ಸೌಥಾಂಪ್ಟನ್(ಇಂಗ್ಲೆಂಡ್):ಟೀಂ ಇಂಡಿಯಾದ ವಿರುದ್ಧ ಗೆದ್ದಿರುವುದು ಅತ್ಯಂತ ವಿಶೇಷವಾಗಿದೆ. ಈ ಜರ್ನಿಯಲ್ಲಿ ನಾವು ಎಲ್ಲಾ ಸಮಯದಲ್ಲೂ ಸ್ಟಾರ್ ಆಟಗಾರರನ್ನು ಹೊಂದಿರಲಿಲ್ಲ ಎಂದು ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ತನ್ನ ತಂಡದ ಆಟಗಾರರನ್ನು ಹೊಗಳಿದರು.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಅಮೋಘ ಗೆಲುವು ಸಾಧಿಸಿದ ನಂತರ ಅವರು ಮಾತನಾಡಿದರು. ನಾನು ಅಲ್ಪಾವಧಿಗೆ ನ್ಯೂಜಿಲೆಂಡ್ ಕ್ರಿಕೆಟ್ ಟೀಂನ ಭಾಗವಾಗಿದ್ದೇನೆ. ಟೆಸ್ಟ್ ಚಾಂಪಿಯನ್ಸ್ಶಿಪ್ ಅತ್ಯಂತ ವಿಶೇಷವಾದ ಭಾವನೆ ತಂದುಕೊಡುತ್ತಿದೆ ಎಂದರು.
ಇತಿಹಾಸದಲ್ಲಿ ಮೊದಲ ಬಾರಿಗೆ ನ್ಯೂಜಿಲೆಂಡ್ ತಂಡ ಟೆಸ್ಟ್ ಚಾಂಪಿಯನ್ ಪಟ್ಟ ಗಳಿಸಿದೆ. ಎರಡು ವರ್ಷಗಳಿಂದ ನಮ್ಮ 22 ಆಟಗಾರರು ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ. ಅವರ ಆಟವನ್ನು ಅವರು ಆಡಿದ್ದಾರೆ. ನಾವೆಲ್ಲಾ ಸವಿಯಲು ಇದೊಂದು ವಿಶೇಷ ಸಾಧನೆ ಎಂದು ಕೇನ್ ಸಂತಸ ವ್ಯಕ್ತಪಡಿಸಿದರು.