ಮುಂಬೈ : ಜೂನ್ 18ರಂದು ಸೌತಾಂಪ್ಟನ್‌ನಲ್ಲಿ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡಲು ಅವಕಾಶ ನೀಡಿದರೆ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಡಾಟ್ ಎಸೆತಗಳಿಂದ ನಿರಾಸೆಗೊಳಿಸಲು ಪ್ರಯತ್ನಿಸುವುದಾಗಿ ಭಾರತ ಕ್ರಿಕೆಟ್ ತಂಡದ ಬೌಲರ್ ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.
ನಾನು ನಿರ್ದಿಷ್ಟ ಡೆಲಿವರಿಗಳ ಮೂಲಕ ಬೌಲಿಂಗ್ ಮಾಡಲು ಯತ್ನಿಸುತ್ತೇನೆ. ನ್ಯೂಜಿಲೆಂಡ್ ತಂಡದಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್ ಕೇನ್ ವಿಲಿಯಮ್ಸನ್ ವಿರುದ್ಧ ಡಾಟ್ ಬಾಲ್ ಡೆಲಿವರಿ ಮಾಡುವ ಕಡೆ ನಾನು ಗಮನ ಹರಿಸುತ್ತೇನೆ. ಇದು ಬಿರುಸಿನ ಆಟಕ್ಕೆ ಪ್ರಚೋದಿಸುತ್ತದೆ ಎಂದು ಸಿರಾಜ್ ಹೇಳಿದ್ದಾರೆ.