ನವದೆಹಲಿ: ಪ್ರಸ್ತುತ ಫಾರ್ಮ್ ಪ್ರೇರೇಪಿಸದಿದ್ದರೂ ನಾಯಕ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಅನಿವಾರ್ಯವಾಗಲಿದ್ದಾರೆ. ಆದರೆ ತಂಡದ ಲಾಭಕ್ಕಾಗಿ ಅವರ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಬಹುದು ಎಂದು ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
2022ರ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಫಾರ್ಮ್ನ ಸೂಚಕವಾಗಿದ್ದರೂ ಈ ಹಂತದಲ್ಲಿ ಚೇತನ್ ಶರ್ಮಾ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿ ಬದಲಾವಣೆಯ ಯಾವುದೇ ಅಲೋಚನೆಗಳನ್ನು ಹೊಂದಿಲ್ಲ. ನಾಯಕ ರೋಹಿತ್ , ಉಪನಾಯಕ ರಾಹುಲ್ ಮತ್ತು ತಂಡದ ಪ್ರೀಮಿಯರ್ ಬ್ಯಾಟರ್ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮೆಗಾ ಈವೆಂಟ್ನಲ್ಲಿ ಅಗ್ರ 3 ಕ್ರಮಾಂಕದಲ್ಲಿ ಆಡಲು ಸಿದ್ಧರಾಗಿದ್ದಾರೆ.
ಆದರೆ ಕಳೆದ ಟಿ20 ವಿಶ್ವಕಪ್‌ನಲ್ಲಿ ಭಾರತದ ಈ ಬ್ಯಾಟಿಂಗ್ ಕ್ರಮಾಂಕ ತಂಡಕ್ಕೆ ಸೂಕ್ತ ಫಲಿತಾಂಶವನ್ನು ತರಲಿಲ್ಲ. ಈ ಮೂವರು ಟಾಪ್ ಬ್ಯಾಟರ್ಗಳು ಮೊದಲು ಸೆಟ್ ಆಗಿ ನಂತರ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುವ ಒಂದೇ ತರಹದ ಬ್ಯಾಟಿಂಗ್ ಶೈಲಿ ಭಾರೀ ಟೀಕೆಗೆ ಗುರಿಯಾಗಿತ್ತು. ಅಂದಿನಿಂದ ರೋಹಿತ್ ಬ್ಯಾಟಿಂಗ್ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುಲು ಬಯಸುತ್ತಿದ್ದಾರೆ. ಆದರೆ ಪ್ರಸ್ತುತ ಐಪಿಎಲ್ನಲ್ಲಿ 123ರ ಸ್ಟ್ರೈಕ್ರೇಟ್ನಲ್ಲಿ 9 ಪಂದ್ಯಗಳಿಂದ ಕೇವಲ 155 ರನ್ಗಳಿಸಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ.
ಇನ್ನೂ ಕೊಹ್ಲಿ ಅತ್ಯಂತ ಕಳಪೆ ಫಾರ್ಮ್ನಲ್ಲಿದ್ದಾರೆ. ಟೂರ್ನಿಯಲ್ಲಿ 10 ಪಂದ್ಯಗಳಿಂದ 116ರ ಸ್ಟ್ರೈಕ್ರೇಟ್ನಲ್ಲಿ 186 ರನ್ಗಳಿಸಿದ್ದಾರೆ. ಇನ್ನು ರಾಹುಲ್ ಲಖನೌ ಸೂಪರ್ ಜೈಂಟ್ಸ್ ಪರ 145ರ ಸ್ಟ್ರೈಕ್ರೇಟ್ನಲ್ಲಿ 451 ರನ್ಗಳಿಸಿ ವಿಜೃಂಭಿಸಿದ್ದಾರೆ. ಆದರೆ ರಾಹುಲ್ ಅವರ ಪವರ್ ಪ್ಲೇ ಆಟ ನಿಜಕ್ಕೂ ಉತ್ತಮವಾಗಿಲ್ಲ. ಅವರು ಟೂರ್ನಿಯಲ್ಲಿ ಪವರ್ ಪ್ಲೇ ಓವರ್ಗಳಲ್ಲಿ 10 ಪಂದ್ಯಗಳಿಂದ 55 ಡಾಟ್ ಬಾಲ್ಗಳನ್ನಾಡಿದ್ದಾರೆ. ಅವರು ಒಟ್ಟಾರೆ ಪವರ್ ಪ್ಲೇನಲ್ಲಿ 123 ಎಸೆತಗಳಲ್ಲಿ 141 ರನ್ಗಳಿಸಿದ್ದಾರೆ. ಅಂದರೆ ಟಿ20ಯಲ್ಲಿ ಬ್ಯಾಟರ್ಗಳ ಪಾಲಿನ ಬಂಪರ್ ಓವರ್ಗಳಲ್ಲಿ ಅವರ ಸ್ಟ್ರೈಕ್ರೇಟ್ ಕೇವಲ111.90 ಈ ಓವರ್ಗಳಲ್ಲಿ ಅವರು 15 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸಿದ್ದಾರೆ.
ಈ ಮೂವರಲ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಅಗತ್ಯವಿದೆಯೇ? ಎಂಬ ವಿಚಾರವಾಗಿ ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ಕೆ ಪ್ರಸಾದ್ ಮತ್ತು ಅವರ ಸಹ ಆಯ್ಕೆಗಾರ ದೇವಾಂಗ್ ಗಾಂಧಿ ಮತ್ತು ಮಾಜಿ ವಿಕೆಟ್ ಕೀಪರ್ ದೀಪ್ ದಾಸ್ ಗುಪ್ತಾ ಅವರು ತಮ್ಮದೇ ಆದ ರೀತಿಯಲ್ಲಿ ವಿವರಿಸಿದ್ದಾರೆ.