ಹೈದರಾಬಾದ್(ಡೆಸ್ಕ್) :ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಡೇವಿಡ್ ವಾರ್ನರ್ ತಾವೂ ಐಪಿಎಲ್ನಲ್ಲಿ ಕೇನ್ ವಿಲಿಯಮ್ಸನ್ ಅವರ ಜೊತೆಗೆ ಸನ್ರೈಸರ್ಸ್ ತಂಡದಲ್ಲಿ ಕ್ರಿಕೆಟ್ ಆಡುವುದನ್ನು ಸಾಕಷ್ಟು ಮಿಸ್ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ತಂಡದ ಮಾಜಿ ನಾಯಕ ವಾರ್ನರ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವಿಲಿಯಮ್ಸನ್ ಜೊತೆಗಿನ ಸಾಕಷ್ಟು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ನಿಮ್ಮ ಜೊತೆಗೆ ಬ್ರೇಕ್ ಫಾಸ್ಟ್ ಮಾಡುವುದನ್ನು ಮತ್ತು ನಿಮ್ಮ ಜೊತೆಗೆ ಕ್ರಿಕೆಟ್ ಆಡುವುದನ್ನು ಮಿಸ್ ಮಾಡಿಕೊಳ್ಳಲಿದ್ದೇನೆ ಬ್ರದರ್ ಎಂದು ಬರೆದುಕೊಂಡಿದ್ದಾರೆ.
ಇದನ್ನು ಓದಿ:ಆರ್ಸಿಬಿಯಲ್ಲಿ ಸಿಕ್ಕಿದ ಈ ಪಾತ್ರ ನನ್ನ ವೃತ್ತಿಜೀವನವನ್ನೇ ಬದಲಾಯಿಸಿತು: ಹರ್ಷಲ್ ಪಟೇಲ್
2021ರ ಐಪಿಎಲ್ನಲ್ಲಿ ಡೇವಿಡ್ ವಾರ್ನರ್ ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿದ್ದರು. ಜೊತೆಗೆ ತಂಡ ಕೂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿದ್ದರಿಂದ ಫ್ರಾಂಚೈಸಿ ಟೂರ್ನಿ ಮಧ್ಯದಲ್ಲಿ ವಾರ್ನರ್ರನ್ನು ನಾಯಕತ್ವದಿಂದ ಕೆಳಗಿಳಿಸಿ ಕೇನ್ ವಿಲಿಯಮ್ಸನ್ಗೆ ನಾಯಕತ್ವ ನೀಡಿತ್ತು.
2022ರ ಐಪಿಎಲ್ಗೆ ರಿಟೈನ್ ಮಾಡಿಕೊಳ್ಳುವ ವೇಳೆ ಕೂಡ ಕೇನ್ ವಿಲಿಯಮ್ಸನ್ ಜೊತೆಗೆ ಯುವ ಬೌಲರ್ಗಳಾದ ಅಬ್ದುಲ್ ಸಮದ್ ಮತ್ತು ಉಮ್ರಾನ್ ಮಲಿಕ್ರನ್ನು ಮಾತ್ರ ರಿಟೈನ್ ಮಾಡಿಕೊಂಡಿತ್ತು. ಇನ್ನು ಮೆಗಾ ಹರಾಜಿನಲ್ಲಿ ಡೇವಿಡ್ ವಾರ್ನರ್ರನ್ನು ಡೆಲ್ಲಿ ಕ್ಯಾಪಿಟಲ್ಸ್ 6.25 ಕೋಟಿ ರೂ. ನೀಡಿ ಖರೀದಿಸಿತ್ತು.