಾಗಿದೆ.
ಮಾರ್ಚ್ ಮೊದಲ ವಾರದಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಆರಂಭವಾಗಲಿದ್ದು, ಇದಕ್ಕೂ ಮುನ್ನ ನಡೆಯುವ ರಣಜಿ ಪಂದ್ಯಗಳಲ್ಲಿ ಈ ಇಬ್ಬರು ಅನುಭವಿ ಬ್ಯಾಟರ್ಗಳ ದೊಡ್ಡ ಶತಕ ಸಿಡಿಸಿದರೆ ತಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಕುಂಟುತ್ತಾ ಸಾಗುತ್ತಿರುವ ಅವರ ವೃತ್ತಿ ಜೀವನವನ್ನು ಸರಿದಾರಿಗೆ ತಂದುಕೊಳ್ಳುವ ಅವಕಾಶ ಇದೆ.
ರಣಜಿ ಪ್ಲೇಟ್ ಗುಂಪಿನ ಪಂದ್ಯಗಳು ಫೆಬ್ರವರಿ 10ರಿಂದ ಆರಂಭವಾದರೆ, ಎಲೈಟ್ ಗುಂಪುಗಳ ಪಂದ್ಯ ಫೆಬ್ರವರಿ 16ರಿಂದ ಆರಂಭವಾಗಲಿದೆ. ಶ್ರೀಲಂಕಾ ಸರಣಿಗೂ ಮುನ್ನ ಪೂಜಾರ ಮತ್ತು ರಹಾನೆಗೆ 2 ಪಂದ್ಯಗಳಲ್ಲಿ ಆಡುವ ಅವಕಾಶ ಸಿಗುತ್ತದೆ. ಈಗಾಗಲೆ ಈ ಹಿರಿಯ ಬ್ಯಾಟರ್ಗಳು ತಮ್ಮ ತಮ್ಮ ರಣಜಿ ತಂಡಗಳ ಜೊತೆಗೆ ತರಬೇತಿಯನ್ನೂ ಕೂಡ ಆರಂಭಿಸಿದ್ದಾರೆ. ವಿಶೇಷವೆಂದರೆ ಮುಂಬೈ ಮತ್ತು ಸೌರಾಷ್ಟ್ರ ತಂಡಗಳು ಒಮದೇ ಗುಂಪಿನಲ್ಲಿದ್ದು ಅಹ್ಮದಾಬಾದ್ನಲ್ಲಿ ನಡೆಯಲಿದ್ದು, ಈ ಇಬ್ಬರು ಬ್ಯಾಟರ್ಗಳು ಎದುರಾಳಿಗಳಾಗಿ ಕಣಕ್ಕಿಳಿಯದಿದ್ದಾರೆ.