ಕರ್ನಾಟಕ

karnataka

ETV Bharat / sports

2022ರ ಐಪಿಎಲ್​ನಲ್ಲಿ ಭಾಗವಹಿಸುವಿಕೆಯ ಬಗ್ಗೆ ಕುತೂಹಲಕಾರಿ ಹೇಳಿಕೆ ನೀಡಿದ ಎಂಎಸ್​ ಧೋನಿ - ಚೆನ್ನೈ ಸೂಪರ್ ಕಿಂಗ್ಸ್ ಧೋನಿ

ಚೆನ್ನೈನಲ್ಲಿ ನಡೆದ ಖಾಸಗಿ ಕಾರ್ಯಕ್ರಮದ ವೇಳೆ 2022ರ ಐಪಿಎಲ್ ಕುರಿತು ಮಾತನಾಡಿದ ಅವರು, ನಾನು ಅದರ ಬಗ್ಗೆ ಚಿಂತಿಸುತ್ತೇನೆ, ಅದಕ್ಕೆ ತುಂಬಾ ಸಮಯವಿದೆ. ಪ್ರಸ್ತುತ ನಾವು ಇನ್ನೂ ನವೆಂಬರ್​ನಲ್ಲಿದ್ದೇವೆ. ಐಪಿಎಲ್‌ 2022ರ ಆವೃತ್ತಿ ಏಪ್ರಿಲ್‌ನಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ..

Dhoni on IPL 2022
ಎಂಎಸ್ ಧೋನಿ 2022 ಐಪಿಎಲ್

By

Published : Nov 20, 2021, 8:30 PM IST

Updated : Nov 21, 2021, 4:12 PM IST

ಚೆನ್ನೈ :2022ರ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಬೇಕೆ ಅಥವಾ ಬೇಡವೇ ಎಂಬುದರ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಅದಕ್ಕೆ ಇನ್ನೂ ಸಮಯವಿದೆ ಎಂದು ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಶನಿವಾರ ತಿಳಿಸಿದ್ದಾರೆ.

ನಗರದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಸನ್ಮಾನ ಕಾರ್ಯಕ್ರಮದ ವೇಳೆ 2022ರ ಐಪಿಎಲ್(IPL 2022) ಕುರಿತು ಮಾತನಾಡಿದ ಅವರು, ನಾನು ಅದರ ಬಗ್ಗೆ ಚಿಂತಿಸುತ್ತೇನೆ. ಅದಕ್ಕೆ ತುಂಬಾ ಸಮಯವಿದೆ. ಪ್ರಸ್ತುತ ನಾವು ಇನ್ನೂ ನವೆಂಬರ್​ನಲ್ಲಿದ್ದೇವೆ. ಐಪಿಎಲ್‌ 2022ರ ಆವೃತ್ತಿ ಏಪ್ರಿಲ್‌ನಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ.

ಎಂಎಸ್​ ಧೋನಿ

"ನಾನು ಯಾವಾಗಲೂ ನನ್ನ ಕ್ರಿಕೆಟ್ ಜೀವನದ ಬಗ್ಗೆ ಪ್ಲ್ಯಾನ್ ಮಾಡಿಕೊಂಡಿದ್ದೇನೆ. ನನ್ನ ಕೊನೆಯ ತವರು ಏಕದಿನ ಪಂದ್ಯ ರಾಂಚಿಯಲ್ಲಿ ನಡೆದಿತ್ತು. ಇದೀಗ ನನ್ನ ಕೊನೆಯ T20 ಪಂದ್ಯವು ಚೆನ್ನೈನಲ್ಲಿ ಆಡುವ ವಿಶ್ವಾಸವಿದೆ. ಆದರೆ, ಅದು ಮುಂದಿನ ವರ್ಷವೋ ಅಥವಾ ಮುಂದಿನ ಐದು ವರ್ಷಗಳ ಬಳಿಕವೋ ಎಂಬುದು ನಿಜವಾಗಿಯೂ ತಿಳಿದಿಲ್ಲ" ಎಂದು ಧೋನಿ ಹೇಳಿದ್ದಾರೆ.

2021ರ ಆವೃತ್ತಿಯ ಐಪಿಎಲ್​ ಟ್ರೋಪಿಯನ್ನು ಚೆನ್ನೈ ಸೂಪರ್ ಕಿಂಗ್ಸ್(​Chennai Super Kings) ಗೆದ್ದ ಮೇಲೆ ಧೋನಿ ಮುಂದಿನ ಆವೃತ್ತಿಯಲ್ಲಿ ಆಡಲಿದ್ದಾರೆ ಎನ್ನುವುದು ಭಾರತೀಯ ಕ್ರಿಕೆಟ್​ನಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಆದರೆ, ಟ್ರೋಫಿ ಗೆದ್ದ ನಂತರ ನಾನು ವಿದಾಯದ ಪಂದ್ಯವನ್ನು ಚೆನ್ನೈನಲ್ಲಿ ಅಲ್ಲಿನ ಅಭಿಮಾನಿಗಳ ಮುಂದೆ ನಿವೃತ್ತಿ(Dhoni retirement) ಹೇಳುವುದಕ್ಕೆ ಬಯಸುತ್ತೇನೆ ಎಂದಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ಆಡಳಿತ ಮಂಡಳಿ ಕೂಡ ಧೋನಿಯನ್ನು ಮೊದಲ ಆಟಗಾರನಾಗಿಯೇ ಉಳಿಸಿಕೊಳ್ಳಲು ಬಯಸುತ್ತೇವೆ ಎಂದು ಈಗಾಗಲೇ ಬಹಿರಂಗವಾಗಿ ಘೋಷಿಸಿದೆ.

ಆದರೆ, ವಿಕೆಟ್ ಕೀಪಿಂಗ್ ಬಿಟ್ಟು ಬ್ಯಾಟಿಂಗ್​ನಲ್ಲಿ ಸಮಸ್ಯೆ ಎದುರಿಸುತ್ತಿರುವ ಧೋನಿ ಅಂತಿಮವಾಗಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದು 2022ರ ಹರಾಜು ಪ್ರಕ್ರಿಯೆ ವೇಳೆ ತಿಳಿಯಲಿದೆ.

ಇದನ್ನು ಓದಿ:ನಮ್ಮ ಪಾಲಿನ ಆಪತ್ಪಾಂಧವ, ನಾವು ಸದಾ ನಿಮಗೆ ಚಿರಋಣಿ.. ಟ್ವೀಟ್​ ಮೂಲಕ ಆರ್​ಸಿಬಿಯಿಂದ 360 ಕೃತಜ್ಞತೆ..

Last Updated : Nov 21, 2021, 4:12 PM IST

ABOUT THE AUTHOR

...view details